ಮಹೇಶಕುಮಾರ ಹನಕೆರೆ profile
Creator Profile

ಮಹೇಶಕುಮಾರ ಹನಕೆರೆ

Sharing quote designs and daily inspiration.

31 Posts
4 Followers
1 Following
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - *"ಪರಿಸ್ಥಿತಿ ಮತ್ತು ಮಾತಿನ ಸಂಬಂಧ"*

ಮನಸ್ಸು ತುಂಬಾ ಸಂತೋಷದಲ್ಲಿರುವಾಗ ಮನುಷ್ಯ ಓವರ್ ಎಕ್ಸೈಟ್ ಆಗಿರುತ್ತಾನೆ.ಖುಷಿಯಾಗಿರುವಾಗ ವರ್ತನೆ ಮತ್ತು ಮಾತುಗಳಲ್ಲಿ ಒಂದು ಬಗೆಯ ಆವೇಗ ಉಂಟಾಗುತ್ತದೆ ಅಂತಹ ಸಮಯದಲ್ಲಿ ಯಾವುದೂ ಅಸಾಧ್ಯ ಅನಿಸುವುದೇ ಇಲ್ಲ. ಆಗ ಕೊಡುವ ಮಾತುಗಳನ್ನು ಈಡೇರಿಸುವುದು ತುಸು ಕಷ್ಟ. ದುಃಖದಲ್ಲಿರುವಾಗ ಮನಸ್ಸು ಒಂದು ರೀತಿಯ ಉದ್ವೇಗಕ್ಕೆ ಒಳಗಾಗಿ ಸಕಾಲಿಕ & ಸಕಾರಣವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.ಇದರಿಂದಾಗಿ ಮುಂದಿನ ಅವಕಾಶಗಳ ಬಾಗಿಲು ಮುಚ್ಚುವ ಸಾಧ್ಯತೆ ಇರುತ್ತದೆ. ಇನ್ನು ಕೋಪದಲ್ಲಿರುವ ಮನುಷ್ಯ ಆವೇಶದಲ್ಲಿ ಏನೆಲ್ಲಾ ಆಗಿಬಿಡುತ್ತಾನೆ ಎಂಬುದು ಸರ್ವರಿಗೂ ತಿಳಿದಿರುವುದೇ.ಅಂತಹ ಸಂದರ್ಭದಲ್ಲಿ ಯಾವುದೇ ಮಾತಿಗೆ ನೀಡುವ ಪ್ರತಿಕ್ರಿಯೆಯು ಸಂಬಂಧಗಳನ್ನೇ ಮುರಿದು ಹಾಕುವಷ್ಟು ಪ್ರಭಾವಶಾಲಿಯಾಗಿರುತ್ತದೆ.ಹಾಗಾಗಿ ಯಾವುದೇ ಸಂದರ್ಭದಲ್ಲಿಯೇ ಆಗಲಿ ಮನುಷ್ಯ ಒಂದು ಸ್ಥಿಮಿತತೆಯನ್ನು ಕಾಯ್ದುಕೊಳ್ಳುವುದು ಒಳಿತು.

🖋 *ಮಹೇಶಕುಮಾರ ಹನಕೆರೆ.ಶಿರಸಿ* - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - *" ಬಾಳಿನಲ್ಲಿ ಏನಿದೆ "*

ಇರುಳು ಕಳೆಯೆ ಹಗಲು 
ನೋವ ಮರೆಯೆ ನಲಿವು 
ಕಷ್ಟ ಕಳೆಯಲು ಸುಖವು 
ಇಷ್ಟು ಹೊರತು ಏನಿಹವು...?
ಬಾಳ ಸೂತ್ರಗಳನು ಅರಿತು
ಸಾವು ನೋವು ಕಷ್ಟ ಮರೆತು
ನಾಳೆಗಳನು ಕಾಯಬೇಕು
ಬರುವವರೆಗೆ ಸಾವು ಬಾಳಬೇಕು...

🖋 *ಮಹೇಶಕುಮಾರ ಹನಕೆರೆ.*
 - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ತಟ್ಟನೆ ಆಡಿ‌ ಮುಗಿಸುವ ಮಾತು,ಫಟ್ಟೆಂದು ತೆಗೆದುಕೊಳ್ಳುವ ನಿರ್ಧಾರ ಎರಡೂ ಮನಸಿನ‌ ಮೇಲೆ ಅನಿರೀಕ್ಷಿತ ಕೆಟ್ಟ ಪರಿಣಾಮ ಬೀರಬಹುದು. ಮಾತನಾಡುವ ಮೊದಲು ಒಂದಿಷ್ಟು ತಾಳ್ಮೆ,ನಿರ್ಧಾರ ಮಾಡುವ ಮೊದಲು ಒಂದಿಷ್ಟೇ ಆಲೋಚನೆ ಇವಿಷ್ಟು ಏನು ಸಾಧಿಸಬೇಕಾಗಿತ್ತೋ ಅದನ್ನೇ ಮಾಡಲು ನೆರವಾಗುತ್ತವೆ....🙏💐

🖋 ಮಹೇಶಕುಮಾರ ಹನಕೆರೆ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - *"ನಿಜವಾದ ಗೆಳೆಯರು"*

ಹೆತ್ತು ಸಾಕಿದ ತಾಯಿ ತುತ್ತು ನೀಡಿದ ದೇವಿ
ಹೊತ್ತು ಹೆಗಲಿನಲಿ ಜಗವ ತೋರಿದ ತಂದೆ
ಬುದ್ಧಿ ಮಾತನು ಹೇಳಿ ತಿದ್ದಿ ತೀಡಿದ ಗುರು
ಮನವನ್ನು ಅರಿತು ಹೊಂದಿ ಬಾಳುವ ಪತ್ನಿ
ಎಲ್ಲ ಕಾಲಗಳಲ್ಲು ಜೊತೆನಿಲುವ ಸೋದರ
ಶುದ್ಧ ಮನವ ಹೊಂದಿರುವ ಜೊತೆಗಾರರು
ಕಷ್ಟಗಳನರಿತು ಕೈಯ ಹಿಡಿಯುವ ಬಂಧು
ಇಷ್ಟವಾಗುವರಿವರು ನನ್ನ ನಿಜ ಗೆಳೆಯರು

🖋 *ಮಹೇಶಕುಮಾರ ಹನಕೆರೆ, ಶಿರಸಿ*
 - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - *"ಗೆಳೆತನ"*

ಇರಲೇಬೇಕೆಂದಿಲ್ಲ ರಕ್ತ ಸಂಬಂಧ
ಇದ್ದರೆ ಸಾಕು ಒಂದು ಅನುಬಂಧ
ಕಷ್ಟಕ್ಕೆ ಮನ ಮಿಡಿಯುವ ಜೀವ
ಸುಖದಲ್ಲು ಜೊತೆಯಿರುವ ದೈವ

ಕರೆಯದೇ ಬರುವಂತ ಹಂಬಲ
ಕಡೆವರೆಗೆ ನೀಡುತಲಿ ಬೆಂಬಲ
ಸೋಲು ಗೆಲುವಿನ ಜೊತೆಗಾರ
ನಂಬಿಕೆಯೇ ಸ್ನೇಹಕ್ಕೆ ಆಧಾರ

ಬರದು ಸ್ನೇಹದಲಿ ಅನುಮಾನ
ಇರದು ಗೆಳತನದಿ ಬಿಗುಮಾನ
ಮನಗಳಲಿ ಗೌರವ ಸಮ್ಮಾನ
ಸ್ನೇಹಕ್ಕೆ ಸ್ನೇಹವೇ ಬಹುಮಾನ

🖋 *ಮಹೇಶಕುಮಾರ ಹನಕೆರೆ. ಶಿರಸಿ* - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಮನುಷ್ಯರ ಮನಸ್ಸನ್ನು ಅರಿಯುವಂತಹ ಯಾವುದಾದರೂ ಗ್ಯಾಡ್ಜೆಟ್ ಇರಬೇಕಿತ್ತು ಅನಿಸುತ್ತದೆ ಒಮ್ಮೊಮ್ಮೆ...ಕೆಲವರಿಗೆ ತಮ್ಮದನ್ನು ಬಿಟ್ಟು ಬೇರೆ ಎಲ್ಲರ ಜೀವನದ ಬಗ್ಗೇನೆ ಆಸಕ್ತಿ ಜಾಸ್ತಿ ಅನಿಸುತ್ತದೆ...ಸಮಯ ಸಿಕ್ಕಾಗಲೆಲ್ಲ ಅವರಿವರ ವಿಚಾರದಲ್ಲಿ ಮೂಗು ತೂರಿಸುವುದು ಅವರ ಜಾಯಮಾನ...ಅದನ್ನು ಅವರು ಯಾವತ್ತಿಗೂ ಬಿಡುವುದಿಲ್ಲ. ಮೇಲೆ ಬೆಣ್ಣೆಯಂತೆ ಮಾತನಾಡುತ್ತ ಒಳಗೆ ಬೆಂಕಿ ಹಚ್ಚಿಕೊಂಡು ಸಾಯ್ತಿರ್ತಾವೆ....ಅವರ ಪ್ರಕಾರ ಅವರು ಮಾತ್ರ ಒಳ್ಳೆಯವರು ಉಳಿದವರೆಲ್ಲ ಕೆಟ್ಟವರು.. ಅಂತಹವರು ಅಂತ ಮುಂಚಿತವಾಗಿ ಗೊತ್ತಾದ್ರೆ ಅವರಿಂದ ಅಂತರ ಕಾಯ್ದುಕೊಳ್ಳಲು ಸಾಧ್ಯ... 👀

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಬಯಸಿದ್ದೆಲ್ಲ ಸಿಕ್ಕಿಬಿಟ್ಟರೆ ಮನುಷ್ಯನನ್ನು ಹಿಡಿಯಲಾಗುವುದಿಲ್ಲವಂತೆ.... ಹಾಗಾಗಿಯೇ ಇರಬೇಕು ಮನದಲ್ಲಿ ಬಯಸುವುದು ಒಂದು. ಬದುಕಲ್ಲಿ ನಡೆಯುವುದೇ ಮತ್ತೊಂದು ಎಂದಿದ್ದಾರೆ ಅರಿತವರು. ಮನುಷ್ಯನ ಆಸೆಗಳಿಗಂತೂ ಮಿತಿಯೇ ಇರದು. ಕಣ್ಣಿಗೆ ಕಾಣುವುದೆಲ್ಲ ತನಗೆ ಬೇಕೆಂಬ ಅವನ ಬಯಕೆಯ ಸಾಗರ ಬಹಳ ವಿಶಾಲವಾದುದು. ಅವನ ಬಯಕೆಗಳನ್ನೆಲ್ಲ ತೀರಿಸಲು ಬಹುಶಃ ದೇವರಿಗೂ ಸಾಧ್ಯವಾಗದೇನೋ.... ಅದಕ್ಕೆ ಅಂತ ಕಾಣ್ತದೆ ಮನುಷ್ಯ ಬಯಸಿದ್ದುದನ್ನು ಕೊಟ್ಟೂ ಕೊಡದಂತೆ ಆಟವಾಡಿಸ್ತಾನೆ... 

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಸೋತು ಬಾಳಿದರೆ ಒಳ್ಳೆಯದು ಅನ್ನುವುದೇನೋ ನಿಜ....ಪ್ರೀತಿ ಪಾತ್ರರಿಗಾಗಿ ಆಗಾಗ ಸೋಲುತ್ತಾ ಇರೋದೇನೋ ಸರಿಯೇ....ಹಾಗಂತ ಎಷ್ಟು ಅಂತ ಸೋಲೋದು... ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವಷ್ಟು ಸೋಲುವುದರಲ್ಲಿ ಅರ್ಥವಿಲ್ಲ.... ಪ್ರಯೋಜನವೂ ಇಲ್ಲ..... ಸೋತವರೆಲ್ಲ ಗೆದ್ದ ಉದಾಹರಣೆಗಳು ಬಹಳ ಕಡಿಮೆ....🤔🙄

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ನೈಜತೆ ಮತ್ತು ಪ್ರೀತಿ....💞

ಪ್ರತಿಯೊಬ್ಬರಿಗೂ ಅವರದೇ ಆದ ವಿಶಿಷ್ಟ ವ್ಯಕ್ತಿತ್ವ ಇರುತ್ತದೆ. ಮೇಲ್ನೋಟಕ್ಕೆ ಕಾಣುವ ದೇಹ ಸೌಂದರ್ಯ, ಉಡುಗೆ ತೊಡುಗೆಯನ್ನು ಮಾತ್ರ ನೋಡುವ ಜನರು ತಮ್ಮಿಷ್ಟ ಬಂದ ಹಾಗೆ ಕಲ್ಪಿಸಿಕೊಳ್ಳುತ್ತಾರೆ ಆದರೆ ಅವರ ಒಳ ಮನಸಿನ ಆಂತರಿಕ ಸೌಂದರ್ಯವನ್ನು ಅರಿತವರು ಮಾತ್ರ ಅವರೊಂದಿಗೆ ಸಹಜವಾಗಿ ನಿಜವಾದ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ...🌺

🖋 ಮಹೇಶಕುಮಾರ ಹನಕೆರೆ.ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಪ್ರೀತಿ.......💞
ಕಂಗಳು ಭಾರವಾದಾಗ ನಿದಿರೆ
ಮನಸು ಭಾರವಾದಾಗ ಚಿಂತೆ
ಚಿಂತೆಗಳು ಕಾಡಿದಾಗ ನೋವು
ನೋವು ಅಧಿಕವಾದಾಗ ವೇದನೆ
ಇವನೆಲ್ಲ ಮರೆಸುವ ವ್ಯಕ್ತಿಯಲ್ಲಿ
ಭಾವನೆಗಳ ನಿವೇದನೆಯೇ ಪ್ರೀತಿ....💞

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ನಿಜವಾದ ಪ್ರೀತಿಯಿದ್ದಲ್ಲಿ ಕಾಳಜಿ ಇದ್ದೇ ಇರ್ತದೆ.... ಕಾಳಜಿ ಇಲ್ಲದಿದ್ದರೆ ಅದು ಪ್ರೀತಿ ಆಗಿರಲು ಸಾಧ್ಯವೇ ಇಲ್ಲ... ಇಷ್ಟಪಟ್ಟ ಜೀವ ನೊಂದಾಗ ಕಷ್ಟವಾದರೂ ಸರಿಯೇ ಹಾರೈಸಿ ಆರೈಕೆ ಮಾಡುವ ಮನಸಿದ್ದರೆ ಮಾತ್ರ ಆ ಪ್ರೀತಿಗೆ ಬೆಲೆ... ತೋರ್ಪಡಿಕೆಗೆ ಮಾಡುವ ಪ್ರೀತಿ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ...ಪ್ರೀತಿ ಹೃದಯದಾಳದಿಂದ ಚಿಮ್ಮುವ ಚಿಲುಮೆಯಾಗಿದ್ದರೆಷ್ಟು ಚೆನ್ನ ಅಲ್ವಾ.... ಪ್ರೀತಿ ಅನ್ನೋದು ತಂಗಾಳಿ ಅಂತ ಹೇಳೋದು ಸುಮ್ನೆ ಅಲ್ಲಾ.... ಅದು ಒಲಿದ ಹೃದಯಕ್ಕೆ ಸದಾ ತಂಪೆರೆವ ತಂಬೆಲರು....

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ನಾವು ನಮ್ಮಲ್ಲಿ ಅಮೂಲ್ಯವಾದ ಒಂದು ವಸ್ತುವಿದ್ದರೂ ಬೇರೊಂದು ವಸ್ತುವನ್ನು ಬಯಸುತ್ತೇವೆಂದರೆ ಅದು ನಿಜವಾಗಿಯೂ ನಮ್ಮಲ್ಲಿರುವುದಕ್ಕಿಂತ ಅತ್ಯಮೂಲ್ಯವಾದ ವಸ್ತುವೇ ಆಗಿರಬೇಕು..... ಅಲ್ವಾ. 💤

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಸತ್ಯ ಮತ್ತು ಸುಳ್ಳುಗಳಿಗೆ ತಮ್ಮದೇ ಭಾವಗಳಿವೆ. ಮಾತಿನಲ್ಲಿ ಹೇಳುವ ಸುಳ್ಳು ಗೊತ್ತಾಗದಿರಬಹುದು ಆದರೆ ಕಣ್ಣು ಹೇಳುವ ಸುಳ್ಳು ಗೊತ್ತಾಗದೇ ಇರಲು ಸಾಧ್ಯವೇ ಇಲ್ಲ. ತಾವು ನಂಬಿದವರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಒಮ್ಮೆ ಗೊತ್ತಾಗಿಬಿಟ್ಟರೆ ಇನ್ನೆಂದೂ ಅವರು ಎಷ್ಟೇ ಸತ್ಯ ಹೇಳಿದರೂ ಅದು ಸತ್ಯವೆಂದು ನಂಬಿಸಲು ಬಹಳ ಕಷ್ಟಪಡಬೇಕಾಗುತ್ತದೆ... ಸ್ನೇಹ ಮತ್ತು ಪ್ರೀತಿಯಲ್ಲಿ ಹೇಳುವ ಸುಳ್ಳು ಆ ಪವಿತ್ರ ಸಂಬಂಧಗಳನ್ನು ಮುರಿಯುವಷ್ಟು ಶಕ್ತಿಶಾಲಿಯಾಗಿರುತ್ತದೆ... ಸ್ನೇಹ ಮತ್ತು ಪ್ರೀತಿಯ ಮೊದಲ ಶತ್ರು ಸುಳ್ಳೇ ಹೌದು... 😥
🖋 ಮಹೇಶಕುಮಾರ ಹನಕೆರೆ.ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಬದುಕಲ್ಲಿ ಎಷ್ಟೋ ಜನ ಬರುತ್ತಾರೆ ಎಷ್ಟೋ ಜನ ಹೋಗುತ್ತಾರೆ... ಬಂದವರೆಲ್ಲ ಇಷ್ಟವಾಗುವುದಿಲ್ಲ. ಮನಸ್ಸಿಗೆ ಹತ್ತಿರವಾದವರು ಬಿಟ್ಟು ಹೋಗುವುದಿಲ್ಲ.. ಬಿಟ್ಟು ಹೋದವರೆಲ್ಲ ಇಷ್ಟವಾಗದವರೂ ಏನಲ್ಲ... ಸಮಯ ಮತ್ತು ಸಂದರ್ಭಗಳು ಉಳಿಯುವವರು ಮತ್ತು ಬಿಟ್ಟು ಹೋಗುವವರನ್ನು ನಿರ್ಧರಿಸುತ್ತದೆ. ಕೆಟ್ಟ ಸಮಯ ಎದುರಾದಾಗಲೂ ಗಟ್ಟಿಯಾಗಿ ನಿಂತವರು ಮಾತ್ರ ಇಷ್ಟವಾಗುತ್ತಾರೆ.... ಇಷ್ಟಪಟ್ಟವರನ್ನು ಕಷ್ಟಪಟ್ಟಾದರೂ ಸರಿಯೇ ಬಿಡದೆ ಉಳಿಸಿಕೊಳ್ಳಬೇಕು.....💞

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಅಪಾತ್ರರಿಗೆ ಕೊಡುವ ದಾನ,ಅಯೋಗ್ಯರಿಗೆ ಮಾಡುವ ಸಹಾಯ,ಮೋಸಗಾರನಿಗೆ ನೀಡುವ ನ್ಯಾಯ,ವೇಷ ತೊಟ್ಟವರ ಮೇಲಿಟ್ಟ ನಂಬಿಕೆ ಎಲ್ಲವೂ ಖಂಡಿತಾ ವ್ಯರ್ಥವಾಗುತ್ತವೆ.. ಇವೆಲ್ಲಕ್ಕಿಂತ ಮುಖ್ಯವಾದದ್ದೇನೆಂದರೆ ಅಂತಹವರೊಂದಿಗೆ ಮಾಡಿದ ಸ್ನೇಹ ಸಂಬಂಧಗಳು ತಪ್ಪದೇ ಕೆಡುಕನ್ನೇ ತರುತ್ತವೆ... ಕಾರಣ ಅಂತಹವರನ್ನು ಮೂಲದಲ್ಲೇ ಗುರುತಿಸಿ ಅಂತರ ಕಾಯ್ದುಕೊಂಡರೆ ಮುಂದೆ ಎದುರಾಗಬಹುದಾದ ಕೆಡುಕುಗಳಿಂದ ಪಾರಾಗಬಹುದು....🙏

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - "*ನನ್ನ ಮನೆ ಮನದೊಡತಿ"*

ಬೆಳೆದೆ ನೀನು ಹೆತ್ತವರ ಮುದ್ದಿನ ಮಗಳಾಗಿ
ಒಲಿದೆ ನನ್ನನು ನೀನು ಮನದೊಡತಿಯಾಗಿ
ಬಂದೆ ನೀನು ನನ್ನ ಬಾಳ ನಂದಾದೀಪವಾಗಿ
ಕೈಯ ಹಿಡಿದು ಜೊತೆಯಾದೆ ಮಡದಿಯಾಗಿ

ಸಂಗಾತಿಯಾಗಿ ಬಾಳಿನ ದೀಪ ಬೆಳಗಿದವಳು
ಮನೆಯ ಮನದ ಕತ್ತಲೆಯನು ಕಳೆದವಳು
ಅಂಗೈಯ ಮೇಲಣ ಮಣಿ ಮುತ್ತಿನಂತವಳು
ಬಂಗಾರದ ಬೆಲೆಯ ಮೀರಿಸಿದ ಗುಣದವಳು

ಕಷ್ಟ ಸುಖಗಳಲಿ ಜೊತೆಯಾಗಿ ನಿಂತವಳು
ಒಲವ ಬುತ್ತಿಯ ತೆರೆದು ಸಿಹಿ ತುತ್ತನಿತ್ತವಳು
ನೋವುನಲಿವುಗಳನ್ನು ಕೂಡಿ ಉಂಡವಳು
ಬಾಳಿನ ಪಯಣವನು ಸುಖವೆನಿಸಿದವಳು

ಜನುಮ ದಿನದಲಿ ನಿನಗೆ ಶುಭವ ಕೋರುವೆನು
ಅನುಗಾಲ ನಗುನಗುತ ಬಾಳೆಂದು ಹರಸುವೆನು
ಹೆತ್ತ ದೈವಗಳಲ್ಲಿ ಮನವಿಯನು ಮಾಡುವೆನು
ನೂರ್ಕಾಲ ಸುಖವಾಗಿ ಇರಿಸೆನುತ ಬೇಡುವೆನು - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಸಂಬಂಧಗಳು.....!!
 ಹಣ, ಆಸ್ತಿ ಸಂಪಾದನೆಗೆ ಬೆಲೆ ಕೊಡುವ ಸಂಬಂಧಗಳಿಗಿಂತ ಒಳ್ಳೆಯ ಸಂಬಂಧಗಳನ್ನು ಸಂಪಾದಿಸಿ ಉಳಿಸಿಕೊಳ್ಳುವ ಜೀವಗಳು ಶ್ರೇಷ್ಠ. ಹಣ ಸಂಪಾದನೆ ಯಾರಾದರೂ, ಹೇಗಾದರೂ ಮಾಡಬಹುದು.. ಆದರೆ ಒಳ್ಳೆಯ ಸಂಬಂಧಗಳನ್ನು ಸಂಪಾದನೆ ಮಾಡುವುದು ತುಸು ಕಷ್ಟವೇ ಸರಿ... ಅಂತಹ ಸಂಬಂಧಗಳು ದೊರೆತಾಗ ಅವುಗಳನ್ನು ದೂರಾಗದ ಹಾಗೆ ಕಾಯ್ದುಕೊಳ್ಳಬೇಕು... ಒಳ್ಳೆಯ ಸಂಬಂಧಗಳು ಬಹು ಸೂಕ್ಷ್ಮ ಕನ್ನಡಿಯ ಹಾಗೆ ಇರುತ್ತವೆ... ಒಮ್ಮೆ ಚೂರಾದರೆ ಮುಗಿಯಿತು‌.. ಮತ್ತೆ ಜೋಡಿಸಿದರೂ ಅದರಲ್ಲಿ ಕಾಣುವುದು ಚೂರುಚೂರಾದ ಪ್ರತಿಬಿಂಬ ಮಾತ್ರ....

🖋  ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ತಾಯಿಯಂತೆ ಕರುಣೆ ತೋರಿ, ಮಗುವಿನಂತೆ ಮಮತೆ ತೋರಿ, ಗೆಳತಿಯಾಗಿ ಕೈ ಹಿಡಿದು ನಡೆಸಿ, ಬಾಳ ಹಾದಿಗೆ ಬೆಳಕು ಬೀರಿ ದೇವತೆಯಾದವಳನ್ನು ಪೂಜಿಸಿ,ಆರಾಧಿಸಬಹುದಷ್ಟೆ.ಬದಲಾಗಿ ಆ ದೇವತೆಯನ್ನು ಪ್ರೀತಿಯೆಂಬ ಬಂಧನದಲ್ಲಿ ಸಿಲುಕಿಸಿ ನನ್ನವಳಾಗಿಸಿಕೊಳ್ಳುವೆನೆಂಬ ಭ್ರಮೆಯಲ್ಲಿ ತಾನೇ ಸಿಲುಕಿಬಿಡುವುದಕ್ಕೆ ಕಾರಣ ಭಾವುಕ ಮನಸ್ಸುಗಳು ಬೇಗನೆ ಸೋತು ಹೋಗುವುದೇ ಕಾರಣವಿರಬಹುದು. ಭಾವನಾತ್ಮಕ ಸಂದರ್ಭಗಳಲ್ಲಿ  ಕ್ಷಣದ ಸಿಟ್ಟು, ಅಸಹನೆಯು ಅಂತಹವರಲ್ಲಿ ಸಹಜ... ಆದರೆ ಅದು ಕ್ಷಣಿಕವಾದದ್ದು...

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ನಲ್ಲೆ....
ನೀ ನನ್ನ ಬಾಳ ಬಾಂದಳದ ಮುಂಜಾನೆಯ ಹೊಂಗಿರಣ.ಸುಡುವ ಬಿಸಿಲಲಿ ತಂಪೆರೆವ ಹೊಂಗೆಯ ತಣ್ಣೆಣಲು. ದಣಿದು ಒಣಗಿದ ಎದೆಗೆ ಒಲವ ಹನಿ ಸುರಿವ ಮಳೆ ಮೋಡ. ನೊಂದು ಸೊರಗಿದ ಎದೆಗೆ ಬಲ ಕೊಡುವ ದೇವತೆ. ಕಣ್ಣೀರು ಒರೆಸಲು ಬಂದವಳು ನೀನೆ ಕಣ್ಣಾದೆ. ನೋವ ಮರೆಸಲು ಬಂದವಳು ಸುಖದ ಸಿರಿ ಸುರಿದೆ. ದಾರಿ ಕಾಣದೆ ಇರಲು ಕೈಯ ನೀ ಹಿಡಿದು ನನ್ನ ಜೊತೆ ನಡೆದೆ...💞

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಪ್ರೀತಿಯೆಂಬುದು ಗಾಳಿಯನ್ನು ತುಂಬಿಸಿದ ಬಲೂನಿನ ಹಾಗೆ. ಅತಿಯಾದ ನಂಬಿಕೆ ಮತ್ತು ಅಪನಂಬಿಕೆ ಎರಡೂ ಮುಳ್ಳಿನ ಹಾಗೆ... ಈ ಎರಡರಲ್ಲಿ ಯಾವ ಮುಳ್ಳು ತಾಗಿದರೂ ಬಲೂನಿನಲ್ಲಿ ತುಂಬಿದ ಪ್ರೀತಿಯೆಂಬ ಉಸಿರು ಹೋಗಿ ಕಡೆಗೆ ಉಳಿಯುವುದು ಹರಿದ ಖಾಲಿಯಾದ ಬಲೂನು ಮಾತ್ರ...
ಪ್ರೀತಿಯ ಬಲೂನನ್ನು ಜೋಪಾನ ಮಾಡಿದರೆ ಮಾತ್ರ ಕೊನೆಯವರೆಗೆ ಉಳಿದೀತು....💞

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಅತಿಯಾದ ಭಾವುಕತೆ ಎಲ್ಲವನ್ನೂ ನಂಬುವಂತೆ ಮಾಡುತ್ತದೆ. ಭಾವುಕ ಮನಸ್ಸಿಗೆ ಕಂಡದ್ದು, ಕೇಳಿದ್ದು ಎಲ್ಲವೂ ಸತ್ಯವೆ. ನೈಜತೆ ಇನ್ನೇನೋ ಇದ್ದರೂ ಅದನ್ನು ಪರಾಮರ್ಶೆ ಮಾಡುವ, ಅರಿತುಕೊಳ್ಳುವ ತಾಳ್ಮೆ ಭಾವುಕ ಮನಸ್ಸಿಗೆ ಇರದು....ಇದರ ಪರಿಣಾಮವೆಂಬಂತೆ ಭಾವುಕ ಮನಸ್ಸು ಬಲುಬೇಗ ನೋವಿಗೆ ಒಳಗಾಗುತ್ತದೆ..... 🤕

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಮನಸ್ಸು ಭಾರವಾದಾಗ ಮಾತುಗಳು ಮೌನದಲ್ಲಿ ಲೀನವಾಗುತ್ತವೆ. ಮೌನವೇ ಮಾತಾದಾಗ ಮನದ ಅಂತರಾಳ ಅರಿವಾಗುತ್ತದೆ. ಮಾತಲ್ಲಿ ಹೇಳಲಾಗದ ನೂರು ಭಾವಗಳು ಮೌನವೇ ಮಾತಾದಾಗ ತಿಳಿಯುತ್ತವೆ. ಅದಕ್ಕೆ ಹೇಳಿರಬಹುದು ಮಾತಿಗಿಂತ ಮೌನ ಮಿಗಿಲೆಂದು. ಆಗಾಗ ಅನಿಸುತ್ತದೆ ಮೌನಿ ನಾನಾಗಿಬಿಡಲೇ ಎಂದು...🤗 - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಎಲ್ಲವೂ ನಾವು ಅಂದುಕೊಂಡ ಹಾಗೆಯೇ ನಡೆಯುತ್ತಿದೆ  ಅಂದುಕೊಂಡರೆ ಅದು ನಮ್ಮ ಭ್ರಮೆಯೂ ಆಗಿರಬಹುದು ಅಥವಾ ಹಾಗೆ ನಡೆಯುತ್ತಿರುವುದು ಕ್ಷಣಿಕವೂ ಆಗಿರಬಹುದು....ಆ ಪ್ರಕೃತಿಯೇ ಕ್ಷಣಮಾತ್ರದಲ್ಲಿ ತನ್ನ ರೂಪವನ್ನು ಬದಲಾಯಿಸುತ್ತದೆ.
ಹಾಗಿರುವಾಗ ಅದೇ ಪ್ರಕೃತಿಯ ಪ್ರತಿರೂಪವಾದ ಮನುಷ್ಯರ ಕಲ್ಪನೆಗಳು ಬದಲಾಗದೇ ಇರಲು ಸಾಧ್ಯವೇ... ಅಂತಹ ಬದಲಾವಣೆಗೆ ಒಳಪಡದೆ ಉಳಿದದ್ದು ಮಾತ್ರ ವಾಸ್ತವ...ಅದೇ ಶಾಶ್ವತ. 🌺

🖋 ಮಹೇಶಕುಮಾರ ಹನಕೆರೆ, ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - 
SOME ಬಂಧ...... 
ಸಂಬಂಧಗಳನ್ನು ಸೃಷ್ಟಿಸುವುದಲ್ಲ ಅವು ತಾವಾಗಿಯೇ ಹುಟ್ಟಬೇಕು... ಸಂಬಂಧ ಬೆಳೆಯಲು ಕಾರಣಗಳೂ ಬೇಕಿಲ್ಲ... ಯಾವುದೇ ಕಾರಣ ಕೇಳದೆ ಬೆಸೆದ ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ. ಪ್ರತಿಯೊಂದಕ್ಕೂ ಕಾರಣ ಹುಡುಕುವ ಸಂಬಂಧಗಳು ಅಳಿಯುತ್ತವೆ... ಯಾವುದು ಹೇಗಿದೆಯೋ ಅದನ್ನು ಹಾಗೆಯೇ ಒಪ್ಪಿಕೊಂಡು ಅಪ್ಪಿಕೊಂಡ ಮನಸುಗಳ ಸಂಬಂಧ ಚಿರನೂತನ... ಚಿರಸ್ಥಾಯಿಯಾಗಿ ಇರುತ್ತದೆ.

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಕೆಲವೊಮ್ಮೆ ಕಾರಣ ತಿಳಿಯದೇನೆ ಮನಸ್ಸು ಖಾಲಿ ಖಾಲಿ ಅನಿಸಿಬಿಡ್ತದೆ. ಕಾರಣ ಏನೆಂದು ಗೊತ್ತಿದೆ ಅನಿಸಿದರೂ ಅದಲ್ಲ ಅಂತ ಮನಸ್ಸು ಹೇಳ್ತದೆ. ನಮ್ಮದೆಂದು ನಾವಂದುಕೊಂಡ ವಸ್ತು ನಮ್ಮ ಅರಿವಿಗೆ ಬಾರದೇನೆ ನಮ್ಮಿಂದ ದೂರಾಗ್ತಿದೆ ಅನಿಸಿದಾಗ ಮನಸ್ಸಿನ ಒಂಟಿತನವು ಇದಕ್ಕೆ ಕಾರಣವಿರಬಹುದು. ಕಂಡ ಕನಸುಗಳು ನನಸಾಗುವ ಮುಂಚೆ ಕರಗಿದಾಗಲೂ ಇಂತಹ ಸ್ಥಿತಿ ಮನಸ್ಸಿನದು. ಮನದಾಳಕ್ಕೆ ಇಳಿದ ಭಾವಗಳು ಮರೆಯಾದಾಗ ಮನಸ್ಸಿನ ಅಳಲು ಸಹಿಸಲಾಗದು....😰

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಬದುಕು ನಾವು ಅಂದುಕೊಂಡ ಹಾಗೆಯೇ ನಡೆಯುತ್ತದೆಂಬುದು ಭ್ರಮೆ. ಅದು ಸರಳ ಹಾದಿಯೂ ಅಲ್ಲ. ನಾನಾ ತಿರುವುಗಳು, ಕಲ್ಲು ಮುಳ್ಳುಗಳು, ಏಳುಬೀಳುಗಳು ಅತ್ಯಂತ ಸಹಜ. ಬದುಕೆನುವ ಪಯಣದ ಹಾದಿಯಲ್ಲಿ ಎದುರಾಗುವ ಇವೆಲ್ಲವನ್ನೂ ಎದುರಿಸಿ ಸಾಗುವುದು ಅನಿವಾರ್ಯ. ಕೈ ಬೀಸಿ ನಡೆದರೆ ಕಷ್ಟವೋ ಸುಖವೋ ಜೀವನ ಪಯಣ ಸಾಗಿ ಗುರಿ ಮುಟ್ಟಬಹುದು. ಯಶಸ್ವಿ ಪಯಣದ ಸಿಹಿ ಕಾದಿರದಿರದು. ಕೈ ಚೆಲ್ಲಿ ಕುಳಿತರೆ ಅಲ್ಲಿಗೆ ಬದುಕಿನ ಪಯಣ ಮುಗಿದಂತೆಯೇ... 

🖋 ಮಹೇಶಕುಮಾರ ಹನಕೆರೆ. ಶಿರಸಿ 🤓 - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಜೀವನ ಅನ್ನುವುದು ಕಠಿಣ ಪ್ರಶ್ನೆಗಳಿಂದ ತುಂಬಿದ ಪರೀಕ್ಷೆ ಎಂಬುದು ನಿಜವೇ ಆದರೂ ಎಲ್ಲ ಪ್ರಶ್ನೆಗಳಿಗೆ ಉತ್ತರಗಳಿವೆ ಎಂಬುದೂ ಸತ್ಯ. ಪ್ರಶ್ನೆಗೆ ತಕ್ಕ ಹಾಗೆ ಉತ್ತರಿಸುವುದನ್ನು ಕಲಿಸುವುದು ಜೀವನಾನುಭವದ ಪಾಠ.ಜಾಣತನದಿಂದ ಸರಳವಾಗಿ ಉತ್ತರಿಸುತ್ತ ಜೀವನದ ಪರೀಕ್ಷೆ ಪಾಸಾಗಬೇಕು.ಅದರಲ್ಲಿ ಕೆಲವರು ಡಿಸ್ಟಿಂಕ್ಷನ್ ಪಡೆದರೆ ಕೆಲವರು ಜಸ್ಟ್ ಪಾಸ್.. ಮತ್ತೆ ಕೆಲವರು ನಪಾಸು....

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಕೆಲವೊಮ್ಮೆ ಈ ಮಾತುಗಳು ನಿಜ ಅನಿಸುತ್ತವೆ...

ಭಾವನೆಗಳನ್ನು ನಿಯಂತ್ರಿಸುವ ಕಲೆ ಎಲ್ಲರಿಗೂ ಕರಗತವಲ್ಲ, ಆದರೆ ಭಾವನೆಗಳನ್ನು ನಿಯಂತ್ರಿಸುವುದು ಅತ್ಯಂತ ಅವಶ್ಯಕ ಅನಿಸುವುದು ಯಾವಾಗ ಎಂದರೆ ಭಾವನಾತ್ಮಕ ಕ್ಷಣದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲಾರದ ಸಂದರ್ಭ ಎದುರಾದಾಗ...
ಅಂತಹ ಸಮಯ ಎಲ್ಲರಿಗೂ ಒಂದಲ್ಲ ಒಂದು ಬಾರಿ ಅಥವಾ ಆಗಾಗ ಎದುರಾಗಿಯೇ ಆಗುತ್ತದೆ. ಆ ಸಂದರ್ಭದಲ್ಲಿ ಬೇಸರ ಮುನಿಸು ನಿರಾಸೆಗಳು ಅದರ ಫಲಶೃತಿಯಾಗಿರುತ್ತವೆ.... ಹಾಗಾಗಿ ಭಾವನೆಗಳನ್ನು ಹಂಚಿಕೊಳ್ಳುವ ಮೊದಲು ತುಸು ಆಲೋಚಿಸುವುದು ಹಿತಕರ.....

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ನನ್ನೊಲವಿನ ಗೆಳತಿ.....
ಭಾವ ಜೀವಿಯ ಕವಿಯಾಗಿಸಿದೆ ಸ್ಪೂರ್ತಿ ಚಿಲುಮೆ
ನಾನು ಬಯಸಿ ಬರಲು ನೀನು ನೀಡಿದೆ ಒಲುಮೆ
ಬದುಕಿನಲಿ ಜೊತೆಯಾಗಿ ಉಸಿರಾದವಳು ನೀನೆ
ನನ್ನುಸಿರಿನ ಕೊನೆವರೆಗೆ ನೀ ನನ್ನೊಡನಿರುವೆ ತಾನೆ
ಮೌನಿಯನು ಮಾತುಗಾರನನ್ನಾಗಿಸಿದ ನುಡಿ ಜಾಣೆ
ಬಾಳನ್ನು ಸಂಗೀತಮಯವನ್ನಾಗಿಸಿದ ಜೀವ ವೀಣೆ
ಯಾವ ಕಾರಣಕೆ ನಾ ಸೋತು ಹೋದೆನೋ ಕಾಣೆ
ನೀನಿಲ್ಲದಿರಲು ನನ್ನೊಡನೆ ಬಾಳಲಾರೆನು ನನ್ನಾಣೆ

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ಕೆಲವೊಮ್ಮೆ ಅನಿರೀಕ್ಷಿತವಾಗಿ ನಡೆಯುವ ಘಟನೆಗಳು ಸಂತೋಷ ತರುತ್ತವೆ... ಆದರೆ ನಿಜ ಏನೆಂದರೆ ಅನಿರೀಕ್ಷಿತ ಘಟನೆಗಳಿಂದ ಸಂತೋಷಕ್ಕಿಂತ ಬೇಸರ, ನೋವು, ಕಷ್ಟ ಇಂತಹುವೇ ಸಿಗುವುದು ಅಧಿಕ. 
ಅನಿರೀಕ್ಷಿತ ಘಟನೆಗಳನ್ನು ಅವುಗಳ ಪಾಡಿಗೆ ಘಟಿಸಲು ಬಿಟ್ಟು ದಿನ ನಿತ್ಯ ಆಗಬೇಕಾದ ವಿಷಯಗಳ ಕಡೆಗೆ ಗಮನಹರಿಸುವುದು ಜೀವನದ ಅನಿವಾರ್ಯತೆ... 😏

🖋 ಮಹೇಶಕುಮಾರ ಹನಕೆರೆ. ಶಿರಸಿ - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

ಮಹೇಶಕುಮಾರ ಹನಕೆರೆ
Quote by ಮಹೇಶಕುಮಾರ ಹನಕೆರೆ - ನಗುವ ಮುಖವಿದ್ದರೆ ಸಾಲದು ನಗುವ ಮನಸಿರಬೇಕು. ಮೇಲೆ ನಗುತ್ತ ಒಳಗೆ ದ್ವೇಷಿಸುವವರೇ ಹಿತಶತ್ರುಗಳು. ಎದುರು ನಿಂತು ಕೊಲ್ಲುವ ಶತ್ರುವನ್ನಾದರೂ ನಂಬಬಹುದು ಆದರೆ ಸವಿಮಾತನಾಡುತ್ತ ಸಮಯ ಸಾಧಿಸಿ ಬೆನ್ನಿನಲ್ಲಿ ಚೂರಿ ಹಾಕುವವರನ್ನು ಎಂದಿಗೂ ನಂಬಬಾರದು. ಅವರಿಂದ ದೂರವಿದ್ದಷ್ಟೂ ಒಳ್ಳೆಯದು...💐

🖋 ಮಹೇಶಕುಮಾರ ಹನಕೆರೆ ಶಿರಸಿ - Made using Quotes Creator App, Post Maker App