anandakavi profile
Creator Profile

anandakavi

Sharing quote designs and daily inspiration.

688 Posts
46 Followers
1 Following
A
anandakavi
Quote by anandakavi - *ಒಗೆತನ* 

ಸಾಗುವುದು ದಾರಿ *ಒಗೆತನ* ಐಸಿರಿ
ಮಾಗಿಹವು ಬದುಕಿದ ಜೀವಗಳಿಲ್ಲಿ// ಮಾದೇವ 
ಹಗೆತನವೆಂದು ಬಾರದಿರಲಿ.

ಪಟ್ಟಣದ ಬದುಕು ಪುಟ್ಟದಾಗಿ ಇರಬೇಕು
ಗಟ್ಟಿಯಾಗೈತವ್ವ  ಹಳ್ಳಿಯ *ಒಗೆತನ*// ನೋಡವ್ವ
ಕೊಟ್ಟರೂ ಸಿಗದವ್ವ ಮನೆತನ.

ಹಳ್ಳಿಯ ಜೀವನ ಬಳ್ಳಿಯ ಹಂಗ
ಕಳ್ಳು  ಬಳ್ಳಿಯ *ಒಗೆತನ* // ನನತವರು 
ಮುಳ್ಳಾಗ ಬ್ಯಾಡವ್ವ ಕೊನೆತನ.

ಕೂಡಿ ಬಾಳವ್ವ ಗೂಡದು ಮಗಳ 
ಪಾಡು ಪಟ್ಟಾರ ಕಟ್ಟಲು *ಒಗೆತನ*// ಕೇಳವ್ವ 
ದಡ ಮುಟ್ಟಿಸವ್ವಾ ಮನೆತನ.

ಗದ್ದಲದ ಮನ್ಯಾಗ ಸುದ್ದಿಯ ಮಾಡಬ್ಯಾಡ
ಸದ್ದಾದರ ವಡಿತೈತಿ *ಒಗೆತನ*// ಕೇಳವ್ವ
ಮುದ್ದು ಮಾಡಿ ಬುದ್ಧಿ ಹೇಳವ್ವ.

ಬಿರುಕು ಬಂದಾಗ ಮಾರುಗ್ಯವ ಜೀವ
ಹರುಕಾಯ್ತು ನೋಡ *ಒಗೆತನ*// ಮಾವಯ್ಯು
ಬರುಡಾಗದಿರಲಿ ಶತಮಾನದ ಹಿರಿತನ.


✍️ ಆನಂದ ಕವಿ - Made using Quotes Creator App, Post Maker App
A
anandakavi
Quote by anandakavi - *ಪಲ್ಲವಿ*

ಅಮ್ಮನ ಮಡಿಲ ಮೊದಲು 
ನನ್ನ ಕೈ ಸೇರಿದ್ದೆ ನೀನು.
ಹಾಲು ಗುಲಾಬಿಯ ಬಣ್ಣ
ಆಕರ್ಷಕ ಹೊಳೆವ ಕಣ್ಣ
ಹವಳದ ತುಟಿ ಸಿಹಿ ಜೇನು 

ಅಪ್ಪನ ಮೂಗು ಅಮ್ಮನ ಬಣ್ಣ
ಕನಸಿನ ಕೂಸಿವಳು ಚಿನ್ನ 
ತುಂಟ ನಗೆಯ ಬೀರುತ 
ಗೆಜ್ಜೆ ಕಾಲು ಹಾಕುತ
ಹರಿವ ನದಿಯಂತೆ ನೀನು.

ಮುತ್ತಿನಂತೆ ಸಿಹಿ ಮಾತು 
ಹೊಸ ಪದಗಳ ಪಲ್ಲವಿ
ಹೊಸ ಚಿಗುರಿನ ಸಂಭ್ರಮದ
ದಿಟ್ಟತನದ ಚೆಲುವಿ 

ಸವಿಗನಸ ಹೊತ್ತು ಜೀವಿಸೂ
ಧೈರ್ಯ ಉತ್ಸಾಹದ ಸಹಚಾರಿ 
ಸೂಕ್ಷ್ಮ ಭಾವ ,ಮನಸನರಿಯುವ
ಪ್ರೀತಿ ಹೃದಯದ ಸಂಚಾರಿ .

ಆನಂದಕವಿ


 - Made using Quotes Creator App, Post Maker App
A
anandakavi
Quote by anandakavi - *ಬಸವರಾಜ ಮಾಮ*

ಶಿಸ್ತು. ,ಸಮಯಪ್ರಜ್ಞೆಯೇ ಅವರ ಉಸಿರು 
ಮೌಲ್ಯಗಳು ಸಂಸ್ಕಾರ ಜಾಗೃತ ಮನಸಿನವರು.
ಓದಿ, ಕಲ್ಯಾಣಿ,ಬಿರ್ಲಾಲೀ ಉದ್ಯೋಗ ಪಡೆದರು 
ಅಣ್ಣ ತಮ್ಮ, ಅಕ್ಕ ತಂಗಿಯರ ಓದಿಗೆ ಪ್ರಾಶಸ್ತ್ಯ.

ಬಾಲ್ಯವೆಲ್ಲ ಓದು, ಸಹಾಯ ,ಅನುಶಾಸನ
ಬುದ್ಧಿವಂತ, ಅಶಿಸ್ತು ಕಂಡಾಗ ಸಿಟ್ಟು ವಿಪರೀತ 
ಪ್ರೀತಿ ತೋರಿಸುವಲ್ಲವರು ಸ್ವಲ್ಪ ದೂರವಿದ್ದಾತಾ 
ಆದರ್ಶ, ನಿಯಮ, ಸೇವೆಗಳ ಅಳವಡಿಸಿದಾತ 

ವಿಜಯಲಕ್ಷ್ಮೀ ಬಾಳಿಗೆ ಶಿಸ್ತಿನ ಸಿಪಾಯಿ ಆತ
ಮೂರು ಮಕ್ಕಳು ಓದು,ಪ್ರಾಮಾಣಿಕತೆ ಕಲಿಸಿದಾತ 
ಸಿದ್ಧಿ ಸಮಾಧಿ ಯೋಗದ ಮೂಲಕ ಧ್ಯಾನದ ಪಾಠ 
ಹದಿನೆಂಟು ವರ್ಷ, ಸತತ ನೆಡೆದ ಅಯ್ಯಪ್ಪನ ಭಕ್ತ .

ನಿವೃತ್ತ,ಮದುವೆ ಮೊಮ್ಮಕ್ಕಳು, ಪ್ರೀತಿಯ ಅಜ್ಜನೀಗ 
ಆಯಾಸ , ನೋವು ತೋರದ ಎಂಟು ದಶಕ ದಾಟಿವೆ
ಮಿತ ಆಹಾರ, ವಿಹಾರ, ಬರೆವ ಹವ್ಯಾಸ, ಸಂಜಾತ.
ಆನಂದದ ನಗೆ ಬೀರಿ, ಕುಶ್ಲೌಪಚಾರವ ಕೇಳುವಾತ .

*ದೇವರು ನಿಮಗೆ ಆಯುರಾರೋಗ್ಯ 
ಆಯಸ್ಸು ಪ್ರೀತಿ ನೆಮ್ಮದಿ ಸಮೃದ್ಧಿ 
ಸದಾ ಕರುಣಿಸಲಿ 
ಬಸವರಾಜ ಮಾಮ 
ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು*

ಆನಂದಕವಿ 



 - Made using Quotes Creator App, Post Maker App
A
anandakavi
Quote by anandakavi - *ಮುತ್ತು*

ಏನೋ ಹೇಳಬೇಕೆಂದ 
ಏನು ಹೇಳು ನಾನಂದೆ
ಪತ್ರವೊಂದು ಕೈಗಿತ್ತನು
ಅಲ್ಲಿಂದ ಕಾಲ್ಕಿತ್ತನು.

ಬೆವರು ನೀರಿಳಿಸಿತ್ತು 
ಏನಪ್ಪಾ ಈ ಆಪತ್ತು
ಭಯದಲಿ ಕೈ ನಡುಗಿತ್ತು 
ಎದೆ ಝಲ್ ಅಂದಿತ್ತು 

ನಾ ನಿನ್ನ ಪ್ರೀತಿಸುವೆ ಅಂತಿತ್ತು 
ಮೌನದಿ ಹೃದಯ ಅಲ್ಲೇ ಜಾರಿತ್ತು
ಅಲ್ಲೇ ಕದ್ದು ನೋಡುತಿದ್ದ ಕತ್ತು 
ಕಣ್ಣಲಿ ಭಾವ ಅರಳಿ ನಿಂತಿತ್ತು. 

ಓಡಿದ ಕೆನ್ನೆಗೆ *ಮುತ್ತ*ನಿತ್ತು.
ಕೆನ್ನೆ ಕಣ್ಣು ಕೆಂಪಾಯಿತು 
ಎದೆ ಬಡಿತ ಜೋರಾಯಿತು
ಉಸಿರು ಅಲ್ಲಿಯೇ ಸಿಕ್ಕಂತಿತ್ತು.

✍️ ಕವಿತ ಹಂಜಿ - Made using Quotes Creator App, Post Maker App
A
anandakavi
Quote by anandakavi - *ಅಡುಗೆ ಮನೆ ಭಾಂದವ್ಯ*

ಅಲ್ಪ ಸ್ವಲ್ಪ ಅಡುಗೆ ಮಾಡಿದ ನಾನು ತಟ್ಟನೆ ಮದುವೆಯಾಗಿ ಬಂದ ನಾನು ಒಂದು ಅದ್ಭುತವೇ ಸರಿ ,ಕಾಲೇಜ್ ಮುಗಿಯುತ್ತಿದಂತೆ ಮದುವೆ, ರಜೆ ದಿನಗಳಲ್ಲಿ ಮೋಜು ಮಸ್ತಿ, ಅಷ್ಟೋ ಇಷ್ಟೋ ಅಲ್ಲೋ ಇಲ್ಲೋ ಒಂದಿಷ್ಟು ತಿಂಡಿಗಳು ಬರುತ್ತಿದ್ದವು,ಚಿಕ್ಕಮ್ಮನ ಹತ್ತಿರ ಇಡ್ಲಿ, ದೋಸೆ ಮಾಡುವ ಪ್ರಮಾಣ ಬರೆದಿಟ್ಟುಕೊಂಡಿದ್ದೆ.
ದಕ್ಷಿಣ ಉತ್ತರದ ತದ್ವಿರುದ್ಧ ಅಡುಗೆ, ಅಕ್ಕಿಯನ್ನೇ ಚಿತ್ರಾನ್ನ,ಬಿಸಿಬೇಳೆಬಾತ್ ,ಮೊಸರನ್ನ , ಪುಲಾವ್ ಇಡ್ಲಿ ದೋಸೆ,ಪಡ್ಡು ಮೂರುಹೊತ್ತು ತಿಂದಿದ್ದ ನನಗೆ,
ಮೂರುಹೊತ್ತು ಬಿಸಿ ಬಿಸಿ ,ಎಣ್ಣೆಗಾಯಿ, ಜುನಾಕ , ಮೆಂತೆ ಪಲ್ಯ,ಇಲ್ಲಿನ ಶೈಲಿ, 
ಅಡುಗೆ ,ಮಾಡುವ ಸ್ಥಿತಿ, ಎಷ್ಟು ಮಾಡಿದರೂ ಅಡುಗೆ ಮನೆಯಿಂದ ಹೊರ ಬರಲು ಆಗದಿರುವ ದಿನಗಳು.ಮಾಡಲು ಗೊತ್ತಿಲ್ಲ, ನಾದಿನಿ ಬಂದು ಸ್ವಲ್ಪ ಹೇಳಿಕೊಟ್ಟರು,ಅತ್ತೆ ರೊಟ್ಟಿ ಮಾಡುವಾಗ ಕೊನೆಯ ಎರಡು ,ಎರಡು,ಮಾಡಿ ಕಲಿತೆ. ಪರ್ಫೆಕ್ಟ್ ಅಲ್ಲ ,ಅಡುಗೆ ಮಾಡಲು ಬೇಸರವೆಂದು ಅನಿಸಲಿಲ್ಲ .ಸಂಬಂಧಿಕರ ಮನೆಯಲ್ಲಿ ಸಹಜವಾಗಿ ಸಹಾಯ ಮಾಡುತ್ತ ,ಅಮ್ಮ , ನಾದಿನಿಯರ ಸಹಾಯದಿಂದ ಅಡುಗೆಯ ಕಲಿತೆ, ತವರು ಮನೆಯ ಯಾವುದೇ ಅಡುಗೆ ಹಿಡಿಸಿದ ಪತಿರಾಯ,ನನಗೂ ಆಗದ ರೊಟ್ಟಿ ಊಟ , ಮನ ಒಲಿಸಲು ,ಅತ್ತೆ ಮಾವ ,ಆಗ ಬರುತ್ತಿದ್ದ ನೆಂಟರು ಒಬ್ಬರಿಬ್ಬರಲ್ಲ ,ಒಮ್ಮೆಲೇ ಎಂಟು ಹತ್ತು .ಅಡುಗೆ ಮನೆಯೇ ನನ್ನ ಜೀವಾಳ,ಬೆಳಗ್ಗೆ ದಕ್ಷಿಣದ ತಿಂಡಿಗಳು ,ಮಧ್ಯಾನ ರೊಟ್ಟಿ ಊಟ ,ಮುಗಿಯುತ್ತಿದಂತೆ ಸಂಜೆಯ ಚಹಾ...ಮತ್ತೆ ರಾತ್ರಿ. ಉಸ್ಸಪ್ಪಾ. 
ವರ್ಷದ ನಂತರ ಹಿಡಿತಕ್ಕೆ ಬಂದ ಅಡುಗೆ ಮನೆಯ ಅವಾಂತರ.ಈಗ ಉತ್ತರ ಕರ್ನಾಟಕದ ರೊಟ್ಟಿಯನ್ನು ಬಡೆದು,ಎಲ್ಲಾ ಖಾದ್ಯಗಳು,ಹುಗ್ಗಿ,ಹೋಳಿಗೆ , ಮಾದಲೀ. ಚಟ್ನಿ,ಸಾಂಪ್ರದಾಯಕವಾಗಿ ಮಾಡಲು ಕಲಿತೆ.
ಅಂದಿನಿಂದ ಇಂದಿನವರೆಗೆ ಎಷ್ಟೇ ಜನ ಬಂದರೂ ರುಚಿ ಅಡುಗೆ ಮಾಡಿ ನಿತ್ಯದ ಈ ಕಾಯಕ ,ನಿಭಾಯಿಸುವ ಕಲೆ ಕರಗತವಾಗಿದೆ,
ಕಲೆಯೋ ಬಲೆಯೋ ,ಈ ಬಾಂಧವ್ಯ ಸಂಬಂಧಗಳನ್ನು ಬೆಸೆದು ಗಟ್ಟಿಗೊಳಿಸುವ ಕಾರ್ಯವನ್ನು ಮಾಡಿದೆ. ಹೇಗೆ ಎಲ್ಲಾ ಪದಾರ್ಥಗಳು ಅದರದೇ ಆದ ಸಮ ಪ್ರಮಾಣ ಹಾಕಿ ಅದನ್ನು ಸ್ವಾದಿಷ್ಟ ಮಾಡುವ ಹಾಗೇ,ನನ್ನ ಅಡುಗೆ ಮನೆ ಜೀವನದಲ್ಲಿ ಉತ್ತಮ ಹೆಸರು ಕೊಟ್ಟಿದೆ.ಆನಂದವನ್ನು ತಂದಿದೆ.🙏

✍️ ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ನಾ .ನ ಬಳಗದ ನಿತ್ಯದ ಚಟುವಟಿಕೆ*


ಸರ್ವಮಂಗಳ ಅವರ ಈ *ನಾನು ನಮ್ಮವರೊಂದಿಗೆ* ಬಳಗ ಬರಹಗಾರರ ಓದುಗರ ಕಲಿಯುವರ ಒಂದು ಅನುಭವದ ಹೂ  ಗುಚ್ಛವೇ ಸರಿ.


ಚೈತನ್ಯದ ಹೊಸ ಹುರುಪು,ಶಾಲೆ ಕಾಲೇಜು ಓದುವಾಗ ಬರೆಯುವ ಹೋಂವರ್ಕ್ ತರಹ ,ಅನುಭವಗಳ ಹೂರಣವನ್ನು ಶಬ್ದಗಳಲ್ಲಿ ಬೆರೆಸಿ,ರುಚಿ ಸೂಚಿಗಳ ,ಉಪ್ಪು ಖಾರದ, ಹುಳಿ ,ಸಿಹಿ, ಸಮರಸವ ಬೆರೆಸಿ ಮಾಡುವ ನಮ್ಮ ಮನೆಯ ದೈನಂದಿಂದ ಕೆಲಸದ ಹಾಗೆ ದಿನಕ್ಕೊಂದು ಹೊಸ ಅನುಭವ ಬರೆಯುವ ಕಾಯಕ .ಬೆಳಿಗ್ಗೆ ಎದ್ದ ತಕ್ಷಣ ಇವತ್ತಿನ ದಿನ ಏನಿರಬಹುದು ಅನ್ನೋ ಕುತೂಹಲ.ತಲೆಯಲ್ಲಿ ಒಂದು ಹುಳ . 

ಚಹಾ ಹೀರುತ್ತ ನನ್ನ ಬರೆಯುವ ಟೇಬಲ್ ಚೇರ್,ದೊಡ್ಡ ಕಿಟಕಿ,

ಯೋಗವನ್ನು ಮಾಡುತ್ತ ,ಬರೆಯುವ ಬಗ್ಗೆ ಮನನ .

ಅಲ್ಲಿ ಕುಂತಾಗ ಬರುವ ಪಕ್ಷಿಗಳು , ಅವುಗಳ ಹಾರಾಟ ,ಕೂಗುವ ಬಿನ್ನ ಕೂಗು,ಹಸಿರು ,ಬಣ್ಣದ ಹೂಗಳು,ಕಣ್ಣಿಗೆ ಆಕರ್ಷಕ.ಮನಸಿಗೆ ಯೋಗ, ಯಾಗ.

ಹೇಗೆ ನಮ್ಮ ಬರಹ ಉತ್ತಮ ಗೊಳಿಸಬಹುದು ,ಮನಸಿನ ಭಾವಗಳನ್ನು ಹೇಗೆ ವ್ಯಕ್ತ ಪಡಿಸಿ ಓದುಗರ ಮೇಲೆ ಪ್ರಭಾವ ಬೀರುತ್ತದೆ.ಅವರ ಮನಸನ್ನ ಹಿಡಿದಿಟ್ಟು ಕೊನೆಯ ಅಕ್ಷರದವರೆಗೂ  ಉತ್ಸಾಹವನ್ನು ಉಳಿಸಿಕೊಳ್ಳಬೇಕು ಅನ್ನೋದು ,ಸರಳ, ಸಹಜ, ಸಾಮಾನ್ಯ ಶಬ್ದಗಳಲ್ಲಿ ಬರುವುದು, ಆ ದಿನವೆಲ್ಲ ಮನಸಿಗೆ ಉಲ್ಲಾಸ, ಆಹ್ಲಾದ ಕೊಡುವ ಈ ಚಟುವಟಿಕೆ ತುಂಬಾನೇ ಖುಷಿ ಕೊಟ್ಟಿದೆ.



ಆನಂದ ಕವಿ  - Made using Quotes Creator App, Post Maker App
A
anandakavi
Quote by anandakavi - *ಸುಧೆ* 

ಸಂಭ್ರಮದ ಜೀವನದ ಅಂಕಣ 
ನೆಡೆದು ಬಂದ ಬಾಳಿನ ಪ್ರಯಾಣ 
ನೆನಪಿಸಿಕೊಳ್ಳುವ ಸುದಿನ ಜನ್ಮದಿನ

ಓದಿನ ಹಂಬಲ ಬರೆಯುವ ಕುತೂಹಲ
ಶಬ್ದಗಳ ಹುಡುಕುವ ಹೆಣೆಯುವ ಕಾಲ
ಉತ್ಸಾಹ ಪ್ರೋತ್ಸಾಹ ಪುಸ್ತಕಗಳ ಮೂಲ 

ಆರು ದಶಕಗಳ ಅನುಭಾವದ *ಸುಧೆ* 
ಸಂಸಾರ ಸಂಸ್ಕಾರ ಸಂಸ್ಕೃತಿಯ ವಸುಧೆ
ಪ್ರಶಸ್ತಿಗಳ ವಿಜೇತೆ, ನಲ್ಮೆಯ ಸಂಜಾತೆ 

ಅಮೃತದಂತೆ ಬೆರೆತು ಮಕರಂದ ಹರಡಿದೆ 
ಹರಿವ ಸುಧೆಯಾದೆ, ಕನ್ನಡದ ಹೆಮ್ಮೆಯಾದೆ
ಎಲ್ಲರೊಳಗೊಂದಾಗಿ ಬಾಳಿಗೆ ಬೆಳಕಾದೆ.

*ಸುಧಾ* ಅವರೇ ನಿಮ್ಮ *ಷಷ್ಠಿಬ್ದಪೂರ್ತಿ* 
ಸಂಭ್ರಮದಲ್ಲಿ ದೇವರು ನಿಮಗೆ ಆಯುರಾರೋಗ್ಯ,
ಆಯಸ್ಸು, ಪ್ರೀತಿ,ನೆಮ್ಮದಿ ,ಸಮೃದ್ಧಿ ಸದಾ ಕರುಣಿಸಲಿ.

ಆನಂದಕವಿ 

 - Made using Quotes Creator App, Post Maker App
A
anandakavi
Quote by anandakavi - ಹನಿಗವನ 

     *ಸಾರ*

ತೀರಲಾಗದ ಮೋಹ
ಹೊರಲಾಗದ ಭಾರ 
ಸಿಹಿಕಹಿ ಮಿಶ್ರ ಸಂಸಾರ 
ಏಳುಬೀಳುವ ಜೀವನ ಸಾರ
ಪ್ರೀತಿ ನೆಮ್ಮದಿಗಳೇ ಐಸಿರಿ 
ಬಾಳಿಗೆ ಅದುವೇ ಆಧಾರ


✍️ ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ಹನಿಗವನ*

*ಕನಸು*

ಹದಿನಾರರ ವಯಸು 
ಯಾರ ಕೇಳದ ಮನಸು 
ಹಗಲು ಕಾಣುವ ಕನಸು
ಪ್ರೀತಿ ಅಂಕುರವ ಬೆರೆಸು 
ಕಾಣುವುದೇಲ್ಲಾ ಸೊಗಸು
ಲಕ್ಷವಿರಲಿ ಅಲಕ್ಷ್ಯವ ಅಳಿಸು.


✍️ ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ತ್ರಿಪದಿಗಳು*

*ವಜ್ರದ ಹಳ್ಳ*.

ಗರತಿ ಅತ್ಯವ್ವ ಸಾರಥಿ ಮಾವಯ್ಯು 
ಬೆರಳಿಗೆ *ವಜ್ರದ ಹಳ್ಳ* ಉಂಗುರ //ತಂದಾರ 
ನೆರಳಾಗಿ ಬಾಳ್ದಾಗ ಹರಿಸ್ಯಾವ ದೈವ.

ಬಂಗಾರದ ರಥದಾಗ ಸಿಂಗಾರದ ಲಕುಮಿ
ದಂಗಾದೆ ನೋಡಿ ನತ್ತಿನ ಹೊಳಪ //ನನರಾಯ
ನಂಗೊಂದು ತರುವೆಯ *ವಜ್ರದ ಹಳ್ಳ* 

ಅತ್ತಿಯ ಮಗಳ ಗತ್ತು ಬಲುಚಂದ 
ಸೂತ್ತೂರಾಗ್ಯಾರಿಲ್ಲವ್ವಾ ಅವಳ ಹಾಂಗ// ನೋಡವ್ವ
ಹತ್ತೂರ ಸುತ್ತಿ *ವಜ್ರದ ಹಳ್ಳ* ತಂದಿನಾ.

ಹಳ್ಳದ ಮ್ಯಾಲ ಗೊಳ್ಳುಾoಥ ಅತ್ತಾಳ
ಕೊಳ್ಳಲು ಬಂದ ಗೌಡ *ವಜ್ರದ ಹಳ್ಳ*// ನೋಡವ್ವ
ಮಳ್ಳಿoಗಾ ಗೌಡತಿ ನಗುತಾಳ.

ಕೊಲ್ಲೂರ ಮೂಕಾಂಬಿಕೆಗೆ ಬೆಲ್ಲದ ಆರತಿ 
ಮಲ್ಲಿಗಿ ದಂಡಿ *ವಜ್ರದ ಹಳ್ಳ* ಮೂಗುತಿ // ನೋಡವ್ವ
ಪಲ್ಲಕ್ಯ್ಯಗ ಏನ ಚಂದ ಕಾಣ್ತಾಳ.

✍️ ಆನಂದಕವಿ - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
anandakavi
Quote by anandakavi - ಪ್ರಾಥ ಸ್ಮರಣೀಯ ಬಸವಣ್ಣನವರಿಗೆ,

ಇಪ್ಪತ್ತೊಂದನೆಯ ಶತಮಾನದ ಹೃದಯಪೂರ್ವಕ ನಮಸ್ಕಾರಗಳು.
ನಮ್ಮ ರಾಜ್ಯ ಸುಗಮ ಹಾಗೂ ಸೌಖ್ಯವಾಗಿದೆ .ಮಳೆ ,ಬೆಳೆ,ಸಮೃದ್ಧಿ
ಎಲ್ಲವೂ ಇದೇ,ರೈತರು ,ಜನಸಾಮಾನ್ಯರಿಗೆ ಉಚಿತ ಸೌಲಭ್ಯಗಳು ಇವೆ.ಉತ್ತಮ ಶಿಕ್ಷಣ ,ಆರೋಗ್ಯ ಸೇವೆ ದೊರಕುತ್ತಿವೆ.
ಹನ್ನೆರಡನೆಯ ಶತಮಾನದ ನಿಮ್ಮ ಕುರುಹುಗಳು ಎಂಟನೂರು ಶತಕಗಳವರೆಗೂ ಕಾಪಾಡಿಕೊಂಡು ಶಿವ ಶರಣರು ಲಿಂಗಾಯಿತ ಧರ್ಮ,ವಚನಗಳು ,ಅನ್ಯ ವಚನಕಾರರ ಆಳಿದ ಉಳಿದ, ಅಷ್ಟೂ ಇಷ್ಟೂ ಸಂಗ್ರಹಿಸಿ ವಚನ ಸಾಹಿತ್ಯವನ್ನು ಜೀವಂತವಾಗಿಟ್ಟಿದ್ದಾರೆ .

ಆದರೆ ನೀವು ಕಂಡ ಆ ಪರಿಕಲ್ಪನೆ , ದೃಷ್ಟಿಕೋನ, ಸಾಮಾಜಿಕ ವೈಷಮ್ಯ ಇನ್ನೂ ಕೊನೆಗೊಂಡಿಲ್ಲ. ಅಂದು  ಅಶಕ್ತವಾಗಿದ್ದ ಕನ್ನಡದ ಕಲ್ಯಾಣ ಕ್ರಾಂತಿ ಇನ್ನೂ ಮುಗಿದಿಲ್ಲ. ಬಹಳಷ್ಟು ಬದಲಾದರೂ ಜನರ ಮನೋಸ್ಥಿತಿ,ಜಾತಿ ವ್ಯವಸ್ಥೆ, ಇದೆ. ಹೆಣ್ಣು ಸಬಲೀಕರಣ ಸ್ವಲ್ಪಮಟ್ಟಿಗೆ ಸುಧಾರಣೆಯಾದರೂ ,ಗ್ರಾಮೀಣ ಪ್ರದೇಶಗಳು ವೋಟ್,ರಾಜಕೀಯಕ್ಕೆ ತಮ್ಮದೇಯಾದ ಧರ್ಮ ಮಾಡಿವೆ.
ಒಳ ಪಂಗಡಗಳು,ಜಾತಿ, ಉಚಿತ ಸೇವೆ ದೇಶ ಎಲ್ಲಿ ಸಾಗುತ್ತಿದೆ ಅನ್ನುವ ಕಲ್ಪನೆ ಭಯಾನಕ. ವಿದ್ಯೆ,ರೈತ ಆಧುನೀಕರಣಗೊಂಡು ನಾವು ಯಾರು ಅನ್ನುವುದೇ ಮರೆತಂತಿದೆ.
ಶತಮಾನ ಬೇರೆಯಾದರೂ ಮಾನವನ ಗುಣ,ಆಗಿದ್ದ ಸಮಸ್ಯೆಗಳು ಇಂದಿಗೂ ಇವೆ.ಉಜ್ವಲ ಭವಿಷ್ಯದ ಕನಸು ನನಸಾದರೂ ಮಾನವ ಆಧುನಿಕ ವಯೋಮಾನ ,ಮಾನವ ದೇಶ ವಿದೇಶಗಳಲ್ಲಿ ಹೆಚ್ಚಿನ ಅಧ್ಯಯನ ಮಾಡುವ ಮೂಲಕ ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ್ದಾನೆ. ಸ್ವರ್ಣಯುಗಗಳ ಭಾರತ ಯುದ್ಧ ಆಕ್ರಮಣಕ್ಕೆ ಬಲಿಯಾಗಿ ,ತನೆಲ್ಲಾ ವೈಭವವನ್ನ ಲೂಟಿ ಮಾಡಿ ಹೋದವರು ,ನಮ್ಮ ಇತಿಹಾಸ , ವೈಜ್ಞಾನಿಕ ಸಂಶೋಧನೆಗಳು,ವಚನಗಳು, ಎಲ್ಲವನ್ನೂ ಸುಟ್ಟು ,ಲೂಟಿ ಮಾಡಿ ,ಬಡ ರಾಷ್ಟ್ರ ಇಂದಿನ ಭಾರತ ಸಶಕ್ತ ಭಾರತ.ಕನಸು ಕಾಣುವ ಮಟ್ಟಕ್ಕೆ ಏರಿದೆ. ನಿಮ್ಮ ವಚನ ಸಾರ ದೇಶ ,ವಿದೇಶಗಳಲ್ಲಿ 
ವಿಶ್ವ ಗುರುವಾಗಿ ಹೊರಹೊಮ್ಮಿದೆ. ನಿಮ್ಮ ಪರಿಕಲ್ಪನೆಯ ನಾಡು ನುಡಿ, ಬರಲು ಇನ್ನೆಷ್ಟು ದಶಕ ಬೇಕಾಗುವುದು ,ಆದರೆ ಪ್ರಯತ್ನಗಳು ಸತತ ನಿರಂತರ ಸಾಗಿವೆ. 

        ಇಂತಿ ನಿಮ್ಮ 
ಇಪ್ಪತ್ತೊಂದನೆಯ ಶತಮಾನದ 
ಬಸವ ಬಳಗದವರು.

ಬಸವಣ್ಣ
ಮಹಾಮನೆ
ಕಲ್ಯಾಣ ಕರ್ನಾಟಕ.

ಆನಂದ ಕವಿ  - Made using Quotes Creator App, Post Maker App
A
anandakavi
Quote by anandakavi - *ಜೀವನದಲ್ಲಿ ಪ್ರಭಾವ ಬೀರಿದ ಆದರ್ಶ ವ್ಯಕ್ತಿ*

*ಶ್ರೀ ಸಿದ್ಧೇಶ್ವರ ಶ್ರೀಗಳು*

ಆಧ್ಯಾತ್ಮಿಕದ ಹರಿಕಾರ ,ಜೀವನದ ಮೌಲ್ಯ , ಪ್ರಕೃತಿ, ಸರಳತೆ, ಸಜ್ಜನಿಕೆ ,ಸೂಕ್ಷ್ಮ ಭಾವನೆಗಳನ್ನು ಸಾಮಾನ್ಯ ಅತಿ ಸಾಮಾನ್ಯರಿಗೂ ತಿಳಿಯೋ ಹಾಗೆ ಪುಟ್ಟ ಕಥೆಗಳನ್ನು ಹೇಳಿ ಮನನಕ್ಕೆ ಇಳಿಯುವ ಅವರ ಮೆಲ್ಲನೆಯ ದ್ವನಿಯಲ್ಲಿ ಮನಸಿಟ್ಟು ಕೇಳುಗರ ಅಂತರಾತ್ಮವನ್ನ ಕುಲುಕಿಸಿ ಸರಿ ತಪ್ಪು ಅರಿವನ್ನ ನಮ್ಮೊಳಗೆ ಅದರ ಅನುಸಂಧಾನ ಮಾಡಲು ಮೊಳಕೆಯೊಂದನ್ನ ಜ್ಞಾನದ ಬೀಜವನ್ನು ಬಿತ್ತಿದ ಜ್ಞಾನ ಯೋಗಿ .
 ಕಬ್ಬಿಣದ ಕಡಲೆಯಂತಿದ್ದ ಅಲ್ಲಮ,ಬಸವಣ್ಣ, ಅಕ್ಕಮಹಾದೇವಿ , ಚನ್ನಬಸವಣ್ಣರ, ವಚನಗಳನ್ನು ನಿರ್ವಚನ ಮಾಡಿ ,ವಚನದ ಸಾರ, ಜೀವನದ ಸರಳ ಅರ್ಥ ಪರಿಚಯಿಸಿದ ಸಂತ.ವಿದ್ಯಾವಂತ .ಅವರನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದೆ ನಮ್ಮ ಪುಣ್ಯ.
ಅವರ ಚಿಂತನ ಮಂಥನ, ಸಂಜೆ ಬೆಳಗಾವಿಯಲ್ಲಿ ತಿಂಗಳು ನೆಡೆದ ಪ್ರವಚನಗಳು ,ಸಮಯದ ಅರಿವು ಎಷ್ಟು ಮುಖ್ಯ, ಸ್ವಚ್ಛತೆ,ಪ್ರಕೃತಿಯ ಪ್ರೀತಿ,ಎಲ್ಲರನ್ನೂ ಸಮನಾಗಿ ನೋಡುವ ದೃಷ್ಟಿ,ಹಿರಿಯ ಕಿರಿಯ ಬಡವ ಶ್ರೀಮಂತ ಎನ್ನುವ ಬೇಧವಿಲ್ಲ ,ದುಡಿವ ರೈತ ,ಹಳ್ಳಿಗಳಲ್ಲಿ ಅವರ ಪ್ರವಚನ ಬಹಳಷ್ಟು ಜನರಲ್ಲಿ ಬದಲಾವಣೆ ತಂದಿತ್ತು,ವರ್ಷಗಟ್ಟಲೆ ಅವರ ಪ್ರವಚನ ಕೇಳಲು ,ಜನ ಸಾಗರವೇ, ಶಾಲೆಗೆ ಹೋಗುವ ಮಕ್ಕಳಂತೆ ,ಶಿಸ್ತು ಹಾಗೂ ನಿಯಮಗಳನ್ನು ಬದ್ಧತೆಯಿಂದ ಬರುತ್ತಿದ್ದರು ,ಭಕ್ತರು , ಅನುನಾಯಿಗಳು, ಅನ್ನಬೇಕೋ ತಿಳಿಯದು.
ಗೊಂದಲದ ನಮ್ಮ ದೈನಂದಿನ ನಿತ್ಯ ಕೆಲಸವನ್ನ ಮುಗಿಸಿ ಅವರ ಪ್ರವಚನ ಅದೇನೋ ಆಹ್ಲಾದ,ಸಮಾಧಾನ ತಿಳುವಳಿಕೆ ಹೇಳುವ ಹಾಗಿತ್ತು, ಏನೋ ತಲೆಯಲ್ಲಿ ಇದ್ದ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರೇನೋ ಅನ್ನುವ ಅನುಭೂತಿ.ನನ್ನ ಮನಸಿನ ಮೇಲೆ ಪ್ರಭಾವ ಬೀರಿತ್ತು. ಜೀವನವನ್ನ ನೋಡುವ , ಪ್ರಕೃತಿ ಅನುಭವಿಸುವ , ಪ್ರಾಣಿ,ಪಕ್ಷಿ ,ಗಿಡ,ಹೂವು,ಮರ ,ಗುಡ್ಡ , ನದಿ,ಸಾಗರ ಇವೆಲ್ಲವೂ ನಮ್ಮೊಳಗೆ ಅಥವಾ ನಾವು ಅದರೊಳಗೇನೋ . ಕೇಳಿ ಮರೆತುಬಿಡಿ ಅನ್ನುವ ಅವರ ಮಾತು, ಮಕ್ಕಳಿಗೆ ಹೇಳೋ ರೀತಿ ಇರುತ್ತಿತ್ತು.
ಇಂದಿಗೂ ಏನೇ ಉತ್ತರ ಸಿಗದ ಪ್ರಶ್ನೆಗಳಿದ್ದರೂ ಅವರೇ ಬಂದು ಉತ್ತರ ಕೊಟ್ಟಂತೆ ಅನಿಸುತ್ತೆ.ಹೆಜ್ಜೆ ಹೆಜ್ಜೆಗೂ ಗುರುವಂತೆ ತಿಳಿ ಹೇಳಿದ ಸಿದ್ದೇಶ್ವರರು ನಮ್ಮ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ .🙏

✍️ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ಅಮ್ಮ*

ದಶಕಗಳ ಅನುಭವದ ನನ್ನಮ್ಮ
ಕೇಳಿದಳು ನಗುತಲಿ ನನ್ನ,
ಅರಿವಾಯಿತೇ ತಾಯಿತನ
ಮಕ್ಕಳ ಒಳ ಮನಸನ್ನ.,

ಅದು ಬೇಡ ಇದು ಬೇಡ
ಕಾಡುತ್ತಿದ್ದ ಅ ದಿನ, 
ಅತ್ತರು ನಕ್ಕರು ಸಿಟ್ಟಾದರೂ
ನಕ್ಕು ಮರೆವ ತಾಯಿಯ ಮನ.

ನಾನೇಕೆ ಮಾಡಲಿ, ತಿರಸ್ಕಾರದ
ಸೋಲನೊಪ್ಪದ ಆ ದಿನ 
ಹೊಸ ಪಾಠವಿದು ಇರಲಿ
ಸರಿಯಾಗುವುದೆಂದು ಅರಿವ ಮನ

ಸಂಸ್ಕಾರ, ಸಂಸ್ಕೃತಿ, ಸಂಸಾರ
ಗೊಂದಲಗಳ ಸಮಾಧಾನ
ಪ್ರಶ್ನೆಗಳಿಗೆ ಹುಡುಕಿದರೂ
ಉತ್ತರಗಳು ಸಿಗದ ಅಂಕಣ.

ಕೈಲಾಗದಾದರೂ ನಿದ್ದೆಗೆಟ್ಟಾದರೂ
ಮಕ್ಕಳಿಗಾಗಿ ದುಡಿವಳು ತಾಯಿ.
ದೇವರಿಗೆ ಕೈಮುಗಿದು ಸುಖ
ಬಯಸುವಳು ಈ ತ್ಯಾಗಮಯಿ

ಅಮ್ಮ ನೀನು ಕೊಟ್ಟ ಯಾವುದೇ
ಕೊಡಲಾಗದ ಬಡವ ನನ್ನಮ್ಮ 
ಅಮ್ಮ ಎಂದರೆ ದೇವರ ತತ್ವವಮ್ಮ
ಪ್ರೀತಿಯೊಂದೇ  ಉಡುಗೊರೆ ಕಾಣಾ..

ಎಲ್ಲಾ ಅಮ್ಮಂದಿರಿಗೂ *ವಿಶ್ವ ಅಮ್ಮಂದಿರ* ದಿನದ ಶುಭಾಶಯಗಳು❤‍🩹💐

✍️ ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ಮುತ್ತಿನ ತೆನಿ* 

ತವರೂರ ದಾರೀಲಿ ಮಾವಿನ ಮರಗಳು
ಗೋವುಗಳ ಹಿಂಡು ಬಲು ಚಂದ//ಅಣ್ಣಯ್ಯನ
ಹೂವಂಥ ಜೋಳದ *ಮುತ್ತಿನ ತೆನಿ* ಚಂದ.

ಎತ್ತಿನ ಬಂಡ್ಯಾಗ ಗತ್ತೀಲೆ ಕುಂತಾನ 
*ಮುತ್ತಿನ ತೆನಿ* ಕೈಬೀಸಿ ಕರಿತಾವಾ//ನನರಾಯ
ಮತ್ತಾ ನೆನಪಾಗೈತಿ ತವರೂರ.

*ಮುತ್ತಿನ ತೆನಿ* ಚಂದ ಬತ್ತದ ಹಸಿರು 
ಸುತ್ತಲೂ ಹರಿವ ನದಿ ಚಂದ //ನನರಾಯ 
ಕತ್ತಾಗ ಕಾಸಿನ ಸರ ತಂದ.

ಮುತ್ತಜ್ಜನ ಮನ್ಯಾಗ ಬಿತ್ತಾರ ಜೋಳ 
*ಮುತ್ತಿನ ತೆನಿ* ರಾಶಿ ರಾಶಿ ಬೆಳೆದಾರ // ನೋಡವ್ವ
ಹತ್ತೂರಿಗೆ ಹಿರಿಯ ಮಾವಯ್ಯ.

ಮುತ್ತಿನ ಮೂಗುತಿ, ಕತ್ತಿಗೆ ಟೀಕಿ
ಸುತ್ತಲೂ *ಮುತ್ತಿನ ತೆನಿ* ತೂಗ್ಯವ//  ನನರಾಯ
ಗೊತ್ತ ನಾ ಕಾದಿರುವೆ ನನ್ನರಸ.

✍️ಆನಂದಕವಿ - Made using Quotes Creator App, Post Maker App
A
anandakavi
Quote by anandakavi - ಒಡಪುಗಳು

ಆಕಾಶಕ್ಕೆ ಸೂರ್ಯ ಚಂದ್ರ
ನನ್ನ ಬಾಳಿಗೆ ನೀವೇ ಅಂದ
ರಾಯರ ಹೆಸರ ಹೇಳುವೆನು *ಆನಂದದಿಂದ*

ಕೊಳ್ಳಗ ಟೀಕಿ ,ತೋಳಾಗ ವಂಕಿ
ಚಿನ್ನದ ನಡುಪಟ್ಟಿ ,ವಜ್ರದ ಮೂಗುತಿ 
ನಾಚಿ ನಾಚಿ ನೋಡ್ತಾರಾ ನನರಾಯ
ಕಣ್ಣಾಗ *ಆನಂದದ* ಹೋಳಿ ಹರಿಸ್ಯರಾ. 

ಬಾಳಿಗೆ ಸಂಗಾತಿ
ರಥಕ್ಕ ಸಾರಥಿ
ಅವರು ನಾನು ಸತಿಪತಿ
*ಆನಂದದಿಂದ* ಹೇಳುವೆ ಪ್ರೀತಿ ಕತಿ.

ಹಣಿಗೆ ಕುಂಕುಮ
ಬಾನಿಗೆ ಚಂದ್ರಮ 
ತಾಯಿಗೆ ಮಗುವೇ ಜೀವನ
ಬಾಳಿಗೆ *ಆನಂದ* ರಾಯರೇ ಪ್ರಧಾನ.

ಬಂಡಿ ತುಂಬ ತಂದಾರಾ ಕಬ್ಬ 
ನಾಳೆ ತವರೂರಾಗ ಹಬ್ಬ
ಮುಖ ಊದಿಸಿಕೊಂಡರಾ ಸುಬ್ಬ
ಹಾಕೊಂಡಾರ ನೋಡ ಬಿಳಿ ಜುಬ್ಬಾ
ತವರಿಗೆ ಹೊಂಟರೆ *ಆನಂದವರು* ಆಗ್ತಾರೆ ಮೊಬ್ಬ.


✍️ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ಭಕ್ತಿ ಪರಿಮಳ*

ಶಿವ ನಾಮದ ಆಳಾ 
ಹರಡಿತ್ತು ಪರಿಮಳ
ಸದ್ಭಕ್ತಿ ಸುಧೆಯ ಗಾಳ
ಮುಕ್ತಿ, ಭಕ್ತಿ ಪರಿಮಳ 

ಆತ್ಮ ಪರಮಾತ್ಮನ
ಅನುಸಂಧಾನದ ಕ್ಷಣ
ತನ್ಮಯತೆಯ ದಿಬ್ಬಣ
ಸಂತೃಪ್ತಿಯೇ ಪ್ರಮಾಣ

ಪ್ರಕೃತಿಯೇ ಗುರುವು
ಮೂಡಿಸುವುದು ಅರಿವು
ಬದುಕೆನ್ನುವ ಸಾರವು
ಚೈತನ್ಯ ಸತ್ಯದ ಹರಿವು 

ನಿಸ್ವಾರ್ಥವೆ ನಿತ್ಯ ಭಕ್ತಿ
ನಂಬಿಕೆಯೇ ಅದರ ಶಕ್ತಿ
ಧ್ಯಾನವೇ ಸಾಧನೆ ಮುಕ್ತಿ 
ಇದುವೇ ಜೀವನದ ಬುತ್ತಿ.

✍️ ಆನಂದ ಕವಿ  - Made using Quotes Creator App, Post Maker App
A
anandakavi
Quote by anandakavi - when you are not able to make decisions 
for yourself, others will over power you.
right time, the right decision makes sense
otherwise it's nonsense.

Life Love it Live it 
Fuel Life 💞

anandakavi  - Made using Quotes Creator App, Post Maker App
A
anandakavi
Quote by anandakavi - *ತ್ರಿಪದಿಗಳು* 

*ಪರದೇಶಿ*

ಪರಮಾತ್ಮ ಇರುವಾಗ *ಪರದೇಶಿ* ಯಾರಿಲ್ಲ
ಯಾರಿಗೆ ಯಾರು ಸ್ಥಿರವಲ್ಲ// ಗುರುವೇ
ಹರಿಸೋ ನರಜನ್ಮವ ಗೌರಿಹರ.

*ಪರದೇಶಿ* ನೀನವ್ವ ಕರೆಯುವ ತವರಿಲ್ಲ 
ಪರದೇಶಕೆ ಹೋದ ಗಂಡ ಬರಲಿಲ್ಲ//ನೋಡವ್ವ
ಸೊರಗ್ಯಾಳ ನಮ್ಮೂರ ಹಿರಿಮಗಳ 

ಹಗಲು ರಾತ್ರಿ ಬಾಗಲಾಗ ಬರುತಾಳ
ಬಗಲಗ ಕೂಸ ತರುತಾಳ //*ಪರದೇಶಿ* 
ಮಗ ಅತ್ತಾರ ಮನಸು ಕರಗತೈತಿ.

*ಪರದೇಶಿ* ಆನಬ್ಯಾಡ ಮರಗ್ಯಾಳ ಹಡೆದವ್ವ 
ಸೊರಗ್ಯಾಳ ನೋಡ ನಿನ ಮಗಳ// ಅಕ್ಕವ್ವ
ಊರನಾ ಮಂದಿ ಮಾರುಗ್ಯಾರ.

*ಪರದೇಶಿ* ಅಂದಾರಾ ಮರುಗೈತಿ ಮನಸು
ಕರುಣೆ ಇರಲವ್ವ ಅವರ ಮೇಲೊಂದಿಷ್ಟು// ನನ್ನವ್ವ
ಶರಣರ ಕರುಣೆಯ ಪಡೆದವಾ. 

✍️ ಆನಂದ ಕವಿ - Made using Quotes Creator App, Post Maker App
A
anandakavi
Quote by anandakavi - Gut health 
*Gut is the main report card for health 
What you eat is how it works,reflects 
Home cooking,local available vegetables
Preservatives,added condiments, chemicals 
Make your intestine to observe less nutrients.
Sedentary lifestyles take your health for toss.
Excercise and walking are excellent for health.
Eat well balanced nutritious food in right time.
Good fiber, protine, less carbohydrates, less sugar ,less junk 
Happy gut , Happy mind, Happy work , Happy you,
Happy family, Happy community, Happy world* 🌎 

Life Love it Live it 
Fuel Life 💞

anandakavi  - Made using Quotes Creator App, Post Maker App
A
anandakavi
Quote by anandakavi - *ಉಡುತಡೆಯ ಉಷೆ*

ಕನ್ನಡದ ಕಂಪು ಮಲೆನಾಡಿನ ಉಷೆ ಇವಳು
ದಿಟ್ಟ ನಡೆ ತೊರೆದುಳು ನೀರೆಯ ಉಡುಗೆ
ದಿಕ್ಕರಿಸಿ ವ್ಯಾಮೋಹದ ಆಸೆ ತನುವಿನ ಸೆರೆ
ನಡೆದಳು ಬಸವಣ್ಣನ ಮಹಾಮನೆಯ ಕಡೆಗೆ

ಪ್ರಕೃತಿಯ ,ಕಾನನ ,ಸೃಷ್ಟಿ , ಬಯಲಿನ ಆಸರೆ
ಆವರಿಸಿತ್ತು ಮಲ್ಲಿಕಾರ್ಜುನನ ಒಲುಮೆ ಐಸಿರಿ
ಅಂಜದೆ ಅಳುಕದೆ ಮಹಾದೇವಿಯ ವೈಖರಿ 
ಜಗದ ಅರಿವ ಮೂಡಿಸೋ ವಚನ ಸಾಹಿತ್ಯ ಸಿರಿ

ಏಕಾಂಗಿ ಅವಳಲ್ಲ ಮಲ್ಲಿಕಾರ್ಜುನ ಇಹನಲ್ಲ 
ಉಡುತಡೆಯಿಂದ ಕಲ್ಯಾಣದ ಮಹಾಮನೆಗೆ
ಅಲ್ಲಮ ,ಬಸವಣ್ಣನ ಅನುಭಾವ ಮಂಟಪಕೆ
ವಿಚಾರ ಅನುಸಂಧಾನ ಮಾನವ ಧರ್ಮದೆಡೆಗೆ

ಅರಿವಿನ ಗುರುವಾಗಿ ನಡೆದಳು ಕದಳಿ ಕಡೆಗೆ
ಪ್ರಕೃತಿ ವಿಸ್ಮಯಗಳ ಜೀವ ಜಗತ್ತು ಜೀವಾಳ
ಲಿಂಗದಲಿ ಆತ್ಮ ಪರಮಾತ್ಮನ ಅನುಸಂಧಾನ
ಚೆನ್ನಮಲ್ಲಿಕಾರ್ಜುನನಲಿ ಒಂದಾದ ಅಕ್ಕಮಹಾದೇವಿ.

✍️ ಆನಂದ ಕವಿ 🙏 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
anandakavi
Quote by anandakavi - *ಉಡುತಡೆಯ ಉಷೆ*

ಕನ್ನಡದ ಕಂಪು ಮಲೆನಾಡಿನ ಉಷೆ ಇವಳು
ದಿಟ್ಟ ನಡೆ ತೊರೆದುಳು ನೀರೆಯ ಉಡುಗೆ
ದಿಕ್ಕರಿಸಿ ವ್ಯಾಮೋಹದ ಆಸೆ ತನುವಿನ ಸೆರೆ
ನಡೆದಳು ಬಸವಣ್ಣನ ಮಹಾಮನೆಯ ಕಡೆಗೆ

ಪ್ರಕೃತಿಯ ,ಕಾನನ ,ಸೃಷ್ಟಿ , ಬಯಲಿನ ಆಸರೆ
ಆವರಿಸಿತ್ತು ಮಲ್ಲಿಕಾರ್ಜುನನ ಒಲುಮೆ ಐಸಿರಿ
ಅಂಜದೆ ಅಳುಕದೆ ಮಹಾದೇವಿಯ ವೈಖರಿ 
ಜಗದ ಅರಿವ ಮೂಡಿಸೋ ವಚನ ಸಾಹಿತ್ಯ ಸಿರಿ

ಏಕಾಂಗಿ ಅವಳಲ್ಲ ಮಲ್ಲಿಕಾರ್ಜುನ ಇಹನಲ್ಲ 
ಉಡುತಡೆಯಿಂದ ಕಲ್ಯಾಣದ ಮಹಾಮನೆಗೆ
ಅಲ್ಲಮ ,ಬಸವಣ್ಣನ ಅನುಭಾವ ಮಂಟಪಕೆ
ವಿಚಾರ ಅನುಸಂಧಾನ ಮಾನವ ಧರ್ಮದೆಡೆಗೆ

ಅರಿವಿನ ಗುರುವಾಗಿ ನಡೆದಳು ಕದಳಿ ಕಡೆಗೆ
ಪ್ರಕೃತಿ ವಿಸ್ಮಯಗಳ ಜೀವ ಜಗತ್ತು ಜೀವಾಳ
ಲಿಂಗದಲಿ ಆತ್ಮ ಪರಮಾತ್ಮನ ಅನುಸಂಧಾನ
ಚೆನ್ನಮಲ್ಲಿಕಾರ್ಜುನನಲಿ ಒಂದಾದ ಅಕ್ಕಮಹಾದೇವಿ.

✍️ ಆನಂದ ಕವಿ 🙏 - Made using Quotes Creator App, Post Maker App
A
anandakavi
Quote by anandakavi - ತ್ರಿಪದಿಗಳು 

ಯುದ್ಧವನ್ನ ಯಾರು ಗೆದ್ದರಿಲ್ಲಿ ಹೇಳೈಯ್ಯ ?
ಸದ್ದು ಮಾಡಿ ಅಮಾಯಕರ ಕೊಂದರಿಲ್ಲಿ//ಶಿವನೇ 
ಮುದ್ದು ಮಾಡಿದ ಅಮ್ಮನ ಕಣ್ಣೀರ ಒರೆಸುವರಾರಿಲ್ಲಿ.

ಭೂಮಿ ತಾಯಿ ಸಮನಾರು ನಿನಗೆ 
ಅಮಿತ ಜೀವ ಸಂಕುಲ // ನೋಡ
ಸುಮಧುರ ಸತ್ಯ ಶಿವ ಸುಂದರ.

ಯುಕ್ತಿಯು ನೀನೇ ಶಕ್ತಿಯೂ ನೀನೇ 
ಭಕ್ತಿಗೆ ಮೆಚ್ಚುವ ಪರಮಾತ್ಮನೇ// ಮಾದೇವ
ಮುಕ್ತಿಯ ಕರುಣಿಸೋ ಜಗದೀಶ್ವರ.


✍️ ಆನಂದ ಕವಿ  - Made using Quotes Creator App, Post Maker App
A
anandakavi
Quote by anandakavi - *ಸೈರನ್*. (ಕಾಲ್ಪನಿಕ)

ಸೈರನ್ ಸದ್ದು ಕೇಳುತ್ತಿದ್ದಂತೆ ,ಓಡಿ ಕೈಯಲ್ಲಿದ್ದ ಬೇಕಾದ ಸಾಮಾನುಗಳು , ಮಕ್ಕಳನ್ನು ಕರೆದುಕೊಂಡು ಇಲ್ಲೇ ಇದ್ದ ನೆಲಮಾಳಿಗೆಯಲ್ಲಿ ಭದ್ರವಾಗಿ ಲಾಕ್ ಮಾಡಿ ಭಯದಲ್ಲಿ ಇಬ್ಬರು ಮಕ್ಕಳು ಸಹನಾ ಮತ್ತು ಆಕಾಶ್ ಒಬ್ಬರನೊಬ್ಬರು ಹಿಡಿದು ಬಿಕ್ಕಿ ಬಿಕ್ಕಿ ಅತ್ತರು, ಒಂದು ವಾರದಲ್ಲಿ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಬಹುದು,ಅಪ್ಪ ಅಮ್ಮ ಊರು ಎಲ್ಲಾ ನೆನಪಾಗುತ್ತಿದೆ ಆಕಾಶ್,ನಾವು ಅಲ್ಲಿ ಹೋಗ್ತೀವಾ ಇಲ್ಲಾ ಇಲ್ಲೇ ಈ ಯುದ್ಧದಲ್ಲಿ 
.ಸಹನಾ ಅದೆಲ್ಲಾ ಬಿಡು ಮಕ್ಕಳು ಹೆದರುತ್ತಾರೆ,ನಾವು ಆಟ ಆಡೋಣವ ,ಬನ್ನಿ ಮಕ್ಕಳ ಅಂತ ಆಕಾಶ್ ಅಳುವನ್ನ ಹತ್ತಿಟ್ಟು 
ಕಣ್ಣಿರುವರೆಸುತ್ತ ,ಸಹನಾ ಹಸಿವಾಗಿದೆ ಅನ್ನುತ್ತಾ ಮಕ್ಕಳು ತಾವು ಅಲ್ಲೇ ಇದ್ದ ಟಿವಿಯಲ್ಲಿ ಡಿಸ್ಕವರಿ ನೋಡುತ್ತಾ ಮಲಗಿದರು.ಸಹನಾ ಯಾರಾದರೂ ಈ ಯುದ್ಧವನ್ನ ನಿಲ್ಲಿಸಬಾರದೇ, ಯಾರೂ ಮಾಡಿದ ತಪ್ಪಿಗೆ ಜನ ಸಾಮಾನ್ಯರ ಜೀವ ಇಷ್ಟು ಅಗ್ಗವಾಯಿತೆ...ಕಣ್ಣೀರು ದುಃಖ ಇಮ್ಮಡಿಸಿ ಕೋಟೆ ಒಡೆದಿತ್ತು.

✍️

ಆನಂದಕವಿ  - Made using Quotes Creator App, Post Maker App
A
anandakavi
Quote by anandakavi - Not that all looks good ,bring happiness, not all sad ,tough time come to hurt you, every phase is important and have to overcome. Every chapter is necessary to shape us. choose who you want to be, good or bad. life Love it Live it.

Fuel Life 💞 



anandakavi  - Made using Quotes Creator App, Post Maker App
A
anandakavi
Quote by anandakavi - Nature has its own course to balance mind, body and soul. Just spare time for yourself. Carry Spark in eyes, smile on lips, keep working for life, rest all will be taken care, Life Love it Live it.

Fuel Life 💞 



anandakavi  - Made using Quotes Creator App, Post Maker App
A
anandakavi
Quote by anandakavi - *ಉಳಿತಾಯ* 

ಹುಟ್ಟು ಯಾರ ಕೈಯಲ್ಲಿರದು
ಶಾಪವೇ ಬಡವಾಗಿ ಹುಟ್ಟುವುದು?
ಮಾಸಿದ ಕೈ ರೇಖೆಗಳ ಗುರುತು 
ದುಡಿದು ಕೂಡಿಟ್ಟಿದ್ದ ಈ ಬಿಡಿಗಾಸು

ಅಂದು ಹೊಟ್ಟೆ ಕಟ್ಟಿ ಉಳಿಸಿದ ಕಾಸು
ಒಂದಿಷ್ಟು ಭರವಸೆ ನೀಡುವ ಬದುಕು
ತೇಪೆ ಹಚ್ಚಿದ ಬಟ್ಟೆ ಹರಿದ ಚಪ್ಪಲಿ ನೆನಪು 
ಅವ್ವ ಹೇಳಿಕೊಟ್ಟ *ಉಳಿತಾಯ* ಕನಸು

ಸಂಸಾರದ ಬವಣೆಗೆ ಅನಿತ್ಯದ ಪ್ರಯಾಸ 
ಮುಗಿಯುವುದೂ ಇಲ್ಲವೂ ಅನ್ನೋ ಆಯಾಸ
ಕಷ್ಟ ಸುಖಗಳ ಜೀವನದ ಭ್ರಮಣ ನೀರಸ
ಹೊಟ್ಟೆ ಬಟ್ಟೆ ಸೂರು ಅದುವೇ ಬಾಳಿನ ಆಸೆ 

ಉಳಿದ ಬಳೆಗಳೊಂದೇ ಆಧಾರ ಕಷ್ಟ ಕಾಲಕೆ 
ಅಪ್ಪ ಕೊಟ್ಟನೇನೋ ಈ ಚಿನ್ನವನು ಅದಕೆ 
ಕಲಾವನಾರು ಬಲ್ಲರು ಸವಾಲುಗಳೇ ಕುಣಿಕೆ
ಕೊಟ್ಟು ಉಳಿಸಿ ಬದುಕುವ ಜೀವಿಗಳೇ ಹೂಡಿಕೆ.

✍️ ಆನಂದ ಕವಿ  - Made using Quotes Creator App, Post Maker App
A
anandakavi
Quote by anandakavi - *ಹೂವಿನ ಚಂಡ*

ನಕ್ಕಾನ ನೋಡ ಸೊಕ್ಕಿನ ಜಗಮಂಡ
ಅಕ್ಕಾಗ ತಂದಾನ *ಹೂವಿನ ಚಂಡ*//ಭಾವಯ್ಯ 
ಮಕ್ಕಳಂಗಾ ಅಕಿನ ನೋಡಿ ನಾಚ್ತಾನ.

ಬೇವಿನ ಕಹಿ ಮಾವಿನ ಸಿಹಿ
*ಹೂವಿನ ಚಂಡ* ಅರಳ್ಯವ//ನೋಡವ್ವ
ನವ ವರ್ಷದ ಶುಭಗಳಿಗೆ ಬಂತವ್ವ

ಮಾವಿನ ತೋಟದಾಗ *ಹೂವಿನ ಚಂಡ* ಬಿಟ್ಟಾವ
ಗೋವಿನ ಹಿಂಡು ನನ್ನ ತವರೂರ// ಮಾವೈಯ್ಯ
ಸಾವಿರಾರು ಮಲ್ಲಿಗಿ ಅಲ್ಲಿ ಸುರಿತಾವ.

ಸಾವಿರ ದಳಗಳ *ಹೂವಿನ ಚಂಡ* ನಿನಗೆ
ಮಾವಿನ ಹಣ್ಣು ತಂದಿನಾ//ಮಾದೇವ
ಗವಿಸಿದ್ದ ನೀ ಕೊಟ್ಟ ಫಲಕೆ ಋಣಿ ನಾ.

ಜವರಾಯ ತಂದಾನ *ಹೂವಿನ ಚಂಡ* ನೋಡ
ಕವಿದಿದೆ ಕಾರ್ಮೋಡದ ದಂಡು//ನೋಡವ್ವ
ಹವಿಯಾಗಿದೆ ಕಣ್ಣೀರ ಕಡಲಿಂದು.

✍️ ಆನಂದಕವಿ - Made using Quotes Creator App, Post Maker App
A
anandakavi
Quote by anandakavi - All the best lessons are learnt from toughest times,
Happy times always make you easy and lazy.balance in both is equally important for everyone , both are not permanent.
Life Love it Live it.

Fuel Life 💕.



anandakavi  - Made using Quotes Creator App, Post Maker App
A
anandakavi
Quote by anandakavi - *ಮಾಮರದ ಕೋಗಿಲೆ* 

ಮಾಮರದ ಕೋಗಿಲೆ
ಹಿಗ್ಗಿ ಹಿಗ್ಗಿ ಕೂಗುತಿದೆ
ಸುಗ್ಗಿ ಕಾಲ ಬಂತೆಂದು 
ಹೊಸ ಚಿಗುರ ಸವಿದು
ಕುಹೂ ಕುಹೂ ಕಂಪೆರೆದು 
ಸವಿ ನುಡಿಯಲಿ ಕರೆಯುತಿದೆ.

✍️ ಆನಂದಕವಿ 

 - Made using Quotes Creator App, Post Maker App
A
anandakavi
Quote by anandakavi - People who criticize you more
Are the one ,watch you more 
They care, they hurt, they see
make and bring the best in you.
critics are stone for your success.

Life Love it Live it.
Fuel Life 💞

anandakavi  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
anandakavi
Quote by anandakavi - ಜೀವನ 

ಬೆತ್ತಲೆಯ ಬದುಕು
ಕತ್ತಲೆಯೇ ಹುಳುಕು
ಅಹಂಕಾರವೇ ಮರಣ
ಹುಟ್ಟು ಸಾವಿನ ಪಯಣ 
ಬದುಕೇ ನಿತ್ಯ ಶಿಕ್ಷಣ
ಸನ್ಮಾರ್ಗವೇ ಜೀವನ
ಸಜ್ಜನರ ಸಂಗವೇ ಜನನ
ಜ್ಞಾನವೇ ಬೆಳಕು ಕಾಣಾ

ಆನಂದಕವಿ
 - Made using Quotes Creator App, Post Maker App
A
anandakavi
Quote by anandakavi - *ಕಾಮದಹನ*

ರತಿ ಕಾಮಣ್ಣ ಪ್ರೀತಿ ಪ್ರಣಯ ಪ್ರಸಂಗ
ಜಗವನ್ನೇ ಮರೆತ ಅವರ ಕಾಮದ ಸಂಗ
ಶಿವನ ಧ್ಯಾನವನ್ನೇ ಭಂಗ ಮಾಡಿದ ಕಾಮಣ್ಣ
ಮೂರನೇ ಕಣ್ಣಿಂದ ಸುಟ್ಟು ದಹನ ಮಾಡಿದರಣ್ಣ 

ಶಿವಪುರಾಣದಲ್ಲಿ ಬರುವ ಈ ಕಥೆಯ ಮರ್ಮ
ಕೆಟ್ಟ ಭಾವನೆಗಳ ಸುಟ್ಟು ಹಾಕುವುದೇ ಧರ್ಮ 
ರತಿಕಾಮಣ್ಣನ ಚಿತ್ರ ಗುಂಡಿಯಲ್ಲಿ ಕಟ್ಟಿಗೆ ಇಟ್ಟು 
ಲಬಲಭ ಅಂತ ಸುತ್ತ ಹೊಯ್ಕೋಳುವರು ಅತ್ತು.

*ಕಾಮಣ್ಣ ಮಕ್ಕಳೇ ಕಳ್ಳಸುಳ್ಳಿ ಮಕ್ಕಳೇ ಭೀಮಣ್ಣ 
ಮಕ್ಕಳೇ ಬಿಟ್ಟಿಸುಳ್ಳೆ ಮಕ್ಕಳೇ ಐದೇ ಕಟ್ಟಿಗಿ ಆರೇಳು 
ಕಂಬ ಎಂಟಾಣೆ ರೊಕ್ಕ ಕೊಡತಂಕ ಬಿಡಲ್ಲಾ*
ಸುಡುವ ಕುಳ್ಳು ಕಟ್ಟಿಗೆ ಕದ್ದು ತರುವರು ಹೊತ್ತೂ.

ಸುಂದರ ಸ್ತ್ರೀ ಪುರುಷನ ಶೃಂಗಾರ, ಪಡೆವರು ದೇಣಿಗೆ
ಬೀದಿಯ ಹುಡುಗರು ಸೇರಿ ರತಿಕಾಮರ ಮೆರವಣಿಗೆ
ಗುಂಡಿತೋಡಿ ಕಾಮಣ್ಣನ ಚಿತ್ರ ಕುಳ್ಳು ಕಟ್ಟಿಗೆ ಸುಡುವರು
ಬಣ್ಣ ಬೂದಿ ಎರಚಿ ಹಳೆಯಬಟ್ಟೆ ಕರ್ಮಗಳ ಬಿಡುವರು.

✍️ ಆನಂದಕವಿ - Made using Quotes Creator App, Post Maker App
A
anandakavi
Quote by anandakavi - Earth, Beautiful place for all the living beings.
Is fittest for survival or conquering is answer,
Destroying development and advancements,
Killing the natural resources and the planet ,
Think better Think wisely 
Is War for ego is self centred and justification for 

New Era , leadership letting the innocent people lives in the name of war.Time for intellectuals to speak and stop the destruction.


Stop the War, let us save our planet and resources,
Life Love it Live it 
Fuel Life 💞

anandakavi  - Made using Quotes Creator App, Post Maker App
A
anandakavi
Quote by anandakavi - *ಕಾಡಿಗಿ ಕಣ್ಣ*

ಬೇಡಿ ಹಡೆದಾಳ ಜೋಡಿ ಹೆಣ್ಣ 
ಹಾಡಿ ಹೊಗಳ್ಯಾರ *ಕಾಡಿಗೆ ಕಣ್ಣ* //ನನ್ನವ್ವ
ಜೋಡಿ ಹೊರಟರ ನಿಂತು ನೋಡ್ತಾರ.

ನಡು ಸಣ್ಣ ನೋಡವಳ  *ಕಾಡಿಗಿ ಕಣ್ಣ*
ಅಡಗಿ ಸನ್ನಿ ಮಾಡುವಳಣ್ಣ //ಚೆಲುವಿ
ಗಡಗಿ ಮೊಸರು ರೊಟ್ಟಿ ತಂದಾಳಣ್ಣ.

ಬೆಡಗಿಯ ಬಣ್ಣ ಅವಳ *ಕಾಡಿಗಿ ಕಣ್ಣ* 
ಜಡಿಗೆ ದುಂಡು ಮಲ್ಲಿಗೆ ,ನಾಗರ //ನೋಡವ್ವ
ನುಡಿದರೆ ಮುತ್ತು ಸುರಿತಾವ.

ಮೋಡಿ ಮಾಡ್ಯವ *ಕಾಡಿಗಿ ಕಣ್ಣ*
ಗುಡಿಗೆ ಬಂದಾಳಾ ನಿನ್ನ ಗೆಳತಿ// ತಂಗ್ಯವ್ವ 
ಬೆಡಗಿ ನನ್ನ ಮನಸ ಕದ್ದಾಕಿ.

ತೀಡಿದ ಹುಬ್ಬು ಅವಳ *ಕಾಡಿಗಿ ಕಣ್ಣ* 
ಹಡೆದಾಳ ಮುದ್ದು ಕಂದನಾ//ನಾದಿನಿ 
ಮಡಿಲಾಗ ಕಿಲಕಿಲ ನಗುತಾಳ.

ಕುಡಿಮೀಸೆ ಮಾವಂಗೆ ಗಡಿನಾಡ ಚೆಲುವಿ
*ಕಾಡಿಗಿ ಕಣ್ಣ* ನನ್ನ ಅತ್ತ್ಯವ //ನೋಡವ್ವ
ದಡಬಡ ಎಕರಿ ಕಬ್ಬು ಕಡೆದ ಹಾಕ್ಯಾಳಾ.

✍️ ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ರುಬಾಯಿ*

ಸೂತ್ರಧಾರ ನೀನು
ಪಾತ್ರಧಾರಿ ನಾನು
ನೀ ಕೊಟ್ಟ ಪಾತ್ರವ 
ನೀ ನಡೆಸು ಶಿವ


✍️ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ಚಮ್ಮಾರ* 

ಕಾಯಕವೇ ಕೈಲಾಸ ಅನ್ನೋ ಧರ್ಮ
ಹರಿದ ಚಪ್ಪಲಿಗಳ ಹೊಲಿಯುವ ಕರ್ಮ
ಬಿಸಿಲು ಮಳೆ ಚಳಿಗೆ ಸುಡುವುದು ಚರ್ಮ
ದುಡಿಮೆ ತುತ್ತಿಗಾಗಿ ಅನ್ನೋದೇ ಮರ್ಮ

ರಸ್ತೆಯ ಬದಿಯಲ್ಲಿ ಪುಟ್ಟದಾದ ಅಂಗಡಿ
ಬಂದವರ ಶೋಗಳ ತಿಕ್ಕಿ ಹೊಳಪ ತರುವ
ತಲೆ ಕೆಳಗೆ ಹಾಕಿ,ಹರಿದ ಚಪ್ಪಲಿ ಹೊಲಿಯುವ 
ಹಗಲು ರಾತ್ರಿ ದುಡಿದರೂ ಬಿಡಿಗಾಸು ಗಳಿಸುವ

ಬೆವರು ಸುರಿಸಿ ಎಕ್ಕಲಗಳ ಮಾಡುವ ಚಮ್ಮಾರ 
ಕಟ್ಟಿಗೆ ಡಬ್ಬಿ ಕಂದು ಕಪ್ಪು ಪಾಲಿಷ್ ಡಬ್ಬಣ ದಾರ
ಪದಕ್ಕೆ ಚಪ್ಪಲಿ ಹರಿದರೆ ನಿಲ್ಲುವ, ನಿತ್ಯ ಸಂಚಾರ
ಆಗಲೇ ನೆನಪಾಗುವನು ಬೀದಿಯಲ್ಲಿ ಕುಳಿತ ಚಮ್ಮಾರ 

ಜಾತಿ ನಿಂದನೆಗೊಳಗಾಗಿದ್ದ ಅಂದಿನ ಅವನ ಆಚಾರ 
ಹುಟ್ಟಿದ ಜೀವ , ಸಂಕೋಚ ಪಡದೆ ಮಾಡುವ ಭಾವ.
ಹಿರಿತನ ಕಿರಿತನದ ಅರಿವಿಲ್ಲದ ದೇವನ ಸೃಷ್ಟಿಯ ಭಾಗ.
ಬಿಕ್ಷೆ ಬೇಡದೆ ,ಕಾಯಕ ಮಾಡುವ ಇವ ದುಡಿವ ಹರಿಹರ.


✍️ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ಚಮ್ಮಾರ* 

ಕಾಯಕವೇ ಕೈಲಾಸ ಅನ್ನೋ ಧರ್ಮ
ಹರಿದ ಚಪ್ಪಲಿಗಳ ಹೊಲಿಯುವ ಕರ್ಮ
ಬಿಸಿಲು ಮಳೆ ಚಳಿಗೆ ಸುಡುವುದು ಚರ್ಮ
ದುಡಿಮೆ ತುತ್ತಿಗಾಗಿ ಅನ್ನೋದೇ ಮರ್ಮ

ರಸ್ತೆಯ ಬದಿಯಲ್ಲಿ ಪುಟ್ಟದಾದ ಅಂಗಡಿ
ಬಂದವರ ಶೋಗಳ ತಿಕ್ಕಿ ಹೊಳಪ ತರುವ
ತಲೆ ಕೆಳಗೆ ಹಾಕಿ,ಹರಿದ ಚಪ್ಪಲಿ ಹೊಲಿಯುವ 
ಹಗಲು ರಾತ್ರಿ ದುಡಿದರೂ ಬಿಡಿಗಾಸು ಗಳಿಸುವ

ಬೆವರು ಸುರಿಸಿ ಎಕ್ಕಲಗಳ ಮಾಡುವ ಚಮ್ಮಾರ 
ಕಟ್ಟಿಗೆ ಡಬ್ಬಿ ಕಂದು ಕಪ್ಪು ಪಾಲಿಷ್ ಡಬ್ಬಣ ದಾರ
ಪದಕ್ಕೆ ಚಪ್ಪಲಿ ಹರಿದರೆ ನಿಲ್ಲುವ, ನಿತ್ಯ ಸಂಚಾರ
ಆಗಲೇ ನೆನಪಾಗುವನು ಬೀದಿಯಲ್ಲಿ ಕುಳಿತ ಚಮ್ಮಾರ 

ಜಾತಿ ನಿಂದನೆಗೊಳಗಾಗಿದ್ದ ಅಂದಿನ ಅವನ ಆಚಾರ 
ಹುಟ್ಟಿದ ಜೀವ , ಸಂಕೋಚ ಪಡದೆ ಮಾಡುವ ಭಾವ.
ಹಿರಿತನ ಕಿರಿತನದ ಅರಿವಿಲ್ಲದ ದೇವನ ಸೃಷ್ಟಿಯ ಭಾಗ.
ಬಿಕ್ಷೆ ಬೇಡದೆ ,ಕಾಯಕ ಮಾಡುವ ಇವ ದುಡಿವ ಹರಿಹರ.


✍️ಆನಂದಕವಿ - Made using Quotes Creator App, Post Maker App
A
anandakavi
Quote by anandakavi - Life is an entity 
Work is dignity 
Health be priority 
Share responsibility 
Be there for necessity 
Life Love it Live it.


Fuel Life 💞 



anandakavi  - Made using Quotes Creator App, Post Maker App
A
anandakavi
Quote by anandakavi - ಮನೆ 


ಅಂದರೆ ನೆನಪಾಗುವುದು ಅಮ್ಮನ ಬಿಸಿಯೂಟ ,ಅಪ್ಪನ ಉತ್ಸಾಹ ಬೈಗುಳ ,ಅಣ್ಣ ತಮ್ಮಂದಿರ ಜಗಳ, ಅಕ್ಕ ತಂಗಿಯರ ಮುನಿಸು, ಪ್ರೀತಿ. ಎಷ್ಟೇ ಕೋಪವಿದ್ದರೂ ನಮ್ಮ ಅಣ್ಣ,ಅಕ್ಕ, ತಮ್ಮ ಅನ್ನೋ ಪ್ರೀತಿಯ ಋಣನುಬಂಧ. ಅದರಲ್ಲೂ ದೊಡ್ಡಪ್ಪ , ದೊಡ್ಡಮ್ಮ,ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆಯಂದಿರು,ಮಾವ, ಅವರ ಮಕ್ಕಳು . ಮನೆ ಬರೀ ಮನೆಯಾಗಿದೆ ಛತ್ರವೇ ಸರಿ, ಪಂಕ್ತಿ ಊಟ ,ರಾತ್ರಿ ಹಾಸಿಗೆ ಮಲಗುವ, ಕಥೆ ಹೇಳುವ,ದೇವರ ಹಾಡು ಹೇಳಿ ಕೊಡುವ ಅಜ್ಜಿ, ತಿಂಡಿ ಕುರುಕಲು,ತಿನಿಸುಗಳಿಗೇನು ಕಮ್ಮಿಯಿಲ್ಲ. ಬೆಳಗಾದರೆ ಎಲ್ಲರ ನಿತ್ಯ ಕರ್ಮಗಳನ್ನು ಮುಗಿಸಿ ,ಹಾಲು ಬಿಸ್ಕತು, ತಿಂಡಿ  ಮಧ್ಯಾನದ ಊಟ ,ಹೇಗೆ ಎಲ್ಲವನ್ನೂ ನಿಭಾಯಿಸುತ್ತಿದ್ದರೂ. ಮನೆಯ ನಿರ್ವಹಣೆ ಇಪ್ಪತ್ತರಿಂದ ಮೂವತ್ತು ಜನರ , ಬಾಣಂತಿ, ಮದುವೆಗಳು ,ಬೀಗರು ಮತ್ತು ಆಳುಕಾಳುಗಳು ಮನೆಯವರೇ.

ರೇಡಿಯೋ ದಲ್ಲಿ ಬರುವ ನಿತ್ಯ ತಪ್ಪದೆ ಕೇಳುವ ಕಾರ್ಯಕ್ರಮ, ಸಿನೆಮಾ, ಗಲ್ಲಿಗಳಲ್ಲಿ ಸಿಗುವ ತಿನಿಸುಗಳು.ಅಬ್ಬಾ ಇಂದಿನ ದಿನಗಳಲ್ಲಿ ಮಕ್ಕಳು ಒಬ್ಬ ಅಥವಾ ಇಬ್ಬರು, ಅವರನ್ನು ನಿಭಾಯಿಸುವ ಇಂದಿನ ತಂದೆ ತಾಯಿಯಂದಿರು ಆಕಾಶ ಭೂಮಿ ಸೇರಿ ಅಯ್ಯೋ ಅನ್ನೋ ಕಾಲ.ಎಲ್ಲದಕ್ಕೂ ಕೆಲಸದವರು ಆದರೂ ಸುಸ್ತಾಗಿ,ಒಂದು ದಿನ ನಿದ್ದೆಗೆಟ್ಟರೂ ಫೇಸಿಯಲ್ ,ಮಸಾಜ್ ಹೋಗುವ ಜನರು. ಇನ್ನೂ ಇಂದಿನ ಪೀಳಿಗೆ ಝೆನ್ ಜೀ,ಹೊಸ ಲೋಕವೇ ,ಓದಿನಲ್ಲಿ ಬುದ್ಧಿವಂತರು,ನಗುವುದಕ್ಕೂ ಟ್ಯಾಕ್ಸ್ ಕಟ್ಟುವ , ಎಷ್ಟು ಬೇಕೋ ಅಷ್ಟೇ ಮಾತು,ಬೇರೆಯವರ ಮನೆಗೆ ಹೋಗಬೇಕೆಂದರೆ ಬಂತು ನೋಡಿ ಸಿಟ್ಟು, ಹಾಲಿಡೇ ಅಂದ್ರೆ , ಟ್ರಿಪ್ ಗಳು, ಟ್ರೆಕ್ಕಿಂಗ್, ವೈಟ್ ಕಾಲರ್ ಜಾಬ್, ಪಿಜ್ಜಾ, ಬರ್ಗ್ರರ , ಐಸ್ ಕ್ರೀಮ್,ಬ್ರಾಂಡೆಡ್ ಬಟ್ಟೆ ,ಕೇಳುವ ಮೊದಲೇ ಕೊಡಿಸುವ ಪಾಲಕರು. ಅಜ್ಜಿಯ ಕಾಲದಿಂದ ಇಂದಿನ ಕಾಲವನ್ನು ನೋಡುವ ನಾವೇ ಧನ್ಯರು, ಜಾತ್ರೆಗಳಿಂದ ಇಂದಿನ ಕಂಪ್ಯೂಟರ್ ಯುಗವನ್ನು, ಅಂತರಿಕ್ಷ ಯಾತ್ರೆಗಳನ್ನು ನೋಡಿದ ನಾವೇ ಭಾಗ್ಯವಂತರು. ಅಲ್ಲವೇ....


ಆನಂದಕವಿ




 - Made using Quotes Creator App, Post Maker App
A
anandakavi
Quote by anandakavi - In the world of diversity 
Live with an integrity 
Retain your individuality 
Life is all about dignity 
Save work on sustainability 
Love, Live, Life with divinity 


Fuel Life 💞



anandakavi  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

A
anandakavi
Quote by anandakavi - *ತ್ರಿಪದಿಗಳು* 

*ಬಾಳಿಯ ಗೊನಿ*

ಅಳಿಯ ಬಂದಾನ *ಬಾಳಿಯ ಗೊನಿ* ಹೊತ್ತು
ಮಳಿ ಬಿಸಿಲು ಅನ್ನದೇ ನೆಡೆದಾನ//ನೋಡವ್ವ
ಬಾಳ ಬಳ್ಳಿ ನೋಡಾಕ ಬಂದನಾ.

ಮಲ್ಲಿಗೆ ಹೂದೋಟ ಬೆಲ್ಲದ ಸಿಹಿಯೂಟ
ಕಲ್ಲೂರ ತಿರುವಿನಾಗ ಬಾಳಿತೋಟ // ನನ್ನರಾಯ
ಕಲ್ಲೇಶಾಂಗೆ  *ಬಾಳಿಯ ಗೊನಿ* ಹುಗ್ಗಿಊಟ.

ತೂಗಿ ಬಿದ್ದವ ಬಾಗಿ *ಬಾಳಿಯ ಗೊನಿ*
ಮುಗಿ ಬಿದ್ದವ ಮಂಗ್ಯಾ ತಿನ್ನಾಕ//ನೋಡವ್ವ
ಕೂಗಿ ಕೋಲಿಡಿದು ಒಡಿಸ್ಯನ ನನರಾಯ.

ಕಣ್ಣ ಸಾಲದವ್ವ ಹಣ್ಣ ನೋಡಾಕ
ಬಣ್ಣದ *ಬಾಳಿಯ ಗೊನಿ* ಬಲುಚಂದ // ನನ್ನವ್ವ
ಅಣ್ಣನ ತೋಟದಾಗಿನ ಗಿಳಿ ಚಂದ.

ಸೂತ್ತೂರ ಜಾತ್ರಿಗೆ ಹತ್ತೂರು ಮಂದಿ
ಕುತ್ತಾರ *ಬಾಳಿಯ ಗೊನಿ* ಹೊತ್ತುಕೊಂಡ //ಮಾದೇವ
ಭಕ್ತರು ಉಘೇ ಉಘೇ ಅಂದರಾ.


✍️ ಆನಂದಕವಿ - Made using Quotes Creator App, Post Maker App
A
anandakavi
Quote by anandakavi - Let Smile be religion 
Honesty be character 
Generosity be speaker 
Love will always prosper


fuel life

Anandakavi - Made using Quotes Creator App, Post Maker App
A
anandakavi
Quote by anandakavi - *ತ್ರಿಪದಿಗಳು*

*ತೂಗು ತೊಟ್ಟಿಲ*

ಮಲಗು ಮಗುವೇ ಲಾಲಿಯ ಹಾಡುವೆ
ಚೆಲುವ ಚನ್ನೀಗ ನನ್ನ ದೊರೆ// ನೋಡವ್ವ
*ತೂಗು ತೊಟ್ಟಿಲ* ಶ್ರೀ ಹರಿಗೆ.

ಜೋಗುಳ ಹಾಡುವೆ *ತೂಗು ತೊಟ್ಟಿಲ*  ಬಿಡದೆ 
ನಗುತಾನ ಸೆರಗ ಮರಿಮಾಡಿ//ನೋಡವ್ವ
ಬಗಲಗ ಎತ್ತಿಕೋ ಅಂತಾನ.

ಅಳಬ್ಯಾಡ ನನಕಂದ ಮಳಿ ಸುರಿಧಂಗಾ 
ಗಳಿಗಿಗೊಮ್ಮೆ *ತೂಗು ತೊಟ್ಟಿಲ* ಅಂತಾಳ// ನೋಡವ್ವ
ಬಾಳಿಗೆ ಬಂಗಾರ ನನ ಕೂಸು.

ಸಿಂಗಾರ ಮಾಡುವೆ ಬಂಗಾರದ ಕುಂಚಿಗೆ
ತುಂಗೆಯ ನದಿತೀರ ನನ ತವರು// ಮಾವೈಯ್ಯ 
ಹೊಂಗೆ ಮರದಗಾ *ತೂಗು ತೊಟ್ಟಿಲ*


✍️ ಆನಂದ ಕವಿ - Made using Quotes Creator App, Post Maker App
A
anandakavi
Quote by anandakavi - ಹೋಳಿ ಸಾಲ 

*ಹೋಳಿಸಲಾಗ* ಕುಂತಾ ಗಿಳಿಸಾಲ ಚಂದ 
ಬಿಳಿ ಕೊಕ್ಕರಿ ಹಾರಿ ಬಂದಾವ //ನೋಡವ್ವ
ತಿಳಿ ನೀರ ಕುಡಿದು ಕುಣಿದಾವ.

ಬಿಳಿಮೋಡ ಕವಿದಾವ *ಹೋಳಿಸಲಾ* ನೋಡ
ಮಳಿ ಸುರಿದು ಕೊಡಿ ಹರಿದಾವ//ನನರಾಯ
ಬಿಳಿಹಾಲು ನೊರೆಯಂಗ ಹರಿದಾವ.

ಸಜ್ಜಿಯ ನುಚ್ಚು ಮಜ್ಜಿಗೆ ಅಂಬರಾ
ಗಜ್ಜರಿ ಉಪ್ಪಿನಕಾಯಿ , ಸಂಡಿಗೆಹಪ್ಪಳ// *ಹೋಳಿಸಾಲದಾ*
ಅಜ್ಜನ ಮನಿ ಬಲು ಚಂದ.

*ಹೋಳಿಸಾಲ* ಬದಿಗೆ ಜೋಳದ ತೆನಿಚಂದ
ಬಿಳಿಜೋಳ ಕೈಬೀಸಿ ಕರೆದಾವ  //ಹಕ್ಕಿಗಳ
ಗಳಿಗೊಮ್ಮೆ ಅತ್ಯ್ಯವ ಒಡಿಸ್ಯರ.

*ಹೋಳಿಸಾಲದ* ಮಾವಾಯ್ಯ್ನ ಬಾಳಿಯ ತೋಟ 
ಹುಳಿ ಹುಣಸೆ ಮಾವಿನ ಮರ ಚಂದ//ನೋಡವ್ವ
ಜೋಳ ಮುತ್ತು ಸುರಿದಾಂಗ ಕಣ್ತವಾ .

ಆನಂದ ಕವಿ




 - Made using Quotes Creator App, Post Maker App
A
anandakavi
Quote by anandakavi - *ಶೃಂಗಾರದ ರಸಕಾವ್ಯ*

ಮುತ್ತಿನ ಮೂಗುತಿ,ಹವಳದ ತುಟಿಗಳು 
ಕಾಡಿಗೆ ಕಂಗಳು, ತೀಡಿದ ಹುಬ್ಬುಗಳು 
ಕೆಣಕುತಿವೆ ಮೌನ, ಕಣ್ಣ ಅದರದ ರಪ್ಪೆಗಳು 
ಬಂಗಾರದ ಬೆಡಗಿಗೆ ಮುತ್ತಿನ ಸರಗಳು

ಅಪ್ಸರೆಯಂತೆ ಶೃಂಗಾರದ ರಸಕಾವ್ಯ ನೀನು
ಕುಳತಿಹೆ ಮಂದ ಬೆಳಕಿನಲ್ಲಿ ನಿಶಬ್ದ ಜೇನು
ಕೇಸರಿಯ ಹೊಂಬಣ್ಣ ಸೋಕಿದೆ ಮೈಬಣ್ಣ
ಯಾವ ವೀರನ ಮನ ಗೆದ್ದು ಸೋತೆ ನೀನು?

ಮಲ್ಲಿಗೆ, ಜುಮಾಕಿ,ಕೇಶರಾಶಿ ಮುಂಗುರುಳು
ತೋಳಿನ ಬಾಜುಬಂದಿಯ ಕಲಕುವ ಶಬ್ದಗಳು
ಮೌನದಲ್ಲೇ ಸಾವಿರ ಕಾಣದ ಕನಸುಗಳು 
ಹಸಿರಾಗುವ ಸುಧೆಯ ಮಧುರ ಕ್ಷಣಗಳು 

ಒಲುಮೆಯ ಸಿಹಿ ಭಾವಗಳ ಸಂಚಲನ 
ಮನ ಕುಣಿದಿದೆ ,ಹಾಡಿದೆ ಹೊಸ ಗಾಯನ
ಸದ್ದಿಲ್ಲದೆ ಗದ್ದಲದಲ್ಲಿಯೂ ರೋಮಾಂಚನ
ಏಕಾಂತದಲ್ಲಿಯೂ ತುಂಟತನದ ಭಾವನ.


✍️ ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ಗಿಣ್ಣ* 

ಅಣ್ಣನ ಮನಿಗೆ ಬಣ್ಣದ ತೋರಣ
ಮಣ್ಣಿನ ಮನಿಗೆ ಸುಣ್ಣದ ಬಣ್ಣ//ನೋಡವ್ವ
ಅತ್ತಿಗೆ ಮಾಡಿ ಉಣಿಸ್ಯಾಳ *ಗಿಣ್ಣ*

ತಣ್ಣಗಿರಲವ್ವ ತವರು ಅಣ್ಣ ತಮ್ಮಂದಿರು
*ಗಿಣ್ಣದ* ಹಾಲು ಬೆಲ್ಲಾ ತಂದಾರ//ನನ್ನವರು
ಮಣ್ಣ ಬಂಗಾರ ಮಾಡ್ಯಾರ.

ಅಣ್ಣ ಬಂದನಾ *ಗಿಣ್ಣ* ತಂದಾನ
ಸಣ್ಣಕ್ಕಿ ಮಾಡಿನ ನೀನಗಂಥ //ನನರಾಯ
ಉಣ್ಣಾಕ ಬಾರೋ ಅಣ್ಣ ಹಸಿದಾನ.

*ಗಿಣ್ಣದ* ಹಾಲೀಗೆ ಚಿಣ್ಣರ ಸಾಲು 
ಮಣ್ಣಿನ ಕುಡಕೀ ತಂದಾರ //ನೋಡವ್ವ
ಕಣ್ಣಪ್ಪಗ ಹುಘೆ ಅಂದು ತಿಂದಾರ.

ಸಂತೆಯ ಮೂಲ್ಯಾಗ ಶಾಂತವ್ವನ *ಗಿಣ್ಣ* 
ಗಿಂತಿ ಮಾಡಿ ರೊಕ್ಕ ಎಣಿಸ್ಯಾಳ //ನೋಡವ್ವ
ಮಾಂತೇಶನ ಕೈ ಮುಗಿದು ನೆಡದಾಳ.

✍️ಆನಂದಕವಿ - Made using Quotes Creator App, Post Maker App
A
anandakavi
Quote by anandakavi - *ಮಹಾತ್ಮಾ* 

ದೇಶ ಭಕ್ತಿ ಮೆರೆದ ಜೀವಾತ್ಮ
ಜೀವವನ್ನು ಪಣಕಿಟ್ಟ ಜನ್ಮಾತ್ಮ
ದಂಡಿಯಾತ್ರೆ ಮಾಡಿ ಸಂಘಟಿಸಿ
ಒಗ್ಗೂಡಿಸಿ ಶಾಂತಿ ಮಂತ್ರ ಪಠಿಸಿ 

 ಸ್ವದೇಶಿ ,ಸ್ವಾತಂತ್ರ್ಯ, ಸದ್ಭಾವನಾ
ಉಪ್ಪಿನ ಸತ್ಯಾಗ್ರಹ,ಆಂದೋಲನ
ವಿದೇಶೀ ವಿರೋಧ ,ಅಸಹಕಾರ 

ಚರಕ, ಖಾದಿಯ ದೇಶ ಸಂಚಲನ
ಹಸಿವು ಬಡತನ ನಿರ್ವಹವೇ ಸವಾಲು
ಯುವ ಜನರಿಗೆ ನೌಕರಿ ಹಾಗೂ ಶಿಕ್ಷಣ 

ದೇಶಕ್ಕಾಗಿ ದುಡಿದವರೇ ಮಹಾತ್ಮಾ 
ದೇಶ ಭಕ್ತಿ ಭಾರತ ಒಗ್ಗೂಡಿಸಿದ ಆತ್ಮ
ಗಾಂಧಿಜೀ ,ಬಾಪೂಜಿ, ನೀವು *ಮಹಾತ್ಮ*.


✍️ ಆನಂದ ಕವಿ - Made using Quotes Creator App, Post Maker App
A
anandakavi
Quote by anandakavi - ರಥಸಪ್ತಮಿ 


ಏಳು ಸೂರ್ಯಗಳನೇರಿ ಬರುವ ಸೂರ್ಯ
ಹಗಲು,ರಾತ್ರಿ,ಹುಣ್ಣಿಮೆ,ಅಮಾವಾಸ್ಯೆ ತರುವ
ಚೈತ್ರ,ವಸಂತ ,ಗ್ರೀಷ್ಮ,ವರ್ಷ,ಶರತ್ ಋತುಗಳು

ವಿಸ್ಮಯ ವಿಚಿತ್ರ ಸತ್ಯ ಅಸತ್ಯಗಳ ಜೀವತಂತ್ರ 
ಪಂಚ ಭೂತಗಳ ಸಮ್ಮಿಲನ ವೈವಿಧ್ಯಗಳ ಸೂತ್ರ 
ನಭೋ ಮಂಡಲದ ಅನಂತ ತಾರೆಗಳ ದಿಗಂತ

ನಿತ್ಯ ಉದಯಿಸಿ ಸತ್ವಗಳ ಭರಿಸಿ ಮುಳುಗುವ ರವಿ
ನಿದ್ದೆಯೆಂಬ ತತ್ವ ನಿತ್ರಾಣಗಳ ಶಕ್ತಿಯ ಭರಿಸುವ ಜೀವಿ
ಭಾವ ಅನುಭವ ಸಂಶೋದನೆಗಳ ಹೊಸ ಹುಡುಕಾಟ

ಸೂರ್ಯ ನಿನಗೆ ನಮನ, ಜೀವಿಯ ಬಡಿತ ಉಷ್ಣಾಂಶ
ಕಾಣುವ ದೈವ ನೀನಮಗೆ ವಂದಿಸುವೆ ನಿನಗೆ ಪ್ರಭಾಕರ
ರಥವನೇರಿ ಸಪ್ತಮಿಯಂದು ನೇಮಿಸುವೆವು ನಿನಗೆ ದಿನಕರ.


ಆನಂದಕವಿ



 - Made using Quotes Creator App, Post Maker App
A
anandakavi
Quote by anandakavi - *ಬೆಲ್ಲಪತ್ತರಿ* 

ಕಲ್ಲಮುಳ್ಳಾಗ ಬೆಳೆವ *ಬೆಲ್ಲಪತ್ತರಿ* ನೀನಗ
ಮಲ್ಲಯ್ಯನ ತೆಲೆ ಮ್ಯಾಗ ಏರಿಸ್ಯರ//ನೋಡವ್ವ
ಕಲ್ಲಿನ ಮಾದೇವ ನಗುತಾನ.

ಸುತ್ತೂರು ಜಾತ್ರಿಗೆ ಹತ್ತೂರು ಮಂದಿ 
ಗೊತ್ತಾ ಸಿಗವಲ್ಡಾ ನಮ್ಮೂರ// ನನರಾಯ
ಹೊತ್ತು ಹೋಗೋಣ *ಬೆಲ್ಲಪತ್ತರಿ* ಮಾದೇವ್ಗ.

ಕಲ್ಲಿನ ಮಾದೇವ್ಗ ಬೆಲ್ಲದ ಹುಗ್ಗಿ 
*ಬೆಲ್ಲಪತ್ತೆರಿ* ತಂದಿನಾ ನೋಡಯ್ಯ//ಶಿವನ 
ಸೊಲ್ಲಾಪುರ ಸಿದ್ಧರಾಮ ಹರಸೆನ್ನ.

ಲಿಂಗವ ಪೂಜಿಸಿ ಸಂಗವ ಮಾಡಿದೆ
ಭಂಗ ಬರದಿರಲಿ ಭಕುತಿಗೆ // ಮಲ್ಲಯ್ಯ
ನಿಂಗ *ಬೆಲ್ಲಪತ್ತರಿ* ಏರಿಸಿ ನಮಿಸುವೆ.

ಅಕ್ಕಮ್ಮನ ಲಿಂಗಕ್ಕೆ ಬಕ್ಕಳ *ಬೆಲ್ಲಪತ್ತರಿ*
ಮುಕ್ಕಣ್ಣನ ಮೈಮರೆತು ನೋಡ್ಯಾಳ//ಮಾದೇವಿ
ದಕ್ಕುವೆಯ ಮಲ್ಲಯ್ಯ ಅಂತಾಳ.

✍️ ಆನಂದಕವಿ - Made using Quotes Creator App, Post Maker App
A
anandakavi
Quote by anandakavi - ನೆನಪಿನ ಅಂಗಳ

     *ಪ್ರೀತಿ ವಿಶ್ವಾಸ*

ವಿವಾಹದ ಮೊದಲ ಪತ್ರಿಕೆ ಕಾಮಾಕ್ಯ ದೇವಿಯ ಪೂಜೆಗಿಟ್ಟು
ಆಶೀರ್ವಾದ ಪಡೆದ ಅರ್ಹಿ ,ಕೆಂಪು ಸೀರೆ ,ಹಣೆ ತುಂಬ ಕುಂಕುಮ ಅಕ್ಕಿ, ಹಚ್ಚಿದ ಸುಂದರ ಹುಡುಗಿ ತಮ್ಮನ ಜೊತೆ ಖುಷಿಯಿಂದ ಅಲ್ಲಿದ್ದ ಹೋಟೆಲಿನಲ್ಲಿ ಪೂರಿ ಭಾಜಿ ಅವಸರದಲ್ಲಿ ತನ್ನ ಕೆಲಸಕ್ಕೆ ಒಂದು ಗಂಟೆಗೆ ಹೋಗಲು ತಿನ್ನುತಾ ಕುಳಿತ ಅವಳು, ಅಷ್ಟರಲ್ಲೇ ಏಳೆಂಟು ಮಧ್ಯಮವಯಸ್ಕರ ಜನರ ಗುಂಪು ನೋಡಿ ,ನಗುತ್ತಲೇ ಬನ್ನಿ ಅಂತ ಜಾಗವಿಲ್ಲದ ಕಾರಣ ಸರಿದು ಕುಳಿತುಕೊಳ್ಳಿ ಅಂತ ಜಾಗ ಕೊಟ್ಟು ,ಎಲ್ಲಿಂದ ಬಂದಿದ್ದೀರಿ ಅಂತ ಶುರುವಾಗಿ ಎಲ್ಲರೂ ಪರಿಚಿತರಂತೆ ಸಂಭಾಷಣೆ ನಡೆಯಿತು,ಮದುವೆಯ ಕಾರಣ ಅಂತ ಅವಳು ಎಲ್ಲರ ಕಾಲಿಗೆ ನಮಸ್ಕಾರ ಮಾಡಿ ಎಲ್ಲರ ಆಶೀರ್ವಾದ ಪಡೆದಳು.
ಪೋಟೋ ತೆಗೆದುಕೊಂಡು ಸೆಲ್ಫಿ ಅವಳ ಜೊತೆ ,ಮತ್ತೆ ತನ್ನ ಫೋನ್ ನಂಬರ್ ಕೂಡ ಕೊಟ್ಟು ಅಲ್ಲಿಂದ ಹೊರಟು ಹೋದಳು.ಅಲ್ಲೇ ಕುಳಿತ ನಾವೆಲ್ಲರೂ ಯಾರೋ ಮೊಬೈಲ್ ಮರೆತಿರುವರು ಅಂತ ತೆಗೆದುಕೊಂಡು ನೋಡಿದಾಗ,ಯಾರದು ಅಲ್ಲ,ಮತ್ತೆ ನಾವು ಯಾರದೋ ಬೇರೆಯವರ ಮೊಬೈಲ್ ತಂದಿದ್ದೆವು, ಎಲ್ಲರಲೂ ಆತಂಕ, ಸಂದೇಹ, ಸಂಶಯ,ಯಾರಾದರೂ ಇಷ್ಟು ಒಳ್ಳೆಯ ವ್ಯಕ್ತಿಗಳು ಇರುವರೇ ಅನ್ನೂ ಅನುಮಾನ ,ಅವಳು ಬೇಕಂತಲೇ ಮೊಬೈಲ್ ಬಿಟ್ಟಿರಬಹುದಾ? ಇತ್ತೀಚಿಗಿನ ಸೈಬರ್ ಕ್ರೈಮ್ಸ್ ಅನ್ನೋ ಗುಂಗು ಎಲ್ಲರಲ್ಲಿ. ಒಂದು ಕ್ಷಣ ಇದ್ದ ಪ್ರೀತಿ ನಂಬಿಕೆ ಹಾರಿ ಹೋಗಿತ್ತು. ಫೋನ್ ನಂಬರ್ ಇದ್ದ ಕಾರಣ ಅವಳ ಅಣ್ಣನ ನಂಬರ್ ಮಾಡಿ 
ದಾಗ, ಅವರದೇ ಅಂತ ಆಯ್ತು, ಆದರೆ ನಾವು ಮಾನವೀಯತೆ ಪ್ರೀತಿ ವಿಶ್ವಾಸ ನಂಬಿಕೆ,ಕ್ಷಣದಲ್ಲೇ ಅವಿಶ್ವಾಸಕ್ಕೆ ಬದಲಾದ ನಮ್ಮ ಪ್ರವೃತ್ತಿ ಮತ್ತೆ ಮರಳಬೇಕಾ,ಅಥವಾ ಎಚ್ಚರಿಕೆ ವಹಿಸಬೇಕಾ ಅನ್ನೋ ಪ್ರಶ್ನೆ ಮಾತ್ರ ಈಗಲೂ ಕಾಡುತ್ತದೆ. ಆದರೆ ಅಣ್ಣ ತಂಗಿಯ ಆ ಪ್ರೀತಿಯ ನೆನಪು ಮಾತ್ರ ಸದಾ ಆಶೀರ್ವಾದ ಪ್ರೀತಿ ಉಳಿಯಲಿ. ಇಂದು ಅವಳ ಮದುವೆ ,ಒಂದು ನಗು ತೇಲಿದಾಗ, ಪ್ರೀತಿ ಬಾರದಿರುವುದಾ. ಸುಖವಾಗಿ *ಸುಮಂಗಲೆಯಾಗಿರು ಮಗಳೇ*.

✍️ ಆನಂದಕವಿ - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.