Divith
Quote by Divith - ಕಾನನದಲ್ಲಿ
ಸುಮವೊಂದು ಅರಳಿ,
ಸುತ್ತಲೂ ಕಂಪು ಹರಡಿದೆ

ಕೆಸರಲ್ಲಿ
ತಾವರೆಯೊಂದು ಅರಳಿ,
ತಲೆಯೆತ್ತಿ ಬೀಗುತ ನಗುತಿದೆ

ಇಬ್ಬನಿ ತಬ್ಬಿದ
ಹಚ್ಚ ಹಸಿರಿನ ಸಿರಿಯಲಿ, 
ಸೂರ್ಯನ ಕಿರಣ ತಾ ನಲಿದಿದೆ

ಧುಮ್ಮಿಕ್ಕುವ 
ಜಲಧಾರೆಯ ಮಡಿಲಲಿ
ಹೊಳೆವ ಮುತ್ತಿನ ರಾಶಿ ಚದುರಿದೆ

ಇಂತಹ ರಮಣೀಯ 
ಪ್ರಕೃತಿಯ ಸೊಬಗು 
ಸವಿದ ಮನಕೆ ಬೆರಗು, ಮೂಡದೆ??!!

ಅಶ್ವಿತಾ ಆನಂದ್  - Made using Quotes Creator App, Post Maker App
0 likes 0 comments