suma📷🍃💚🎧❤️ profile
Creator Profile

suma📷🍃💚🎧❤️

Sharing quote designs and daily inspiration.

9 Posts
4 Followers
0 Following
S
suma📷🍃💚🎧❤️
Quote by suma📷🍃💚🎧❤️ - ಮನುಷ್ಯನಿಗೆ ಅಹಂಕಾರ ಬರೋದಕ್ಕೆ
ಎರಡೇ ಕಾರಣ. ಒಂದು ಸೌಂದರ್ಯ 
ಇನ್ನೊಂದು ಹಣ.ನಮ್ ಪುಣ್ಯ ಅವೆರಡು
ನಮ್ ಹತ್ರ ಇಲ್ಲ. ಇರೋದೊಂದೇ ಈ
ಬಿಕನಾಸಿ ನಗು.......😊
 - Made using Quotes Creator App, Post Maker App
S
suma📷🍃💚🎧❤️
Quote by suma📷🍃💚🎧❤️ - ಉನ್ನತ ಪರ್ವತ ಮಾಲೆಯ ಬೆಡಗನು
ಸನ್ನುತ ಪರಿಮಳ ಗಂಧದ ಸೊಬಗನು 
ಚಿನ್ನದ ಗಣಿಯನು, ಮೊರೆಯುವ ಕಡಲನು 
ಕನ್ನಡ ನಾಡಿನೊಳಲೆಯುತ ಕಂಡೆನು... - Made using Quotes Creator App, Post Maker App
S
suma📷🍃💚🎧❤️
Quote by suma📷🍃💚🎧❤️ - 'ಸಮಸ್ಯೆಗಳ ಬಗ್ಗೆ ಚಿಂತಿಸದೆ 
ಸವಲಾಗಿ ಸ್ವೀಕರಿಸೋಣ' - Made using Quotes Creator App, Post Maker App
S
suma📷🍃💚🎧❤️
Quote by suma📷🍃💚🎧❤️ - "ಯಾವುದೇ ವಿಚಾರದಲ್ಲಾಗಲಿ
ಅಭಿಮಾನವಿರಲಿ ವಿನಃ
ದುರಾಭಿಮಾನವಲ್ಲ!"
 - Made using Quotes Creator App, Post Maker App
S
suma📷🍃💚🎧❤️
Quote by suma📷🍃💚🎧❤️ - ಭದ್ರತೆಯ ಬಂಧನದ ನೆಪದಲ್ಲಿ 
ಸ್ವಾತಂತ್ರ್ಯವನ್ನೇ ಕಳೆದುಕೊಂಡ 
ಈ ಪುಟ್ಟ ಜೀವಕೆ ಸ್ವಾತಂತ್ರ್ಯವೇ 
ಬದುಕಿನ ಉಸಿರಂತೆ..............
ಈ ಮುಗ್ಧ ಮನವ ಈಗ ಪಂಜರದಲ್ಲಿ
ಬಂಧಿಸಿದಾಗ ಸಾವಿನ ಕದ ತೆರೆಯಿತಂತೆ!
 - Made using Quotes Creator App, Post Maker App
S
suma📷🍃💚🎧❤️
Quote by suma📷🍃💚🎧❤️ - ಮುಂಗಾರಿನ ಹೇ ಮಳೆಹನಿಗಳೇ 
ನಿಮ್ಮ ಜೀವ ಸೆಲೆ ಯಾವುದು?
ದುಂಡಗಿನ ಹನಿ ಬಿಂದುಗಳು ಹಸಿರ 
ಪರ್ಣಗಳ ಮೇಲೆ ನಗು ಮೊಗದಿ 
ಹೊಳೆಯುವ ಮುತ್ತುಗಳ ಹಾಗೆ 
ಯಾರಿಗೋ ಕಾಯುತಾ ಕುಳಿತಿದೆ 
ಬರಿದಾದ ಸುಧೆಯು ಭೋರ್ಗರೆಯುತ 
ಸಾಗರವ ಸೇರ ಬಯಸಿದೆ...
ಇಲ್ಲಿಯವರೆಗೂ ಎಲ್ಲೋ ಅವಿತಿದ್ದ 
ಮಳೆಗಾಲದ ಅತಿಥಿಗಳು ಮೆಲ್ಲಗೆ 
ಪುಟ್ಟ ಹೆಜ್ಜೆಯನಿಡುತಾ ಬರಲು 
ನೋಡೋ ನಯನಗಳಿಗೆ ಸಂತಸ ಭಾವ 
ಅಣಬೆ ಭುವಿಯೊಡೆದು ಸುವಾಸನೆ 
ಬೀರುತಾ ಬರುತಿದೆ, ಕೆಸುವಿನ ಎಲೆ 
ಮೇಲೆ ಹವಳ ಮುತ್ತುಗಳು ಜಿನುಗುತಿದೆ 
ಬೆಳ್ಳಕ್ಕಿ ಹಿಂಡು ಸಂಧ್ಯಾರಾಗದಿ ಮರಳಿ 
ಗೂಡಿಗೆ ಮೆರವಣಿಗೆ ಹೊರಟಿದೆ 
ಮಿಂಚುಹುಳಗಳು ಮನಕೆ ಬೆಳಕಿನ 
ರಂಗಿನಾಟವಾಡಿರಲು, ಮಂಡೂಕಗಳು 
ಸಂಗೀತಲಹರಿಯಲಿ ತನ್ನದೇ ರಾಗ 
ಎಂಬಂತೆ ಹಾಡಿದೆ.... ಮಳೆ ಹನಿಗಳು ಮೆಲ್ಲನೆ 
ಸದ್ದು ಮಾಡುತಾ ಕುಣಿಯುತಿರೆ,
ಈ ತನುಮನವು ಬೆಚ್ಚಗಿನ ನಿದ್ರೆಯ 
ಬಯಸಿದೆ 



S🍃 - Made using Quotes Creator App, Post Maker App
S
suma📷🍃💚🎧❤️
Quote by suma📷🍃💚🎧❤️ - ಸೂರ್ಯ ರಶ್ಮಿ ಧರೆಗಿಳಿದು ಬರಲು ಸತ್ಯಲೋಕದ 
ಹೊನಲೇ ಹರಿದಂತೆ ಭಾಸವಾಯಿತು...
ಎಂಥಾ ಹಿತಮಿತ ಬೆಡಗು ಅಂತೀರ
ಕಣ್ಮನ ಹೃದಯ ತುಂಬುವ ಒನಪು ವಯ್ಯಾರ 
ಗಿರಿಶ್ರೇಣಿಗಳ ಏರಿಳಿತಗಳ ಮಧ್ಯೆ 
ಗಿಡಮರ ಹೂಬಳ್ಳಿ ಲತೆಗಳ ನಡುವಿನಲಿ ವಿಹಂಗಿಯ 
ಸಂಚಾರವು ಭುವಿಗಿಳಿದ ನಾಕಾದಂತೆ 
 ಆಕಾಶದಿ ಮೂಡುವ ಚಿತ್ತಾರವು 
ನೀರಿನಲೆಗಳ ಮೇಲಿನ ದರ್ಪಣದಂತಿರಲು 
ಭೂಮಿಯಾಕಾಶದ ನಡುವೆ ರಂಗಿನೋಕುಳಿ 
ಮನಸು ತುಂಬುವ ಆಹ್ಲಾದ ಮಣ್ಣ ವಾಸನೆಯೋ ಸ್ವಾದ 
ಭುವಿ,ಪ್ರಕೃತಿಯ ಒಡಲ ಹಂದರಕೆ ಹಾಡಾಗಿ, 
ಕಂಡರಿಯದ ಕಡಲೆದೆಗೆ ಭಾವವಾಗಿ, ದೂರ 
ದಿಗಂತದಲಿ ಕರಿಮುಗಿಲ ನಾಟ್ಯವಾಡಿರಲು 
ಪ್ರಕೃತಿಯ ಮಡಿಲೇ ರಂಗಮಂದಿರ ನಾವೆಲ್ಲಾ 
ಕಲಾಸೌಂದರ್ಯಕೆ ಮೂಕ ಪ್ರೇಕ್ಷಕರು 
ಬಣ್ಣಿಸಲು ನಾ ಕಾಣೆ ಪ್ರಕೃತಿಯ ಚೆಲುವನು 
ತದ್ಯಾತ್ಮ ಭಾವದಿ ನಾ ನಿಸರ್ಗ 
ಆರಾಧಕಳಷ್ಟೆ.......................🍃


 - Made using Quotes Creator App, Post Maker App
ಸಹಸ್ರಪದಿ
Quote by ಸಹಸ್ರಪದಿ - ಪ್ರಕೃತಿಯೊಂದೇ 
ದೇವರ ಕಲೆ
ಉಳಿದೆಲ್ಲವೂ ಕೃತಕ  - Made using Quotes Creator App, Post Maker App
S
Suma Suma
Quote by Suma Suma - ಒಳ್ಳೆಯ ಚಿತ್ರಗಳನ್ನು📷ತೆಗೆಯುವುದಕ್ಕೆ 
ಕೆಲವು ಕಾಲದ ಪರಿಶ್ರಮ ಮತ್ತು 
ತಾಳ್ಮೆ ಬೇಕು. ಇದು ಹೇಳಿಸಿಕೊಂಡು 
ಕಲಿಯುವ ವಿದ್ಯೆಯೆಂದು ನನಗೆ 
ಅನಿಸುವುದಿಲ್ಲ. ನಾವೇ ಸ್ವತಃ 
ಸೃಜನಶೀಲತೆ, ನೈಪುಣ್ಯತೆಯಿಂದ 
ಪ್ರಯೋಗ ಮಾಡಿ ನಿಧಾನವಾಗಿ 
ಕಲಿಯುವ ಸುಂದರಮಯ ಕಲೆಯಾಗಿದೆ - Made using Quotes Creator App, Post Maker App