santhosh kumar profile
Creator Profile

santhosh kumar

ಸರಸು

32 Posts
1 Followers
0 Following
S
santhosh kumar
Quote by santhosh kumar - ಸಮಾನತೆ,ಜಾತೀಯತೆ,ಡಾಂಭಿಕ ಭಕ್ತಿ,ಹಿಂದುಳಿದ ವರ್ಗಗಳ
ಹೇಳಿಗೆಗಾಗಿ ಮತ್ತು ಶೋಷಿತರ ಗೌರವಯುತ ಜೀವನಕ್ಕಾಗಿ
ಶ್ರಮಿಸಿದಂತಹ ಶ್ರೇಷ್ಠ ನಾಯಕ, ಮಹಾ
ಸಮಾಜತವಾದಿ,ಪರಮಪೂಜ್ಯರಾದಂತಹ ಬಸವಣ್ಣನವರನ್ನು
ಅಂದಿನ ಶತಮಾನದಲ್ಲಿ ಹೇಗೆ ಅಲ್ಲಿನ ವಿರೋಧಿ ಜನರು 
ಅವರ ತತ್ವ ಮತ್ತು ಸಿದ್ಧಾಂತಗಳನ್ನು ಧಿಕ್ಕರಿಸಿ ಹೇಗೆ ಸಾವಿನ
ದವಡೆಗೆ ನೂಕಿದ್ದರೊ, ಅದೇ ರೀತಿಯಾಗಿ ಇಂದಿನ ಜನರು,
ಅದರಲ್ಲು ಇವರನ್ನು ಪೂಜಿಸುವ, ಆರಾಧಿಸು ಡೋಂಗಿ 
ಭಕ್ತರು ಮತ್ತು ನಾವು ಬಸವಣ್ಣನವರ ಅನುಯಾಯಿಗಳು
ಎಂದುಕೊಂಡು ಇರುವ ಅಸತ್ಯ ಜನರು ಈ ಮಹಾ ನಾಯಕರ
ವ್ಯಕ್ತಿತ್ವ ಮತ್ತು ಸಿದ್ಧಾಂತಗಳನ್ನು ಇಂದಿಗು ಸಹಾ ಜೀವಾಂತವಾಗಿ
ಸುಟ್ಟು ಹಾಕಿತ್ತಿದ್ದಾರೆ.

ಅಂತಹ ನಮ್ಮ ಅತಿನಿಚೇಷ್ಠ ಜನರಿಗು,ಆಡಂಬರದ 
ಭಕ್ತರಿಗು, ಅನುಯಾಯಿಗಳಿಗು, ಮತ್ತು ಇವರ ಹೆಸರಿನಲ್ಲಿ
ಸ್ಥಾಪಿತವಾಗಿ, ಇವರ ತತ್ವ ಸಿದ್ಧಾಂತಗಳನ್ನು ಪಾಲಿಸದೆ ಧಿಕ್ಕರಿಸಿ
ಇರುವ ಸಂಘಸಂಸ್ಥೆಗಳಿಗು,ಇಂದಿಗು ಇವರ ನಾಮ ಮತ್ತು
ಆದರ್ಶ ಜೀವನವನ್ನು ಹೇಳಿಕೊಂಡು, ಜಾತಿ ವ್ಯವಸ್ಥೆಯನ್ನು 
ತಮ್ಮ ತಮ್ಮ ಮನೆಗಳಲ್ಲಿ ಆಚರಿಸುವ, ಅವ್ಯವಸ್ಥಿತದಿಂದ
ಕೂಡಿರುವ ಜನಾಂಗಕ್ಕು ಮತ್ತು ತೋರಿಕೆಯ ಆಚರಣೆಯ
ವ್ಯಕ್ತಿಗಳಿಗು, -ಸಾಮಾಜಿಕ ನ್ಯಾಯದ ಚಿಂತಕ, ಪ್ರಜಾಪ್ರಭುತ್ವದ
ಮೂಲ ಪರಿಪಾಲಕರಾದ, ಭಕ್ತಿ ಬಂಡಾರಿ-
💐''ಪರಮಪೂಜ್ಯ ಶ್ರೀ ಬಸವಣ್ಣನವರ" 💐
ಜಯಂತಿಯ ಶುಭಾಶಯಗಳು
-🌺ಸಂತೋಷ್ ಸರಸು🌺- - Made using Quotes Creator App, Post Maker App
S
santhosh kumar
Quote by santhosh kumar - ಕಪ್ಪು ಮಣ್ಣಿನ‌ ನಾಡು
ಹಸಿರ ನೆಲೆಗಳ ಬೀಡು 
ನಮ್ಮ ಈ ಚಲುವ ಕನ್ನಡನಾಡು..!!
            💛❤️

ಗಂಧದ ಘಮ ಬೀಸುವ
ಗಂಧದಗುಡಿಯ ನಾಡು, 
ಗಂಧರ್ವರು ಆಳಿದ 
ವೀರ ಕಲಿಗಳ ಬೀಡು, 
ನಮ್ಮ ಈ ಕನ್ನಡ ನಾಡು.!
         💛❤️

ಚಿನ್ನವ ಬೆಳೆಯುವ 
ಸಮೃದ್ಧ ಸಿರಿಯ ನಾಡು,
ಪಶ್ಚಿಮ ಘಟ್ಟಗಳ ಪರಿಸರ
ಸೌಂದರ್ಯದ ಬೀಡು,
ನಮ್ಮ ಈ ಕನ್ನಡ ನಾಡು.!
          💛❤️

ಜಾನಪದ ಕಲೆಗಳ 
ವೈಭೋಗದ ಹಿರಿಮೆಯ ನಾಡು,
ವಾಸ್ತುಶಿಲ್ಪ‌‌ ಕಲಾಶೈಲಿಯ 
ದರ್ಪಣ ಸುಂದರಿಯ ಬೀಡು,
ನಮ್ಮ ಈ ಕನ್ನಡ ನಾಡು.!
            💛❤️

ಎರಡು ಸಾವಿರ ವರುಷದ 
ಭಾಷ ಐತಿಹ್ಯದ ನಾಡು,
ಅಷ್ಟ ಜ್ಞಾನಪೀಠವ ಅಪ್ಪಿದ 
ಮುದ್ದಾದ ಕವಿಗಳ ಬೀಡು,
ನಮ್ಮ ಈ ಕನ್ನಡ ನಾಡು.!
           💛❤️

ದಾಸ ಶ್ರೇಷ್ಠರ 
ವಚನ ವಾಗ್ಮಿಗಳ 
ಕವಿ ರತ್ನತ್ರೆಯರ ಸಾಹಿತಿಗಳ ನಾಡು,
ನದಿ ಸಾಗರಗಳ 
ವನ್ಯಸಿರಿ ಧಾಮಗಳ 
ಸಹ್ಯಾದ್ರಿ ಸಂಕುಲಗಳ ಬೀಡು,
ನಮ್ಮ ಈ ಕನ್ನಡ ನಾಡು.!
          💛❤️

ಮಲೆ ಶಿಖರಗಳ 
ಗುಡಿ ಗೋಪುರಗಳ 
ಸೊಬಗಿನ ಅರಮನೆಗಳ ನಾಡು,
ಸಾಂಸ್ಕೃತಿಕ ಆಚರಣೆಯ 
ವಿವಿಧ ಖಾದ್ಯಗಳ 
ಸವಿರುಚಿಯಾದ ನೆಲೆಗಳ ಬೀಡು,
ನಮ್ಮ ಈ ಕನ್ನಡ ನಾಡು.!
          💛❤️

ನಮ್ಮ ನಾಡು
ಕಪ್ಪು ಮಣ್ಣಿನ‌ ನಾಡು
ಹಸಿರ ನೆಲೆಗಳ ಬೀಡು 
ನಮ್ಮ ಈ ಚಲುವ ಕನ್ನಡನಾಡು..!!
       💛❤️-ಸರಸು-💛❤️ - Made using Quotes Creator App, Post Maker App
S
santhosh kumar
Quote by santhosh kumar - ಒಳ್ಳೆಯ ಅಲೋಚನೆಗಳು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುತ್ತದೆ,
ನಮ್ಮ ಬದುಕಿನ ಪ್ರತಿಯೊಂದು ಏಳಿಗೆಗೆ ನಾವೇ ಪಟ್ಟಕಟ್ಟಿ ನಿಲ್ಲಬೇಕೆ ಹೊರೆತು,
ಬೇರೆಯವರು ನಮ್ಮ ಬದುಕನ್ನು ವೃದ್ಧಿಸಲು ಶ್ರಮಿಸುತ್ತಾರೆ ಎಂಬುದು ಮೂರ್ಖತನದ ಖಯಾಲಿ.
ಎಂಬ ಸ್ಪೂರ್ತಿದಾಯಕ ಮಾತುಗಳನ್ನು ಆಡುತ್ತ, ಹಾಗೆಯೇ ಬದುಕನ್ನು ರೂಪಿಸಿಕೊಂಡು, 
ಸಮುದಾಯದ ಎಲ್ಲಾ ಯುವಕರಿಗು ಮಾದರಿಯಾಗಿರುವಿರಿ.

ಉತ್ತಮ ವಾಗ್ಮಿಯಾಗಿ, ಉತ್ತಮ‌ ಬರಹಗಾರರಾಗಿ, ತಮ್ಮ ಹಾಸ್ಯಬರಿತವಾದ ಮಾತುಗಳ ಮೂಲಕ 'ಜೂನಿಯರ್ ಪ್ರಾಣೇಶ್'  ಎಂದೂಎಲ್ಲರ ಹೃದಯದಲ್ಲೂ ಆಸನವನ್ನು ಅಲಂಕರಿಸಿರುವಿರಿ,

ರಾಜಕೀಯ ಕ್ಷೇತ್ರದಲ್ಲಿ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ, ಮತ್ತು ಸಾಮಾಜಿಕ‌ ನ್ಯಾಯದ ಹೋರಾಟಗಾರರಾಗಿ ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ಚಾಮರಾಜ ನಗರ ಜಿಲ್ಲೆಯ ಪೂರ ತಮ್ಮ ಚಾಪನ್ನು ಮೂಡಿಸಿ ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಕಲಾ ವಿಭಾಗಗಳಾದ(ಸೋಬಾನೆ ಪದ, ವಾದ್ಯ ನುಡಿಸುವಿಕೆ, ನೃತ್ಯ, ಕಂಸಾಳೆ, ಜನಪದ ಗೀತೆ ಮುಂತಾದವು) ಎಲ್ಲಾ ತಂಡಗಳನ್ನು ರಾಜ್ಯಮಟ್ಟದ ಕಾರ್ಯಕ್ರಮಗಲ್ಲಿ ಭಾಗವಹಿಸಲು ನೆರವಾಗಿ ಹಲವಾರು ಪ್ರಶಸ್ತಿಗಳನ್ನು ಪಡೆಯಲು ನಿಮ್ಮ ಕಾರ್ಯಕ್ಷಮತೆಯ ಸೇವೆಯು ಅನನ್ಯ.

ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಸಮುದಾಯದ ಪರವಾಗಿ 
ನಿಮ್ಮ ಸೇವೆಯು ಹೀಗೆ ಸದಾ ಕಾಲ ಮುಂದುವರಿಯುತ್ತಿರಲಿ ಎಂದೂ ಆರೈಸುತ್ತ,

ಚರಿತ್ರ ವಿಭಾಗ, 
ಕನ್ನಡ ವಿಶ್ವವಿದ್ಯಾಲಯ ಹಂಪಿ ಯಲ್ಲಿ.
ಸಂಶೋಧನ ವಿಧ್ಯಾರ್ಥಿಯಾಗಿ,
ಮತ್ತು ಇತಿಹಾಸ ಉಪನ್ಯಾಸಕರಾಗಿ 
ಕರ್ತವ್ಯ ನಿರ್ವಹಿಸುತ್ತಿರುವ,
🤝🎊ನಲ್ಮೆಯ ಪ್ರೀತಿಯ ಶ್ರೀಯುತ "ಮಣಿಕಂಠ" ಅಣ್ಣ ರವರಿಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು🎊🎉💖💐 - Made using Quotes Creator App, Post Maker App
S
santhosh kumar
Quote by santhosh kumar - ಸದಾ ಕಾಲವು ಭವಿಷ್ಯದ ಬಗ್ಗೆ ಯೋಚಿಸುತ್ತ,
ದೂರದೃಷ್ಟಿಯ ಮಾತುಗಳನ್ನಾಡುವವರು
ಹತ್ತಿರದ ಸಮಸ್ಯೆಗಳ ಬಗ್ಗೆ ಕುರುಡರಾಗಿರುತ್ತಾರೆ.
ನಾಳೆ ಬರುವುದು ನಾಳೆಯೇ, ಈ ದಿನವನ್ನು
ಸಂತೋಷದಿಂದ ಕಳೆಯುವುದು ಮುಖ್ಯ.
 - ಸೋಪೊಕ್ಲಿಸ್ - - Made using Quotes Creator App, Post Maker App
S
santhosh kumar
Quote by santhosh kumar - !!.ಪೂಜಿಸುವೆವು ನಿನ್ನ ಭೀಮಾ 
ನಾವು ಪೂಜಿಸುವೆವು ನಿನ್ನ.!!

ನಿನ್ನ ಜನನವೇ ಚರಿತ್ರೆ ಭೀಮಾ, 
ಈ ಜಗಕೆ ನಿನ್ನ ಜೀವನವೇ ಚಾರಿತ್ರ್ಯ ಭೀಮಾ...

ಕಷ್ಟ ಅವಮಾನಗಳನ್ನೇ ಕಂಡೆ ಭೀಮಾ,
ಆ ಅವಮಾನಗಳನೆಲ್ಲಾ ಬಹುಮಾನವಾಗಿಸಿ 
ಕೊಂಡೆ ನೀ ಭೀಮಾ...

ಅಸಮಾನತೆಯ ವಿರುದ್ಧ ಸಿಡಿದೆದ್ದೆ ಭೀಮಾ, 
ನೀನು ಸಮಾನತೆಯನ್ನು ಇಡೀ 
ಜಗತ್ತಿಗೆ ಸಾರಿದೆ‌‌ ನೀ ಭೀಮಾ...

ಜಾತೀಯತೆಯನ್ನು ವಿರೋಧಿಸಿದೆ ಭೀಮಾ, 
ನೀನು ಜಾತ್ಯತೀತ ಪದ್ದತಿಯನ್ನು 
ಸರ್ವ ಜನಾಂಗಕ್ಕು ನೀಡಿದೆ ನೀ ಭೀಮಾ...

ವಿಚಾರಗಳನ್ನೇ ವಿಶ್ವಕೋಶ 
ಮಾಡಿಕೊಂಡೆ ಭೀಮಾ, 
ಅನಾಚಾರರಿಗೆ ನಿನ್ನ ನಾಮವನ್ನೇ 
ವಿಶ್ವ ಘೋಷವಾಗಿಸಿದೆ ನೀ ಭೀಮಾ...

ಜನರ ಕಲ್ಯಾಣಕ್ಕಾಗಿ ನಿನ್ನ 
ಜೀವನವನ್ನೇ ಸವೆಸಿದ ಭೀಮಾ,
 ಲೋಕ ಕಲ್ಯಾಣದಲ್ಲಿ ಮತ್ತೇ ಮತ್ತೇ 
ಜೀವಿಸುತ್ತಿರುವ ಕಾಲಜ್ಞಾನಿಯೇ ನೀ ಭೀಮಾ...

ದೀನಾ ದಲಿತರ ಬಾಳಿಗೆ ಬೆಳಕಾದೆ ಭೀಮಾ, 
ಇಂದು ನೊಂದು ಬೆಂದವರ ಬಾಳಿಗೆ 
ದಾರಿ ದೀಪಾವಾದೆ ನೀ ಭೀಮಾ...

ಬಹುಜನರು ಬದುಕು ಕಟ್ಟಿಕೊಳ್ಳಬೇಕೆಂದು 
ನಿನ್ನ ಬಾಳನ್ನೇ ಬಸವಳಿಸಿದೆ ಭೀಮಾ, 
ಇಂದು ಬಹುಜನರ ಪಾಲಿಗೆ 
ಬಾಹುಬಲಿಯ ಶಕ್ತಿಯೇ ನೀ ಭೀಮಾ..

ನಮಗೆಲ್ಲಾ ಜನ್ಮವೆತ್ತವರು 
ನಮ್ಮ ತಂದೆ ತಾಯಿಯರೆ ಭೀಮಾ, 
ಆದರೆ ಈ ಜನ್ಮ ಇಂದು ಸಾರ್ಥಕ 
ಜೀವನವನ್ನು ಹೊಂದಿದೆ ಎಂದರೆ 
ನಿನ್ನ "ಸಂವಿಧಾನ"ದಿಂದಲೇ ಭೀಮಾ...

ಜೈ ಭೀಮಾ ಜೈ ಜೈ ಭೀಮಾ.. 
ನಿನ್ನ ಮಕ್ಕಳು ನಾವುಗಳು ಭೀಮಾ.. 
ನೀ ತೋರಿಟ್ಟ ದಾರಿಲಿ ನಡೆವೆವು ಭೀಮಾ.. 
ನಮ್ಮಗಳ ಮನದ ದೇವರು ಭೀಮಾ.. 
ಜೈ ಭೀಮಾ ಜೈ ಜೈ ಭೀಮಾ.......

🙏🌸-ಸರಸು-🌸🙏 - Made using Quotes Creator App, Post Maker App
S
santhosh kumar
Quote by santhosh kumar - ಹೊಸ ಯುಗವು ಹೊಸ 
ಹರುಷವನ್ನು ತರಲಿ ನಿಮ್ಮ ಬಾಳಿನಲ್ಲಿ.

ನಿಮ್ಮೆಲ್ಲಾ‌ ಬಾಳಿನ ತೊಳಲಾಟಗಳು
ಕೊನೆಕೊಂಡು, ಮಾವಿನ ತಳಿರು
ತೋರಣದ ಹಾಗೆ ಅಚ್ಚ ಹಸಿರಿನಿಂದ
ನಿಮ್ಮ ಬಾಳು ಕಂಗೊಳಿಸಲಿ.

ಹೊಂಗೆಯ ಮರವು ನವ 
ಸಂವತ್ಸರದಲ್ಲಿ ಚಿಗರೊಡೆಯುವ 
ಹಾಗೆ, ನಿಮ್ಮ ಹೊಸ ಹೊಸ
ಯೋಚನೆಗಳು ಮತ್ತು 
ಯೋಜನೆಗಳು ಕಾರ್ಯರೂಪಕ್ಕೆ ಬರಲಿ.

ಕಹಿಯಾದ ಬೇವಿನ ಕೆಟ್ಟ 
ಘಟನೆಗಳೆಲ್ಲಾ ಕೊನೆಗೊಂಡು,
ಸಿಹಿಯಾದ ಸುಖ-ಸಂತೋಷವು 
ಈ ಯುಗಮಾನದಿಂದ ನಿಮ್ಮ 
ಬಾಳಿನಲ್ಲಿ ಬಂದೊದಗಲಿ.🌺

ನೆಚ್ಚಿನ ನಲ್ಮೆಯರೆಲ್ಲರಿಗೂ 
💐🎋🌿"ಯುಗಾದಿ ಹಬ್ಬದ ಹಾರ್ದಿಕ
 ಶುಭಾಶಯಗಳು"🎋🌿💐

🎋ಸರಸು🎋 - Made using Quotes Creator App, Post Maker App
S
santhosh kumar
Quote by santhosh kumar - "ಬದುಕಿನ ಹೋರಾಟದಲ್ಲಿ
ಜವಬ್ದಾರಿ ಇಲ್ಲದವ ಜೀವಂತ ಶವ
ಎಂದು ಸಾರುವ ಯುವ"

ದೊಡ್ಮನೆಯವರ ಸಿನಿಮಾ ಅಲ್ವಾ ಹೇಗಿದ್ರು 
ಅಭಿಮಾನಿಗಳು ನೋಡ್ತಾರೆ ಅನ್ನೋ ನೊಂದ 
ಜೀವಗಳಿಗೆ ಯುವ ಸಿನಿಮಾ ಅರ್ಪಣೆ.

80 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ 
ಒಂದು ಕುಟುಂಬ ನಿರಂತರ ಸೇವೆ ಸಲ್ಲಿಸುತ್ತಿದೆ 
ಅಂದರೆ ಅದಕ್ಕೆ ಮುಖ್ಯ ಕಾರಣ ಶ್ರಮ, ಶ್ರದ್ಧೆ, 
ನಂಬಿಕೆ, ವಿಶ್ವಾಸ, ಇವೆಲ್ಲವನ್ನು ನೋಡಿ 
ಆಶೀರ್ವಾದಿಸುವ ಅಭಿಮಾನಿಗಳ ಕೃಪಕಟಾಕ್ಷ.

ಈ ಮುನ್ನುಡಿಯನ್ನು ಯಾಕೆ ಕೊಡ್ತ ಇದಿನಿ ಅಂದ್ರೆ
ಭರವಸೆಯೊಂದು ದೊಡ್ಡ ಬೆಳಕಾಗಿ ಪ್ರಜ್ವಲಿಸಿದಾಗ 
ನಮಗೆ ವಾರಸುದಾರರು ಸಿಕ್ಕಿದರು ಅನ್ನೊ ಖುಷಿಗಿಂತ 
ಕನ್ನಡ ಸಿನಿಮಾ ರಂಗಕ್ಕೆ ಮತ್ತೊಬ್ಬ ಸಕಲಕಲವಲ್ಲಭನ
ಆಗಮನ ಅನ್ನೋದೆ ನಮ್ಮ ಹೆಮ್ಮೆಯ ಸಂಗತಿ.

ನೆಪೊಟಿಸಿಂ, ಕುಟುಂಬದ ಹಿನ್ನಲೆ, 
ದೊಡ್ಡ ಅಭಿಮಾನಿ ಬಳಗ, ಸ್ಟಾರ್ ವಾರ್ 
ಇದನ್ನೆಲ್ಲಾ ಬದಿಗೊತ್ತಿ "ಯುವ" ಸಿನಿಮಾವನ್ನು 
ನೋಡಿ ಒಬ್ಬ ನಾಯಕ ನಟ ಹೇಗೆ ಸಿನಿಮಾಗೆ 
ಶ್ರಮವಹಿಸಿ ಬಂದಿದ್ದಾರೆ ಮತ್ತು ನಟಿಸಿದ್ದಾರೆ 
ಅನ್ನೋದು ನಿಮ್ಮ ಕಣ್ಣುಗಳಿಗೆ ಭಾಷವಾಗುತ್ತೆ.

"ಯುವ" ಸಿನಿಮಾದ ಬಗ್ಗೆ ನಾನು ಹೆಚ್ಚಾಗಿ 
ಏನು ಹೇಳೊದಿಲ್ಲ. ಆದರೆ ಒಂದಂತು ಸತ್ಯ,
"ಯುವ" ಸಿನಿಮಾವು ಕುಟುಂಬ ಸಮೇತ ನೋಡುವ 
ಒಂದು ಅದ್ಬುತವಾದ ಸಿನಿಮಾ. ಕೊನೆಯ 30 ನಿಮಿಷದ
ದೃಶ್ಯಾವಳಿಗಳು ನಿಮ್ಮ ಹೃದಯವನ್ನು ಭಾರವಾಗಿಸಿ 
ನಿಮ್ಮ ಕಣ್ಣಗಳಲ್ಲಿ ನೀರನ್ನು ತರಿಸುತ್ತೆದೆ.

-"ಯುವ" ನಿಮ್ಮವ
ಕನ್ನಡದವ 
ಕನ್ನಡಿಗರ ಹೆಮ್ಮೆ ಇವ"-

       ಸಂತೋಷ್ ಸರಸು ಹಂಗಳ🖊️ - Made using Quotes Creator App, Post Maker App
S
santhosh kumar
Quote by santhosh kumar - ಅಭಿಮಾನಿಗಳ ಪಾಲಿನ 
ಆರಾಧ್ಯ ದೈವ,
ಕನ್ನಡಿಗರ ಹೃದಯದಲಿ 
ನೆಲಸಿರೊ ಜೀವ.

ಅಭಿನಯಕ್ಕೂ ಸೈ,
ನಾಟ್ಯ ನರ್ತನಕ್ಕೂ ಸೈ
ಕಲಾತಪಸ್ವಿ ಪುನೀತರಿಗೆ ಜೈ..

ಕಪ್ಪು ಕಸ್ತೂರಿಯ ಕುಲದ 
ಕರುನಾಡ ಕುವರನವ್ವ,
ನಾಡ ಕೀರ್ತಿಯ 
ಹೆಚ್ಚಿಸಿದ ವಿಶ್ವ ಮಾನವ.

ಮುತ್ತು ರಾಜಣ್ಣನ ಮಗನಿವನು,
ಪಾರ್ವತಮ್ಮನ ಹೆಮ್ಮೆಯ ಪುತ್ರನು,
ರಾಜವಂಶದ ಕುಲದವನು,
ರಾಜ್ಯದ ಕಳಸ ಈ ದೇವಮಾನವನು.

ಎಂದೂ ಬಾಡವ ಬೆಟ್ಟದ ಹೂವು,
ನಗುವೇ ಜೀವನ ಎಂದ ಜೀವವು,
ಕೂಡಿ ಬಾಳುವುದೆ ಬದುಕು
ಎಂಬುದು ಪರಮಾತ್ಮನ ಸಾರವು,
ಕೊಟ್ಟು ಕೆಟ್ಟವರಿಲ್ಲವೋ 
ಎಂಬುದೊಂದೆ ರಾಜಕುಮಾರನ ಮಂತ್ರವು.

ಜಗತ್ತು ಅಳಿದರು 
ನಿಮ್ಮ ನಾಮ ಅಳಿಯದು,
ನಿಮ್ಮ ಅಭಿಮಾನಿಯಾಗಿರುವುದೇ
ನಮ್ಮ ಜೀವನಕ್ಕೆ ಸಂದಿರುವ 
ಪುಣ್ಯವದು,
ಎಷ್ಟೇ ಯುಗ ಕಳೆದರು ನಿಮ್ಮ
ಮನೆತನಕ್ಕೇ ಮೀಸಲು 
ನಮ್ಮ ಹೃದಯ ಎಂದೆಂದೂ.

ನಾಡಿನ ಸಮಸ್ತ ಎಲ್ಲಾ ಜನರಿಗು
💚"ನಾಡ ಸ್ಪೂರ್ತಿ ದಿನ"ದ💚 
ಶುಭಾಶಯಗಳು.

🌺ಸರಸು🌺 - Made using Quotes Creator App, Post Maker App
S
santhosh kumar
Quote by santhosh kumar - ಮಾತಲ್ಲೇ ಮೋಡಿ ಮಾಡುವರು, 
ಮೌನ ವಹಿಸಿದಾಗ ಧ್ಯಾನಿಗಳಂತೆ
ಮೂಕ ವಿಸ್ಮಿತರಾಗಿ ಸುಮ್ಮನಿರುವರು.

ಹಳ್ಳಿ ಸೊಗಡಲ್ಲೇ 
ಸೊಗಸ ಬಯಸುವರು,
ಅತೀ ಭೋಜನ ಪ್ರೀಯರು, 
ಅನ್ನದ ಬೆಲೆ ಏನೆಂದು 
ಚನ್ನಾಗೆ ತಿಳಿದವರು.

ನೇರ ನುಡಿ ನೇರ ನಡೆಯಲ್ಲೆ 
ಎಲ್ಲರ ಮನಸ್ಸ ಗೆಲ್ಲುವರು,
ಕೊಂಚ ಒರಟೆನಿಸಿದರು 
ಒಟ್ಟಿಗೆ ಎಲ್ಲರನ್ನು ಹೊಟ್ಟೆ 
ಹುಣ್ಣಾಗಿಸುವಂತೆ ನಗಿಸುವರು.

ಆರೋಗ್ಯದ ಬಗ್ಗೆ ಉತ್ತಮ 
ಕಾಳಜಿ ಉಳ್ಳವರು,
ಪ್ರತಿಯೊಬ್ಬರಿಗು ಆರೋಗ್ಯದ
ವಿಚಾರದಲ್ಲಿ ಸಲಹೆಯ ನೀಡುವರು.

ಮನರಂಜನಾತ್ಮಕವಾದ 
ಮನಸ್ಸುಳ್ಳವರು,
ಎಲ್ಲರ ಮನವ ರಂಜಿಸುವಲ್ಲಿ 
ಸದಾ ಕ್ರಿಯಶೀಲರು.

ಪ್ರವಾಸಿ ಪ್ರೇಮಿ ಇವರು, 
ಪರಿಸರದ ಬಗ್ಗೆ ಅತೀ 
ಕಾಳಜಿ ವಹಿಸುವರು.

ಮನಸ್ಸಿಚ್ಛೆಯಂತೆ ನಡೆಯುವರು,
ತಾಳ್ಮೆ,ನಂಬಿಕೆ,ವಿಶ್ವಾಸದಲ್ಲಿ 
ಸಹಸ್ರಕ್ಕೆ ಇವರೊಬ್ಬರು.

ಸಹಾಯಕ್ಕೆ ಸಾಹುಕಾರರು, 
ನಮ್ಮ ನಗು ಮುಖದ ನಾಗರಾಜರು,

-ಸರಸು- - Made using Quotes Creator App, Post Maker App
S
santhosh kumar
Quote by santhosh kumar - ಏನಿಲ್ಲಾ ಸಂವಿಧಾನದಲ್ಲಿ 
ಎಲ್ಲವೂ ಇದೆ ಆದರೆ ಎಲ್ಲವೂ 
ಎಲ್ಲರಿಗೂ ಇಲ್ಲಾ ಎಂಬ 
ಭಾವನೆಯು ಕೆಲವರಲ್ಲಿ ಇನ್ನೂ ಇದೆ 

ಯಾರಿಗಾಗಿ ಸಂವಿಧಾನವು,? 
ಶೋಷಿತರಿಗೆ, ಬಡವರಿಗೆ, ಮಹಿಳೆಯರಿಗೆ,
ಹಿಂದುಳಿದವರಿಗೆ ಎಂಬ ಅಂಶವು 
ಎಲ್ಲಾರಿಗೂ ತಿಳಿದಿದೆ, ಆದರೆ 
ಸಂವಿಧಾನವು ಒಬ್ಬರಿಗೆ ಇರುವುದು
ಎಂಬ ಕಲ್ಪನೆಯು ಕೆಲವರಿಗೆ ಇನ್ನೂ ಇದೆ.

ಏಕೆ ಬೇಕು ಸಂವಿಧಾನವು?
ಎಲ್ಲರಿಗೂ ಎಲ್ಲಾ ವಲಯದಲ್ಲೂ
ಸಮಾನತೆಯನ್ನು ನೀಡಲು, ಎಲ್ಲರೂ
ದೇಶದೆಲ್ಲಡೆ ನಿರ್ಭಯವಾಗಿ ಜೀವಿಸಲು,
ಎಲ್ಲರನ್ನೂ ಅನಾಚಾರಗಳಿಂದ ರಕ್ಷಿಸಲು,
ಸಮಾಜದಲ್ಲಿ ಜೀವಿಸಲು ಪ್ರತಿಯೊಬ್ಬರಿಗು
ಅರ್ಹತೆ ಇದೆ ಎಂದೂ ಸಾರಿ ಸಾರಿ ಹೇಳಳು.

ದೇಶದಲ್ಲಿನ ಎಲ್ಲರ ಬಾಳ 
ದೀವಿಗೆಯೇ ಸಂವಿಧಾನ‌ ಎಂಬ ಸಾಧನ,

ಸಂವಿಧಾನದ ಒಂದು ನಮ್ಮ 
ದೇಶದಲ್ಲಿ ಇರದಿದ್ದರೆ ನಮ್ಮ 
ನಿಮ್ಮಲ್ಲರ ಬಾಳು ಶೂನ್ಯ ಶೂನ್ಯ...
💙-ಸರಸು-💙 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
santhosh kumar
Quote by santhosh kumar - ನಾಡಿನ ಸಮಸ್ತ ನಾಗರಿಕ ಬಂಧುಗಳಿಗೆ
 💐💛❤️ಕನ್ನಡ ರಾಜ್ಯೋತ್ಸವದ 
ಹಾರ್ದಿಕ ಶುಭಾಶಯಗಳು💛❤️💐
ಈ ರಾಜ್ಯೋತ್ಸವದ ಶುಭ ದಿನದಂದು 
ನಿಮ್ಮೆಲ್ಲರಲ್ಲಿ ನನ್ನದೊಂದು ಕೋರಿಕೆ.
ಕನ್ನಡ ನಾಡು-ನುಡಿ, ರಾಜಕೀಯ, 
ಸಂಗೀತ, ಕಲೆ, ಸಾಹಿತ್ಯ, ವಿಜ್ಞಾನ ಮತ್ತು 
ಇನ್ನಿತರ ಕ್ಷೇತ್ರಗಳಲ್ಲಿ ಅಭೂತಪೂರ್ವ 
ಸಾಧನೆಯನ್ನು ಮಾಡಿದ ನಮ್ಮ ನಾಡಿನ ಹೆಮ್ಮೆಯ 
ಕನ್ನಡಿಗರ ಹೆಸರು ಮತ್ತು ಅವರ ಸಾಧನೆ ಏನು?
 ಎಂಬುದನ್ನು ಒಬ್ಬೊಬ್ಬರು ಒಂದೊಂದು
 ಹೆಸರನ್ನು ಒಂದು ವಾಕ್ಯದ ರೂಪದಲ್ಲಿ 
ಕಳುಹಿಸಿ ಕೊಡಿ ಎಂಬುದು, ನನ್ನಯ ವಿನಂತಿ🙏
ಈ ಬಾರಿಯ ರಾಜ್ಯೋತ್ಸವವನ್ನು 
ಈ ರೀತಿಯಾಗಿ ಮಾಹಿತಿ ಸಂಗ್ರಹಣೆ ಮತ್ತು 
ವಿನಿಮಯದ ಮೂಲಕ ಉಪಯೋಗ 
ಆಗುವ ರೀತಿಯಲ್ಲಿ ಆಚರಣೆ ಮಾಡೋಣ 
ಎಂಬುದು ನನ್ನೆಯ ಅನಿಸಿಕೆ.
🤝🙏ಧನ್ಯವಾದಗಳು🤝🙏
ಜೈ ಕರ್ನಾಟಕ
ಜೈ ಭುವನೇಶ್ವರಿ ತಾಯಿ.. - Made using Quotes Creator App, Post Maker App
S
santhosh kumar
Quote by santhosh kumar - ಹೊಂಗಿರಣದ ಹೊಳಪಿಗೆ 
ಹೋಲಿಕೆಯು, ನಿನ್ನಯ 
ವದನದ ರಂಗಾವಳಿಯು.

ಇಳಿಸಂಜೆಯ ಕತ್ತಲಿನಲ್ಲೂ 
ಮಿನುಗುವ ತಾರೆಯಂತೆ 
ಮಿನುಗುತ್ತಿದೆ, ನಿನ್ನಯ 
ಅದರದ ಮೇಲೆ ಚಂದದ 
ನಗುವಿನ ಕಾರಂಜಿಯು.

ಹೊಂಬಿಸಿಲಿಗು ಹೊಂಗಿರಣದ 
ಕಾಂತಿಯನ್ನು ಸೂಸುವಂತಿದೆ, 
ನಿನ್ನಯ ಓರೆ ಕಣ್ಣಿನ 
ನೋಟದ ಚಿತ್ರವಳಿಯು..!!
💞ಸರಸು💞 - Made using Quotes Creator App, Post Maker App
S
santhosh kumar
Quote by santhosh kumar - ಬಯಸಿ ಬಯಸಿ ಬರುವ ಆತ್ಮೀಯರನ್ನು ಹಗುರವಾಗಿ ಕಡೆಗಣಿಸಬಾರದು.  ತಾವೇ ಬಯಸಿದ ಮೊದಲ ಆತ್ಮೀಯತೆಯನ್ನು ಎಂದೂ ಮರೆಯಬಾರದು. 

ಜೀವನ ಅಂದಮೇಲೆ ಹೊಸ ಹೊಸ ಆಯಾಮಗಳು ಬರುತ್ತವೆ. ಆ ಆಯಾಮಗಳನೆಲ್ಲಾ ಆರಾಮಗಿ ಹೊಂದಿಸಿಕೊಂಡು ಹೋಗುವುದೇ ಜೀವನ, ಅದೇ ಸುಖಿ ಜೀವನ.
-ಸರಸು- - Made using Quotes Creator App, Post Maker App
S
santhosh kumar
Quote by santhosh kumar - "प्रिय शिक्षक 'गुंडप्पा सर' को प्रणाम"

"ಹಿಂದಿ" ವಿಷಯವೆಂದರೆ ಹಿಂದೆ ಹಿಂದೆ 
ಸರಿಯುತ್ತಿದ್ದ ವಿಧ್ಯಾರ್ಥಿಗಳಿಗೆ ಮುಂದಲೆಗೆ 
ಬಂದು ಹಿಂದಿ ಭಾಷೆಯ ಬಗ್ಗೆ ಅಭಿಮಾನವ 
ಮೂಡಿಸಿ ಅಕ್ಷರಾಭ್ಯಾಸವ ಮಾಡಿಸಿದ ಗುರು ಇವರು.

ಶಿಕ್ಷಕ ವೃತ್ತಿಯನ್ನೇ ದೇವರೆಂದು ಭಾವಿಸಿ,
ನಿತ್ಯವು ತಮ್ಮ ಕಾಯಕದಲ್ಲಿ ತೊಡಗಿ 
ವಿಧ್ಯಾರ್ಥಿಗಳ ಭವಿಷ್ಯಕ್ಕೆ ಕಾರ್ಯ 
ಪ್ರವೃತ್ತರಾಗಿ ನಿಂತ ಕಾಯಕಯೋಗಿ ಇವರು.

ದಂಡಿಸಿದರೆ ದಡ್ಡರು ಕಲಿಯಬಹುದು 
ಎಂಬ ಹಲವಾರು ಶಿಕ್ಷಕರ ನಡುವೆ 
ತಮ್ಮ ಹಿತ ನುಡಿಗಳಿಂದ, ಮತ್ತು
ವಾಕ್ಚಾತುರ್ಯದಿಂದ ವಿಧ್ಯಾರ್ಥಿಗಳನ್ನು 
ಪರವಶ ಮಾಡಿ ಕಲಿಸುತ್ತಿದ್ದ ಅಕ್ಷರಧಾತರಿವರು.

ವೃತ್ತಿಯಲ್ಲಿ ಕಿಂಚಿತ್ತು ಅಹಂ ಇಲ್ಲದ,
ತಮ್ಮಯ ಸಹೋದ್ಯೋಗಿಗಳಲ್ಲಿ
ಅಸಹಾಯಕತೆಯನ್ನು ತೋರದ 
ನಿಷ್ಕಲ್ಮಷ ಮನಸ್ಸುಳ್ಳ ವಿಶ್ವಾಸನೀಯರಿವರು.

ಸುಮಾರು 21 ವಸಂತಗಳ ಕಾಲ 
"ಶತಮಾನೋತ್ಸವದ ಶಾಲೆಯಾದ ಹಂಗಳ" 
ಗ್ರಾಮದಲ್ಲಿ ನಿರಂತರ ಸೇವೆಯನ್ನು
ಸಲ್ಲಿಸಿ, ಸಾವಿರಾರು ವಿಧ್ಯಾರ್ಥಿಗಳಿಗೆ 
ನೆರಳಾಗಿ ಆಸರೆಯಾಗಿದ್ದ ಮಹಾನೀಯರಿವರು.

ನಿಮ್ಮ ಸೇವೆಯನ್ನು ಪಡೆದ ನಮ್ಮ 
ಊರಿನ ಶಾಲೆಯೇ ಪುಣ್ಯವು. 
ನಿಮ್ಮನ್ನು ಗುರುಗಳಾಗಿ ಪಡೆದ 
ನಮ್ಮಗಳ ಜನ್ಮವು ಪಾವನವು.

ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ನೀವು
ಹೀಗೆ ಸದಾ ಕಾಲವು ಶಿಕ್ಷಣ ಕ್ಷೇತ್ರದಲ್ಲಿ 
ನಿಮ್ಮ ಸೇವೆಯು ಮುಂದುವರಿಯಲಿ 
ಎಂದೂ ಆಶಿಸುತ್ತ, 

ದೇವರು ನಿಮಗೆ ಆಯುಷ್ಯ ಮತ್ತು
ಆರೋಗ್ಯವನ್ನು ಹೆಚ್ಚಿನದಾಗಿ ಕರುಣಿಸಲಿ 
ಎಂದು ನಾವುಗಳು ಪ್ರಾರ್ಥಿಸುತ್ತೇವೆ.

#ಸರಸು# - Made using Quotes Creator App, Post Maker App
S
santhosh kumar
Quote by santhosh kumar - 
"ಸ್ನೇಹಿತ"............💓

ಸನಿಹವಿದ್ದು ಸದಾ ಹಿತವನ್ನು ಬಯಸುವ ಆತ್ಮೀಯನೇ ಸ್ನೇಹಿತ.
ದೂರವಿದ್ದರು ಸಹಾ ಹಿತವ ಹಾರೈಸುವ ನಂಬುಗೆಯನೇ ಸ್ನೇಹಕ್ಕೆ ನಿಜವಾದ ಅಂಕಿತ.

ದೇಹದ ಹತ್ತಿರ ಇರುವವರೆಲ್ಲಾ ಸ್ನೇಹಿತರಾಗಿ ಇರಲು ಸಾಧ್ಯವಿಲ್ಲಾ,
ಹೃದಯದ ಹತ್ತಿರ ಇರುವವರೆ ಉಳಿಯುವುದು ಸ್ನೇಹಿತರಾಗಿ ಚಿರಕಾಲವೆಲ್ಲಾ. 

ಪ್ರೀತಿಯಲ್ಲಿ ಮೋಸ ಹೋದವರ ಸಂಖ್ಯೆ ಇರಬಹುದು ಭೂಮಿಯ ಮೇಲೆ ಹೆಚ್ಚಳ,
ಆದರೆ ಸ್ನೇಹದಲ್ಲಿ ಮೋಸ ಹೋಗುವವರ ಸಂಖ್ಯೆ ಅತೀ ವಿರಳ.

ಸ್ನೇಹಿತನೆಂದರೆ ಯಾರು?
ಖುಷಿಯಾದಾಗಲೂ ದುಃಖವಾದಾಗಲು ಜೊತೆಯಾಗಿ ಕುಡಿಯುವವನ?,
ಇಲ್ಲಾ ಬರೀ ಜೊತೆಯಲ್ಲಿ ಕೂತು ಸಹಾ ಭೋಜನವ ಮಾಡುವವನ?, 

ಸ್ನೇಹಿತನೆಂದರೆ- ಕಷ್ಟಕಾಲದಲ್ಲಿ ಜೊತೆಯಾಗಿ ನಿಲ್ಲುವವನು.
ಸುಖದ ಅವಧಿಯಲ್ಲಲ್ಲಾ ಜೊತೆ ಜೊತೆಯಾಗಿ ಸಾಗುವವನು.
ಜೀವನದಲ್ಲಿ ಧೃತಿಗೆಟ್ಟಾಗ ಸಲಹೆ ನೀಡಿ ಪ್ರೋತ್ಸಾಹಿಸುವವನು.
ಗುರಿಯ ಸಾಧನೆಗಾಗಿ ಪಟ್ಟ ಕಟ್ಟಿ ನಿಂತಾಗ ಸಲಹೆ ನೀಡುವವನು.
ಮಾರ್ಗದರ್ಶನವ ಮಾಡಿ ಗುರಿ ಎಡೆಗೆ ದಾರಿಯ ತೋರುವವನೆ
ನಿಜವಾದ ಸ್ನೇಹಿತ, ಆತನೇ ಬಾಳಿನ ರೂಪಿತ.

ಸ್ನೇಹ ಎಂಬುದು ಇಂದು ಹುಟ್ಟಿ ನಾಳೆ ಸಾಯುವ ಬಂಧವಲ್ಲ,
ನಿರಂತರವಾಗಿ ಬಾಳುವ ಒಂದು ಅನುಬಂಧ. 
ಸ್ನೇಹಕ್ಕೆ ಹುಟ್ಟುವ ದಾರಿ ತಿಳಿದಿದಿಯೋ ಹೊರೆತು,
 ಸಾಯುವ ಹಾದಿ ಕಾಣಸಿಗದು ಅದು ಅಂತ್ಯವು ಕಾಣದು.

ಅದಕ್ಕೆ
ಸ್ನೇಹವನ್ನು ವರ್ಣಿಸಲಾಗದ ಬಂಧ, 
ಬಿಡಿಸಲಾಗದ ಜನ್ಮ ಜನ್ಮದ ಅನುಬಂಧವೆಂದು ಹೇಳೋದು..

🖋
-ಸರಸು- - Made using Quotes Creator App, Post Maker App
S
santhosh kumar
Quote by santhosh kumar - ಒಂಬತ್ತು ತಿಂಗಳುಗಳು ನಮ್ಮ ಭಾರವನ್ನು ಹೊತ್ತು, 
ತನ್ನ ಒಡಲಾಳದಲ್ಲಿ ಕಿಂಚಿತ್ತು ನೋವಾಗದಂತೆ 
ಸಾಕಿ ಸಲಹುವಳು ತಾಯಿ,

ಅಡೆಯುವಾಗು ಸಾಯುವಷ್ಟು ನೋವನ್ನು 
ಅನುಭವಿಸುತ್ತಿದ್ದರು, ತನ್ನ ಮಗುವಿಗಾಗಿ 
ಪುನರ್ಜನ್ಮವೆತ್ತು ನಮಗೆ ಜನ್ಮತೆತ್ತುವಳು ತಾಯಿ,

ನಮ್ಮಗಳ ಆರೈಕೆಗಾಗಿ ಎಲ್ಲಾ ಹರಕೆಗಳನ್ನು 
ಹೊತ್ತು, ಸದಾ ಕಾಲವು ನಮ್ಮನ್ನು ಆಶೀರ್ವದಿಸಿ
 ಅರಸರಂತೆ ಬೆಳೆಸುವಳು ತಾಯಿ,

ನನಗೆ ನೆರಳಾಗದಿದ್ದರು ಸರಿ, ತನಗೆ ತನ್ನ 
ನೆರೆಹೊರೆಯವರಿಗೆ ನೆರಳಾಗಲಿ ಎಂದು,
ತನ್ನ ಬಯಕೆಗಳನೆಲ್ಲಾ ಬದಿಗೊತ್ತಿ ಮೇರು 
ಮರವಾಗಲೆಂದು ಪೋಷಿಸುವಳು ತಾಯಿ,

ತನಗೆ ನೋವಾದರು ಸರಿ, ತನ್ನ ಮಗುವಿಗೆ
ನೋವಾಗಬಾರದೆಂದು ತನ್ನೆಲ್ಲಾ ನೋವನ್ನು 
ಸಹಿಸಿಕೊಂಡು ನಮ್ಮ ನಲಿವಲ್ಲೇ ನಲಿದಾಡುವಳು ತಾಯಿ,

ಇಂತಹ 
ಮಹಾತಾಯಿಗೆ,...
ಪ್ರೀತಿ,ವಾತ್ಸಲ್ಯ, ಮಮತೆಯ ಶಿಖರದ ದೇವಿಗೆ,....
ಕರುಣೆಯ ಕಲ್ಪವೃಕ್ಷದ ಕರುಣಾಮಯಿಗೆ...
💖🌼"ವಿಶ್ವ ತಾಯಂದಿರ ದಿನದ ಶುಭಾಶಯಗಳು"🌼💖

               🌺-ಸರಸು-🌺 - Made using Quotes Creator App, Post Maker App
S
santhosh kumar
Quote by santhosh kumar - ಹೊಸ ಯುಗವ ಹೊಸ 
ಹರುಷವನ್ನು ನಿಮ್ಮ ಬಾಳಿನಲ್ಲಿ ತರಲಿ.

ನಿಮ್ಮೆಲ್ಲಾ‌ ಬಾಳಿನ ತೊಳಲಾಟಗಳು
ಕೊನೆಕೊಂಡು, ಮಾವಿನ ತಳಿರು
ತೋರಣದ ಹಾಗೆ ಅಚ್ಚ ಹಸಿರಿನಿಂದ
ನಿಮ್ಮ ಬಾಳು ಕಂಗೊಳಿಸಲಿ.

ಹೊಂಗೆಯ ಮರವು ನವ 
ಸಂವತ್ಸರದಲ್ಲಿ ಚಿಗರೊಡೆಯುವ 
ಹಾಗೆ ನಿಮ್ಮ ಹೊಸ ಹೊಸ
ಯೋಚನೆಗಳು ಮತ್ತು 
ಯೋಜನೆಗಳು ಕಾರ್ಯರೂಪಕ್ಕೆ ಬರಲಿ.

ಕಹಿಯಾದ ಬೇವಿನ ಕೆಟ್ಟ 
ಘಟನೆಗಳೆಲ್ಲಾ ಕೊನೆಗೊಂಡು,
ಸಿಹಿಯಾದ ಸುಖ-ಸಂತೋಷವು 
ಈ ಯುಗಮಾನದಿಂದ ನಿಮ್ಮ 
ಬಾಳಿನಲ್ಲಿ ಬಂದೊದಗಲಿ.

ನೆಚ್ಚಿನ ನಲ್ಮೆಯರೆಲ್ಲರಿಗೂ 
💐🎋🌿"ಯುಗಾದಿ ಹಬ್ಬದ 
ಹಾರ್ದಿಕ ಶುಭಾಶಯಗಳು"🎋🌿💐
🎋ಸರಸು🎋 - Made using Quotes Creator App, Post Maker App
S
santhosh kumar
Quote by santhosh kumar - ಅನುಭವಗಳು 
ಪ್ರತಿಯೊಬ್ಬರಿಗು ಅಗತ್ಯವೆ, 
ಅದು ಒಳ್ಳೆದಾಗಲಿ ಕೆಟ್ಟದಾಗಲಿ, 
ಅನುಭವವು 
ಒಳ್ಳೆ ಕೆಲಸದಲ್ಲಿ ಡೊಂಕು 
ಮಾತನಾಡುವವರ 
ಬಾಯಿ ಮುಚ್ಚಿಸುತ್ತೆ, 
ಕೆಟ್ಟ ಕೆಲಸದಲ್ಲಿ 
ಒಳ್ಳೆತನವನ್ನು ಹೇಗೆ 
ಮಾಡಬೇಕು ಎಂದು ತಿಳಿಸುತ್ತೆ.
ಒಳ್ಳೆ ಕಾರ್ಯಗಳನ್ನು 
ಪ್ರೋತ್ಸಾಹಿಸಬೇಕು, 
ಕೆಟ್ಟ ಕಾರ್ಯಗಳನ್ನು 
ನಿಂದಿಸಬೇಕು, 
ಅದೇ ನಿಜ ಅನುಭವವುಳ್ಳ 
ಮನುಜ ಗುಣ.

💫ಸರಸು💫 - Made using Quotes Creator App, Post Maker App
S
santhosh kumar
Quote by santhosh kumar - ಸಾಗುವ ದಾರಿಯಲೆಲ್ಲಾ ಬರೀ 
ನಿನ್ನ ಹೆಜ್ಜೆಯನ್ನೇ ಹುಡುಕುವ
ಖಯಾಲಿಯಾಗಿದೆ ನನ್ನ ಮನಕ್ಕೆ

ಬಿಳಿಮೋಡದಿಂದ 
ಪ್ರಕಾಶಮಾನವಾಗಿ ಇದ್ದ ನನ್ನ
ಹೃದಯವು ನೀ ತೊರೆದ ದಿನದಿಂದ
ಕಪ್ಪು ಮೋಡವಾಗಿ ಕಣ್ಣೀರನ
ಆರ್ಭಟವೇ ಜೋರಾಗಿದೆ.

ಏನು ಅರಿಯದೆ ಇದ್ದ ನನ್ನ 
ಹೃದಯವು ಇಂದು ನಿನ್ನ 
ಅರಿವು ಒಂದನ್ನು ಬಿಟ್ಟು, 
ಬೇರೆಲ್ಲಾ ಸಂಗತಿಗಳು ಮನದಲ್ಲಿ
ಅವನತಿಯನ್ನು ಕಾಣುತ್ತಿದೆ.

ನಿನ್ನ ಪ್ರೀತಿಯ ಮಾಧ್ಯಮವನ್ನು
ಮನದಟ್ಟು ಮಾಡಿಕೊಳ್ಳಲಾಗದೆ 
ರಸ್ತೆ ಮಧ್ಯದಲ್ಲೇ ನನ್ನ ಮನವು
ಮಂಕಾಗಿ ಕುಳಿತಿದೆ.

ಸಾಧ್ಯವಾದರೆ ಸಂಯಮದಿಂದ 
ನನ್ನನ್ನು ಸರಿಗೆ ಸರಿಸಿ ಹೋಗು, 
ಇಲ್ಲವೆ ನನ್ನ ಹೃದಯವು ಸಧೃಢವಾಗಿ
ನಿನ್ನ ಹೊರೆತು ಜೀವಿಸಲು ಸರಿ 
ದಾರಿಯ ತೋರಿ ಹೋಗು.

〽ಸರಸು〽 - Made using Quotes Creator App, Post Maker App
S
santhosh kumar
Quote by santhosh kumar - ಮಂಕಾಗಿರುವ ಮನಕ್ಕೆ 
ಮಂದಹಾಸವ ತುಂಬಲಾದರು 
ನೀ ಇರಬೇಕಿತ್ತು

ಸ್ಥೈರ್ಯವ ಕಳೆದುಕೊಂಡು ನಿಂತ ಜೀವಕ್ಕೆ, 
ಆತ್ಮ ಸ್ಥೈರ್ಯವ ನೀಡಲಾದರು ನೀ 
ಅವನ ಜೀವನದ ಜೊತೆ ಸಾಗಬೇಕಿತ್ತು,

ಬರೀ ಕನಸುಗಳನ್ನೇ ಜೀವನವಾಗಿಸಿ 
ಜೀವಿಸುತ್ತಿದ್ದ ಆ ಜೀವಕ್ಕೆ ಕನಸುಗಳನ್ನು 
ನನಸಾಗಿಸುವ ಕಾಯಕಕ್ಕಾದರು 
ನೀನು ಕಲ್ಪವಲ್ಲಿಯಾಗಬೇಕಿತ್ತು

ನೀನೆ ಬಯಸಿ ಹೋದ ಆ ಹೃದಯಕ್ಕೆ 
ಬರೀ ನಿನ್ನೆಯ ನೆನಪಿನ ಬಂಧನದ 
ಸೆರೆವಾಸವನ್ನು ನೀಡಿ ನೀನೇ 
ದೂರ ಸಾಗಬಾರದಿತ್ತು

ಪ್ರೀತಿಸಿದವರು ದೊರೆಯದಿದ್ದರೇನಂತೆ 
ಪ್ರೀತಿಯು ದೊರೆಯಿತಲ್ಲಾ ಎಂದು 
ಆ ಪ್ರೀತಿಯ ಪಂಜರದಲ್ಲೆ ಪ್ರೀತಿಸಿದ  
ಹೃದಯವು ಸಂತೋಷವ ಪಡುತ್ತಿತ್ತು. 

ದಿನ ಕಳೆದು ಕಳೆದು ಪ್ರೀತಿಯಿಂದ 
ಮೋಸಹೋದ ಹೃದಯವು 
ಆ ಪ್ರೀತಿಯ ಬಂಧನದಿಂದ ಬಿಡುಗಡೆ 
ಹೊಂದಲು ಸಾಧ್ಯವಾಗದೆ ನರಳಿ 
ನರಳಿ ಪಂಜರದಲ್ಲೇ ಒದ್ದಾಡುತಲಿತ್ತು

ಪ್ರೀತಿಯು ಇಲ್ಲದೆ ಜೀವನವು ಇಲ್ಲದೆ 
ದೃಢ ಮನಸ್ಸಿನಿಂದ ದೃಢ ನಿರ್ಧಾರವ 
ನಿರ್ಧರಿಸಲಾಗದೇ ಆ ಹೃದಯವು 
ನಿರ್ಗತಿಕನಾಗಿ ನಿಂತಿತ್ತು.

ಇರಬೇಕಿತ್ತು ಮಂಕಾಗಿರುವ 
ಮನಕ್ಕೆ ಮಂದಹಾಸವ 
ತುಂಬಲಾದರು ನೀ ಇರಬೇಕಿತ್ತು.

-ಸರಸು- - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
santhosh kumar
Quote by santhosh kumar - ಜೀವನದಲ್ಲಿ ಜವಬ್ದಾರಿ ಅನ್ನೋದು
 ಜವಾನನನ್ನು ಬಿಡೋದಿಲ್ಲಾ 
ಜಮಿನ್ದಾರನನ್ನು ಬಿಡೋದಿಲ್ಲಾ,

ಅವರವರ ಜವಬ್ದಾರಿಯನ್ನು 
ಸರಿಯಾಗಿ ನಿರ್ವಹಿಸಿಕೊಂಡು 
ಹೋದರೆ ಮಾತ್ರ ಸುಖಿ ಜೀವನ.

ಬೇಜವಬ್ದಾರಿಯ 
ಜೀವನ‌ದಲ್ಲಿ ದುಃಖವು ಬೆನ್ನು 
ಬಿದ್ದ ಬೇತಾಳದ ಜೀವನ.

☝ಸರಸು👇 - Made using Quotes Creator App, Post Maker App
S
santhosh kumar
Quote by santhosh kumar - ಹೊಸ ವರುಷವು 
ಹೊಸ ಹರುಷವ ತರಲಿ ನಿಮ್ಮ‌ ಬಾಳಿನಲಿ.

ಹಸನಾಗಲಿ ನಿಮ್ಮ ಬದುಕು 
ಈ ಹೊಸ ವರುಷದ ಹರುಷದಲಿ.

ಸಮೃದ್ಧಿಯ ತರಲಿ 
ಈ ನವ ಯುಗವು ನವ ಜೀವನದಲಿ.

ಒಳಿತಾಗಲಿ ಎಲ್ಲರಿಗು 
ಈ ಹೊಸ ದಿನದಿಂದ ಹೊಸ ವರುಷದಲಿ.

ಖುಷಿಯ ಹಂಚಿ ಹರುಷದಿಂದ 
ಪ್ರತಿಯೊಬ್ಬರಿಗು ಈ ನವ ಯುಗದಲಿ.

ನಿರ್ಧರಿಸಿ‌ ಜೀವನವನು ಸಾರ್ಥಕತೆ 
ಮಾಡಲು ಈ ವರುಷದಲಿ.

ಹೊಸ ವರುಷವು ಹೊಸ 
ಹರುಷವ ತರಲಿ ನಿಮ್ಮ‌ ಬಾಳಿನಲಿ.

ಸರಸು - Made using Quotes Creator App, Post Maker App
S
santhosh kumar
Quote by santhosh kumar - ನಿನ್ನ ಪ್ರೇಮಾ ಬಂಧನದಿಂದ ನನ್ನನ್ನು 
ಹೊರ ದೂಡಿದ್ದೇನೊ ಸರಿ. 
ಆದರೆ ನಿನ್ನ ನೆನಪುಗಳು ನನ್ನ ಮನದ 
ಬಂಧನದಲ್ಲಿ ಇನ್ನಾ ನೆಲೆಯೂರಿ ಇದಿಯಲ್ಲ 
ಅದನ್ನು ಹೇಗೆ ಹೊರ ದೂಡಬೇಕೆಂದು ತಿಳಿದಿಲ್ಲಾ. 
ದಿನಾಲೂ ಒಂದಿಲ್ಲದ ಒಂದು ನೆನಪುಗಳು ನನ್ನ 
ಹೃದಯಕ್ಕೆ ಹೊಕ್ಕಿ ಮನದ ನೆಮ್ಮದಿಯನ್ನು ಕದಡುತ್ತಿದೆ. 
ನಿನಗೆ ಕಿಂಚಿತ್ತಾದರು ಕರುಣೆಯಿದ್ದರೆ 
ಒಮ್ಮೆಯಾದರು ಆಗಮಿಸಿ ಈ ವಿರಹಕ್ಕೆ 
ಪೂರ್ಣ ವಿರಾಮವ ಹೇಳಿ ಹೋಗು. 
ನಿನ್ನಂತಯೇ ನನ್ನ ಹೃದಯಕ್ಕು ನಿನ್ನ 
ಬಿಟ್ಟು ಜೀವಿಸುವ ಸೌಭಾಗ್ಯವಾದರು ಬಂದೊದಗಲಿ.
ಇಲ್ಲಾ ಈ ಹೃದಯದ ಪ್ರಪಂಚದಲ್ಲಿ 
ನೀನೆ ಇಲ್ಲಾ ಎಂಬ ಭಾವನೆಯಾದರು
 ಭಾವಿಸಿ ನೊಂದ ಮನವು ಸ್ವಲ್ಪಮಟ್ಟಿಗೆ
 ನಲಿವಿನಂದಾದರು ಕೂಡಿರಲಿ.

💔SaRaSu💔 - Made using Quotes Creator App, Post Maker App
S
santhosh kumar
Quote by santhosh kumar - ಕೆಲ ನೋವುಗಳು ನಮಗೆ 
ಅರಿವಿಲ್ಲದೆಯೇ ನಮ್ಮ ಒಡಲೊಳಗೆ
ಹೊಕ್ಕಲು ಪ್ರಾರಂಭಿಸುತ್ತವೆ.

ಹೊಕ್ಕುವ ಆ ನೋವುಗಳನ್ನು 
ಹತ್ತಿಕ್ಕಿವ ಪ್ರಯತ್ನವನ್ನು ನಾವು
ಪ್ರಾರಂಭದಲ್ಲೇ ಮಾಡಬೇಕು.

ಇಲ್ಲವಾದರೆ ಆ ನೋವುಗಳೇ 
ನಮ್ಮ ಜೀವನವನ್ನು ಹತ್ತಿಕ್ಕುವ
ಹೂರಣವನ್ನು ಮಾಡುತ್ತದೆ. 
-ಸರಸು-

ಸರಸು - Made using Quotes Creator App, Post Maker App
S
santhosh kumar
Quote by santhosh kumar - ಸೋತು ಕುಂತ ಮನಸ್ಸಿಗೆ 
ಆತ್ಮ ಸ್ಥೈರ್ಯವನ್ನು ತುಂಬಲು 
ಮನವೊಂದು ಹತ್ತಿರವಿರಬೇಕಿತ್ತು,

ಏಕೆಂದರೆ ಇಂದು ಜೊತೆಯಿದ್ದ 
ಮನಸ್ಸೆಲ್ಲವು ಏನು ದೋಚದ 
ಹಾಗೆ ತಲೆಮೇಲೆ ಕೈಹಾಕಿ ಕುಳಿತ್ತಿತ್ತು.

ಸೋತ ಮನಸ್ಸು ಆ ಮನಸ್ಸುಗಳನ್ನು
 ಕಂಡು ಮತ್ತಷ್ಟು ವಿಶ್ವಾಸವನ್ನು ಕಳೆದುಕೊಂಡಿತ್ತು.

ಅಸಹಾಯಕನಾಗಿ ಕೂತ ಹೃದಯದ
 ಸಹಾಯಕ್ಕೆಂದೆ ಯೋಚನೆಗು ಸಿಗದ 
ಮತ್ತು ಮನಕ್ಕು ಅನಿಸದ 
ಒಂದು ಸಂದೇಶವು ಬಂದೊದಗಿತು.

ಬಂದ ಸಂದೇಶವನ್ನು ಅದೃಷ್ಟವೆಂದು
 ತಿಳಿದು, ಆ ಮನಕ್ಕೆ ಸಹಾಯಹಸ್ತವನ್ನು ಕೇಳಿತು,

ಒಲ್ಲೇ ಎನ್ನದ ಮನವು ತುಂಬು 
ಹೃದಯದಿಂದ ಸೋತ 
ಮನಕ್ಕೆ ಸಹಾಯವನ್ನು ನೀಡಿತು.

ಸಹಾಯವ ಪಡೆದ ಮನವು 
ಅಂದುಕೊಂಡಿತು ಇದುವೇ 
ಜೀವನದ ಮೊದಲ ಅದೃಷ್ಟವೆಂದು.

ಏನೇ ಆದರು ಆ ಅದೃಷ್ಟದ 
ಮನಕ್ಕೆ ಎಷ್ಟೇ ಕೃತಜ್ಞತೆ ಹೇಳಿದರು 
ಸಾಲದು ಎಂದು ಮನಸ್ಸಿಗೆ ಅನಿಸಿತು.🙏

🙌 ಸರಸು🙌 - Made using Quotes Creator App, Post Maker App
S
santhosh kumar
Quote by santhosh kumar - ಕಷ್ಟ ಎಷ್ಟೆ ಬಂದರು ಕುಗ್ಗಬೇಡ ಬಂದ 
ಕಷ್ಟಗಳನ್ನು ಸಹಿಸಿಕೊಳ್ಳುವ
ಆತ್ಮವಿಶ್ವಾಸವನ್ನು ಬೆಳಿಸಿಕೊ,
ಭಕ್ತಿಗೆ ಕಲ್ಲನ್ನು ಅರಳಿಸಿ ಹೂವಾಗಿಸುವ ಶಕ್ತಿ ಇದೆ 
ಎಂದ ಮೇಲೆ, ಇನ್ನು
ದೃಢಮನಸ್ಸಿನಿಂದ ಕಷ್ಟಗಳನ್ನು ಎದುರಿಸಿ ಛಲದಲ್ಲಿ
ಬದುಕುವ ಮನಕ್ಕೆ ಬೆಟ್ಟವನ್ನು ಕರಗಿಸಿ ಅರಮನೆಯನ್ನು 
ಕಟ್ಟುವ ಶಕ್ತಿ ಇದ್ದೇ ಇರುತ್ತದೆ.

💪ಸರಸು💪 - Made using Quotes Creator App, Post Maker App
S
santhosh kumar
Quote by santhosh kumar - ಬಂದ ಕಾಲವೆಲ್ಲವು ಕಾಲವಾಯಿತ್ತಲ್ಲಾ 
ಎಂದು ಕಾಲೆಳೆಯುತ್ತ ಕಲಾಹರಣ ಮಾಡುತ್ತಾ ಕುಳಿತರೆ,

ಮುಂದೊಂದು ದಿನ ನಿನಗೆ ದೊರಕಿದ ಕಾಲದಲ್ಲಿ 
ಕಲಿಯಲು ಆಗಲಿಲ್ಲವಲ್ಲಾ ಎಂದು ಮನದಲ್ಲಿ 
ಕಲಹ ಉಂಟಾಗಿ ನಿನ್ನ ಕಾಲವಾದಿತು ಜೋಪಾನ.....!!
🤍-ಸರಸು-🤍

ಸರಸು - Made using Quotes Creator App, Post Maker App
S
santhosh kumar
Quote by santhosh kumar - ನನ್ನವಳು ನನ್ನ 
ಜೊತೆಗೆ ಕಳೆದ 
ಸಂತೋಷದ ದಿನವೆಲ್ಲಾ 
ನೆನಪಿನ ದೀಪಾದಂತೆ 
ದಿನಾಲು ಪ್ರಜ್ವಲಿಸುತ್ತಿತ್ತು.
ಇಂದು ಅವಳ ಹಿಮ್ಮುಖವ 
ನೋಡಿ ಪ್ರಜ್ಬಲಿಸುತ್ತಿದ್ದ 
ದೀಪಾವೇ ಹೃದಯಕ್ಕೆ ಬೆಂಕಿ 
ಹಚ್ಚಿ ನೋವ ನೀಡಿತು...........!!!!

ಸಾಗುವ 
ದಾರಿಲಿ ನನ್ನವಳು 
ಎರಡು ಜೀವದ 
ಹಿತಕ್ಕಾಗಿ ಪುಟ್ಟ ಪುಟ್ಟ 
ಹೆಜ್ಜೆಯನಿಡುತ್ತ ವಿಹಾರಿಸುವುದ ಕಂಡು,
ನನ್ನ ಜೋಡಿ ಆ ಪುಣ್ಯವ
ಕರುಣಿಸಿಲಿಲ್ಲವಲ್ಲಾ, ಎಂಬ
ನೋವಿನಿಂದಲೇ ಕಂಬನಿ 
ಮಿಡಿಯುತ ನೊಂದ 
ಹೃದಯವು ಮುಂದೆ ಸಾಗಿತು.........!!!!!
       ❤‍🔥ಸರಸು❤‍🔥

ಸರಸು - Made using Quotes Creator App, Post Maker App
S
santhosh kumar
Quote by santhosh kumar - ಕಂಗೊಳಿಸುತ್ತಿರುವ ಕಣ್ಣಾ ನೋಟ,...
ಮುಗುಳು ನಗುತ್ತಿರುವ ಕಿರುನಗೆಯ ತುಂಟಾಟ,...
ಇಳೆಗೆ ಸೌಂದರ್ಯ ನಿಧಿಯಂತಿರುವ ಮೈಮಾಟ,...
ಪ್ರಕೃತಿಗು ಪ್ರಿಯವಾಗಿ ನುಡಿತಿದೆ ನಿನ್ನದೆ ಪರಿಪಾಠ,....
ಮನದ ಮರೆಯಲಿ ಮರುಗಲು ಮಾಡಬೇಕಿದೆ ನಿನ್ನ ಹೆಸರಿನ ಕಂಠಪಾಠ.....
✨-ಸರಸು-✨ - Made using Quotes Creator App, Post Maker App
S
santhosh kumar
Quote by santhosh kumar - ಒಂಬತ್ತು ತಿಂಗಳುಗಳ ನಮ್ಮ ಭಾರವನ್ನು ಹೊತ್ತು, ತನ್ನ ಒಡಲಾಳದಲ್ಲಿ ಕಿಂಚಿತ್ತು ನೋವಾಗದಂತೆ ಸಾಕಿ ಸಲಹುವಳು ತಾಯಿ,

ಅಡೆಯುವಾಗು ಸಾಯುವಷ್ಟು ನೋವನ್ನು ಅನುಭವಿಸುತ್ತಿದ್ದರು, ತನ್ನ ಮಗುವಿಗಾಗಿ ಪುನರ್ಜನ್ಮವೆತ್ತು ನಮಗೆ ಜನ್ಮತೆತ್ತುವಳು ತಾಯಿ,

ನಮ್ಮಗಳ ಆರೈಕೆಗಾಗಿ ಎಲ್ಲಾ ಹರಕೆಗಳನ್ನು ಹೊತ್ತು, ಸದಾ ಕಾಲವು ನಮ್ಮನ್ನು ಆಶೀರ್ವದಿಸಿ ಅರಸರಂತೆ ಬೆಳೆಸುವಳು ತಾಯಿ,

ನನಗೆ ನೆರಳಾಗದಿದ್ದರು ಸರಿ, ತನಗೆ ತನ್ನ ನೆರೆಹೊರೆಯವರಿಗೆ ನೆರಳಾಗಲಿ, ಎಂದು ತನ್ನ ಬಯಕೆಗಳನೆಲ್ಲಾ ಬದಿಗೊತ್ತಿ ಮೇರು ಮರವಾಗಲೆಂದು ಪೋಷಿಸುವಳು ತಾಯಿ,

ತನಗೆ ನೋವಾದರು ಸರಿ, ತನ್ನ ಮಗುವಿಗೆ ನೋವಾಗಬಾರದೆಂದು ತನ್ನೆಲ್ಲಾ ನೋವನ್ನು ಸಹಿಸಿಕೊಂಡು, ನಮ್ಮ ನಲಿವಲ್ಲೇ ನಲಿದಾಡುವಳು ತಾಯಿ,

ಇಂತಹ 
ಮಹಾತಾಯಿಗೆ,...
ಪ್ರೀತಿ,ವಾತ್ಸಲ್ಯ, ಮಮತೆಯ ಶಿಖರದ ದೇವಿಗೆ,....
ಕರುಣೆಯ ಕಲ್ಪವೃಕ್ಷದ ಕರುಣಾಮಯಿಗೆ...
💖🌼"ವಿಶ್ವ ತಾಯಂದಿರ ದಿನದ ಶುಭಾಶಯಗಳು"🌼💖

 🌺-ಸರಸು-🌺 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
santhosh kumar
Quote by santhosh kumar - ಅನಿಸಬೇಕಿರೋದು ಒಂದೇ ಯೋಚನೆ,
ಮಾಡಬೇಕಿರೋದು ಒಂದೇ ಕೆಲಸ,
ಸಹಿಸಿಕೊಳ್ಳಬೇಕಿರೋದು ಒಂದೇ ಪ್ರೀತಿ,
ನೀಡಬೇಕಿರೋದು ಒಂದೇ ಸಹಾಯ,
ಜೀವನದ ಭಾವನೆ ಒಂದೇ ಸಾರ್ಥಕತೆ,
ಪ್ರತಿಯೊಬ್ಬರ ಚಿಂತೆ ಒಂದೇ, 
ಮುಂದೆ ಜೀವನ ಹೇಗೆ ಅನ್ನೋದೇ ಅಂತೆ...

-ಸರಸು- - Made using Quotes Creator App, Post Maker App
S
santhosh kumar
Quote by santhosh kumar - ತುಂಬಾ ಮುಖ್ಯವಾದವರ ಬಗ್ಗೆ ನಾವು ಅತಿ ಹೆಚ್ಚಿನ ಕಾಳಜಿ ವಹಿಸಿದಾಗ ಅವರ ಕಲ್ಪನೆಯಲ್ಲಿ ಅದು ಯಾವತ್ತಿದ್ದರು ಕಿರಿಕಿರಿನೆ..

ಅವರ ಮೇಲಿರುವ ಅವರದೇ ಕಾಳಜಿಯನ್ನು ಕೂಡ ನಾವು ಪ್ರಶ್ನಿಸಿದಾಗ ಕೆಟ್ಟವನು ಎಂಬುದೇ ಕೊನೆಗೆ ನಮಗೆ ಸಿಗುವ ಮನ್ನಣೆ....
"ಇದ್ದಂತೆ ಇದ್ದು ಬಿಡು ಮನವೆ... ನಿನ್ನ ಪಾಡಿಗೆ ನೀ"....


-ಸರಸು- - Made using Quotes Creator App, Post Maker App