Vagish Aradhya profile
Creator Profile

Vagish Aradhya

ಕನ್ನಡವೇ ಸತ್ಯ ಕನ್ನಡವೇ ನಿತ್ಯ

210 Posts
6 Followers
4 Following
V
Vagish Aradhya
Quote by Vagish Aradhya - ಸಂಧಿಸಲು ಆಗಿಲ್ಲ 
ಪರವಾಗಿಲ್ಲ
ನಿತ್ಯ ನಿರಂತರ 
ನಿನ್ನದೇ ಗುಂಗು
ಅಂತರ ದೇಹಕ್ಕೆ 
 ಮನಸಿಗಲ್ಲ . 
ಕಾಡುವ ಪ್ರಶ್ನೆ
 ಹಲವು 
ಕಾಡದೆ ಮನಸಿಗೆ 
ಬರುವ 
ನಿರಾಳ ನೀನು. 
ತೆಗೆಯಲಾರೆ 
ಅಂತರಾಳದಿಂದ . 
ಹಾಗೆ ಬಚ್ಚಿಡುವೆ
 ಕೊನೆತನಕ.  - Made using Quotes Creator App, Post Maker App
V
Vagish Aradhya
Quote by Vagish Aradhya - ಆ ದಿನ ಮರೆತಿಲ್ಲ 
ಆ ಕ್ಷಣ ಮರೆಯೋಲ್ಲ 
ಆಗ ನೀನೆ ಎಲ್ಲಾ 
ಈಗ ನೀನೇ ಇಲ್ಲಾ
ಕಾಡುವ ನೆನಪಿಗೆ 
 ಎಳ್ಳು ನೀರು ಬಿಟ್ಟಿಲ್ಲ 
ಯಾಕಂದ್ರೆ 
ನಿನ್ನ ನೆನಪಿಲ್ಲದೆ 
ನಾನಿಲ್ಲ..❤️
 - Made using Quotes Creator App, Post Maker App
V
Vagish Aradhya
Quote by Vagish Aradhya - ಆ ದಿನ ಮರೆತಿಲ್ಲ 
ಆ ಕ್ಷಣ ಮರೆಯೋಲ್ಲ 
ಆಗ ನೀನೆ ಎಲ್ಲಾ 
ಈಗ ನೀನೇ ಇಲ್ಲಾ
ಕಾಡುವ ನೆನಪಿಗೆ 
 ಎಳ್ಳು ನೀರು ಬಿಟ್ಟಿಲ್ಲ 
ಯಾಕಂದ್ರೆ 
ನಿನ್ನ ನೆನಪಿಲ್ಲದೆ 
ನಾನಿಲ್ಲ..❤️
 - Made using Quotes Creator App, Post Maker App
V
Vagish Aradhya
Quote by Vagish Aradhya - ಓ ಸೂರ್ಯ
 ಒಮ್ಮೆಯೂ
ರಜ ಹಾಕದ 
ನಿರಂತರ
ಕೆಲಸಗಾರ ನೀ 
ಜಗತ್ತಿಗೆ ಬೆಳಕ 
ಕೊಡುವೆ
ನಿನಗೇಕೆ 
ಹಮ್ಮಿಲ್ಲ. 
ನಿನ್ನ ಬೆಳಕು 
ನಿನ್ನ ಶಾಖಾ
ದಿನ ಪ್ರಾರಂಭ 
ನಿನ್ನಿಂದಲೇ 
ನನ್ನದೇನು
ಪಾತ್ರವಿಲ್ಲ
ಆದರೂ ನನಗೆ
ಅಹಮ್ಮು.  - Made using Quotes Creator App, Post Maker App
V
Vagish Aradhya
Quote by Vagish Aradhya - ಬಳಲಿದ ಜೀವಕೆ 
ನಿದ್ದೆಯ ಮದ್ದು 
ಕುದ್ದು ಮಾಡಿದ
ಕೆಲಸ ಕೊಂಚ 
ಬಯಸುತ್ತಿದೆ
ಕೊಂಚ ನಿದ್ದೆ. 
 - Made using Quotes Creator App, Post Maker App
V
Vagish Aradhya
Quote by Vagish Aradhya - ನಿನಗಿಂತ ಸರಿ ಸಾಟಿ ಯಾರಿಲ್ಲ
ಯಾರಿಗೂ ನೀ ಹೋಲಿಕೆ ಅಲ್ಲ
ನಿನ್ನ ಮುಂದೆ ನಾವು ಏನು ಅಲ್ಲ
ನಿನ್ನ ಮಡಿಲಲಿ ನಾವು 
ನಾವು ಮಡಿದರು 
ಸೇರುವುದು ನಿನ್ನೊಡಲಿಗೆ 
ಪ್ರಕೃತಿ 🙏🙏
 - Made using Quotes Creator App, Post Maker App
V
Vagish Aradhya
Quote by Vagish Aradhya - ನಿನ್ನ ಚಿಂತನೆಗಳು 
ನಿನ್ನ ಸ್ವಭಾವದಂತೆ. 
ನಿನ್ನ ಮನಸ್ತಿತಿ 
ನಿನ್ನ ಪರಿಸ್ಥಿತಿ
ಎಲ್ಲವೂ ನಿನ್ನಂತೆ 
ಹೋಲಿಕೆ ಸಲ್ಲದು. 
ಕೈ ಬೀಸಿ ಕರೆಯುವ
ಕೈ ಬೆರಳುಗಳು ಕೂಡ
ಸಮವಿಲ್ಲ..  - Made using Quotes Creator App, Post Maker App
V
Vagish Aradhya
Quote by Vagish Aradhya - ಪುಟ ತಿರುವಿ ನೋಡು 
ಜ್ಞಾನದ ಗುಚ್ಛ ಸಿಗುವುದು
ಅಕ್ಷರಗಳು ಪದಗಳಾಗಿ 
ಪದಗಳು ಸಾಲುಗಳಾಗಿ 
ಸಾಲು ಪದ್ಯವಾಗಿ 
ಮನಸ ನಾಟುವುದು.  - Made using Quotes Creator App, Post Maker App
V
Vagish Aradhya
Quote by Vagish Aradhya - ಪುಟ ತಿರುವಿ ನೋಡು 
ಜ್ಞಾನದ ಗುಚ್ಛ ಸಿಗುವುದು
ಅಕ್ಷರಗಳು ಪದಗಳಾಗಿ 
ಪದಗಳು ಸಾಲುಗಳಾಗಿ 
ಸಾಲು ಪದ್ಯವಾಗಿ 
ಮನಸ ನಾಟುವುದು.  - Made using Quotes Creator App, Post Maker App
V
Vagish Aradhya
Quote by Vagish Aradhya - ಜೀವನದಲ್ಲಿ 
ದುಡ್ಡು ಮಾಡುವಷ್ಟು
ಸದ್ದು ಬೇರೇನೂ ಮಾಡದು 
ಸಂಬಂಧಗಳ ಪ್ರಾಮುಖ್ಯ 
ದುಡ್ಡಿನಿಂದ 
ಅಳಿಸಿ ಹೋಗಿದೆ - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

V
Vagish Aradhya
Quote by Vagish Aradhya - ಪುಟಗಳು
 ತಿರುವಿದಷ್ಟು 
ಜ್ಞಾನ 
ಭಂಡಾರ 
ಪಠಿಸಿದಷ್ಟು
 ವಿಚಾರ
ತಿಳಿದಷ್ಟು 
ಆಚಾರ
ಓದು 
ತಿಳಿಸಿದಷ್ಟು
ಜ್ಞಾನ
 ಕಲಿತಷ್ಟು - Made using Quotes Creator App, Post Maker App
V
Vagish Aradhya
Quote by Vagish Aradhya - ಮಾತು ಕಡಿಮೆಯಾದರೂ
ನೆನಪು ಹೆಚ್ಚಾಯಿತು
ನೆನಪು ಕಡಿಮೆಯಾದರೂ 
ಪ್ರೀತಿ ಹೆಚ್ಚಾಯಿತು 
ಇಚ್ಚಿಸದ ಮನ  
ಮೆಚ್ಚಿಸಲಲ್ಲ 
ಸ್ಪರ್ಶಿಸಲಲ್ಲ 
ಪ್ರೀತಿಸಲು - Made using Quotes Creator App, Post Maker App
V
Vagish Aradhya
Quote by Vagish Aradhya - ಇದೇನು ವಿಚಿತ್ರ
ಅಲ್ಲಿ ಯಾರೋ ಬಂದ್ರು 
ಇಲ್ಲಿ ಯಾರೋ ಬಂದ್ರು
ಆದ್ರೆ ಯಾರು ಜೊತೆಗೆ 
ನಿಲ್ಲಲಿಲ್ಲ.. 
ಬಂದವರು ಬಂದಂತೆ
ಹೋದರು
ಬೇಕಾದದ್ದು ಕಸಿದುಕೊಂಡು
ಹೇಳದೆ ಹೋದರು.. 
ಹೇಳಿದ್ರೆ ಹೃದಯ ಕಲ್ಲು 
ಮಾಡಿಕೊಳ್ಳಬಹುದಿತ್ತು.. 
ಪರ್ವಾಗಿಲ್ಲ ಈಗ 
ಹೃದಯ ವಜ್ರವಾಗಿದೆ.  - Made using Quotes Creator App, Post Maker App
V
Vagish Aradhya
Quote by Vagish Aradhya - ಹೃದಯಕ್ಕೆ 
ಹತ್ತಿರವಾದವರು 
ನೋವ ಮರೆಸಿದವರು
ಹೃದಯದಿಂದ
 ದೂರವಾಗಿ 
ಅಳುವನ್ನೇ 
ತರಿಸಿದವರು 
ಅಳಲಾಗದೆ 
ತೊಳಲಾಡಿ 
ಮನಸ 
ಹಿಂಡಿದವರು
ನಾನ್ಯಾರೋ 
ಅವರ್ಯಾರೋ 
ಆದರೆ ನಾನೇ ಕೊಟ್ಟ
 ಹೃದಯ ಅವರ ಬಳಿ ❤️

 - Made using Quotes Creator App, Post Maker App
V
Vagish Aradhya
Quote by Vagish Aradhya - ನಾಳೆಯ ಚಿಂತೆ 
ನಾಮಗಿಲ್ಲ 
ನೆನ್ನೆಯದು 
ಯಾವುದೋ 
 ನೆನಪಿಲ್ಲ 
ಈ ದಿನದ ಸತ್ಯವಷ್ಟೆ 
ನಾ ಅರಿತೆ.
ಬೇಡದ ಮಾತುಗಳು 
ಬೇಕಿಲ್ಲ..
ವ್ಯರ್ಥದ ಸಮಯ 
ನಮ್ಮದಲ್ಲ..
ನಿನ್ನದೇ ಮಾತುಗಳು 
ನಿನ್ನಿಷ್ಟದಂತೆ..
ಬದುಕು ಬಂದಂತೆ 
ಸ್ವೀಕರಿಸುವುದು 
 ನಮ್ಮಿಷ್ಟದಂತೆ.
 - Made using Quotes Creator App, Post Maker App
V
Vagish Aradhya
Quote by Vagish Aradhya - ಮುಂಜಾನೆಯ
ಎಳೆ ಬಿಸಿಲಿನ 
ಸ್ಪರ್ಶ ಹಿತ
ನವಿರಾದ 
ರವಿಯ ಕಿರಣ
ಬೆಚ್ಚನೆಯ ಶಾಖ 
ಮೈ ಸೋಕಿ
ಹೇಳುತಿದೆ
 ಎದ್ದೇಳು ಎಂದು.


 - Made using Quotes Creator App, Post Maker App
V
Vagish Aradhya
Quote by Vagish Aradhya - ಸರಿ ದಾರಿಯಲ್ಲಿ 
ನಡೆವಾಗ ದಾರಿ 
ತಪ್ಪಿಸುವವರೆಷ್ಟೋ 
ನನ್ನನ್ನೇ ನಾನು 
ನಂಬಲಾಗದಷ್ಟು
ಕೇಡು ಬಯಸುವವರೆಸ್ಟೊ 
ದೃಢವಾಗಿ ನಿಂತರೆ 
ಅಲುಗಾಡಿಸಲಾಗದು 
ಬಯಸದೆ ಬಂದದ್ದು 
ಒಂದೆಡೆಯಾದರೆ 
ಬಯಸಿದವರೆ 
ಹಿಂಬದಿಯಲ್ಲಿ ಚುಚ್ಚುವ 
ಮಂದಿ ಮತ್ತೊಂದೆಡೆ.. 
 - Made using Quotes Creator App, Post Maker App
V
Vagish Aradhya
Quote by Vagish Aradhya - ಚುಮುಚುಮು ಚಳಿಗೆ 
ಬಿಸಿ ಬಿಸಿ ಕಾಫಿ
ಬೆಚ್ಚನೆ ಹೊದಿಕೆ 
ಇದ್ದರೂ ನಡುಕ
ಸುರಿವುದು ಮಂಜು
ನಡುಗಿಸಲು
ಬೆಜ್ಜನೆ ಹೀರುತ 
ಸೊರೆಯುತ 
ಓಡಿಸು ಚಳಿಯ
ಬಿಸಿ ಕಾಫಿ ☕ 
 - Made using Quotes Creator App, Post Maker App
V
Vagish Aradhya
Quote by Vagish Aradhya - ಮತ್ತೊಂದು ದಿನ 
ಭರವಸೆಯ ದಿನ
ಸಿಹಿ ಕಹಿಗಳ 
ಉಣಬಡಿಸುವ ದಿನ 
ಕಳೆದ ದಿನವ ಮರೆತು 
ಹೊಸದೊಂದು 
ದಿನಕ್ಕೆ ಮುನ್ನುಡಿ
ಈ ದಿನ ನಮಗಾಗಿ 
ಈ ದಿನ ನಮ್ಮದಾಗಲಿ
 - Made using Quotes Creator App, Post Maker App
V
Vagish Aradhya
Quote by Vagish Aradhya - ನೋವಿಗೆ 
ಮುಲಾಮು ನೀನು
ಕ್ಷುಲ್ಲಕ ಕಾರಣ ಸಾಕು 
ನಿನ್ನ ಭೇಟಿಗೆ 
ದುಬಾರಿ ಬದುಕಲಿ 
ಅಭಾರಿ ಸ್ನೇಹ ನಿನ್ನದು 
ಮನಸು ಬಿರುಕಾಗಿದೆ
ನಗುವೊಂದ ಬೀರಿಬಿಡು 
ಸದ್ದಿಲ್ಲದ ಅರೆಗಳಿಗೆ ಸಾಕು
ಉಳಿಯಲು ಮನದಲಿ
ಪ್ರೀತಿಯ ಜಗಲಿಯ 
ಮುಂದೆಕಾಯುತಿರುವೆ..


 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

V
Vagish Aradhya
Quote by Vagish Aradhya - ಜೀವನ ನಿರಂತರ
 ಬೇಸರ ತಾತ್ಕಾಲಿಕ
ದುಃಖ ಅಚಾತುರ್ಯ
 ಸಂತಸ ನಮ್ಮೊಳಗಿರುವ ಶಕ್ತಿ 
ನೆಮ್ಮದಿಗೆ ಬೇಕು ಭಕ್ತಿ 
ವಿಹಾರ ವಿಲಾಸಾ 
ದುಡ್ಡು ಕಾಸು 
ಬರುತ್ತೆ ಹೋಗುತ್ತೆ 
ಸುಖ-ದುಃಖ ನಿಲ್ಲುತ್ತೆ 
ನಡೆಯುತ್ತೆ 
ಆದರೆ ಹೋಗಲ್ಲ
ಹೊತ್ತು ತಿರುಗುವುದು 
ಒಂದೇ ನಿತ್ಯ ಕಾಯಕ .  - Made using Quotes Creator App, Post Maker App
V
Vagish Aradhya
Quote by Vagish Aradhya - ಭರವಸೆಯ ಬದುಕಿನ 
ಪಯಣಿಗರು ನಾವು 
ಬಂದವರು ಬರಲಿ 
ಹೋದವರು ಹೋಗಲಿ 
ಈಗಿರುವ ಸಮಯವು 
ನಮ್ಮದಾಗಿರಲಿ 
ಅರಿಯದ ವಿಷಯ 
ಅರಿಯುವವರೆಗೆ 
ಅರಿತ ವಿಷಯ 
ಅರಗಿಸಿಕೊಳ್ಳುವ ವರೆಗೆ 
ನಿತ್ಯ ಜಂಜಾಟದ ಬದುಕಲಿ 
ಮಿಥ್ಯವ ಸತ್ಯವಾಗಿ ಸು 
ಸಂತಸದ ಕ್ಷಣವ ಅನುಭವಿಸು  - Made using Quotes Creator App, Post Maker App
V
Vagish Aradhya
Quote by Vagish Aradhya - ಕೋಪದಲ್ಲಿ ಕಳೆದುಕೊಂಡದ್ದನ್ನು
ಮರಳಿ ಪಡೆಯಲಾಗದು
ಪಡೆದದ್ದನ್ನು ಉಳಿಸಿಕೊಳ್ಳಲು 
ದೃಢವಾಗಿರಬೇಕು. 
ಪರಿಸ್ಥಿತಿಗಳು ಕೋಪಗೊಂಡರೆ 
ಮನಸ್ಥಿತಿ ಅಂತವಾಗಿರಬೇಕು
 - Made using Quotes Creator App, Post Maker App
V
Vagish Aradhya
Quote by Vagish Aradhya - 
ಯಾರು ತೆಗಳಿದರೇನು 
ಯಾರು ಹೊಗಳಿದರೇನು 
ಯಾರು ಬೊಗಳಿದರೇನು 
ಯಾರು ಮಾತನಾಡಿದರೇನು 
ಜೀವ ನಮ್ಮದು 
ಜೀವನ ನಮ್ಮದು 
ಬದುಕು ನಮ್ಮದು 
ಈ ದೇಹ ನಮ್ಮದು 
ಮಾತಿಗಿನ್ನ ಜೀವನ ಮುಖ್ಯ 
ಜೀವನಕ್ಕಿಂತ ಬದುಕು ಮುಖ್ಯ 
ಬದುಕಿಂತ ಜೀವ ಮುಖ್ಯ 
ಈಗ ಅರಿಯುವ ಮುನ್ನ 
ನಾವು ಅಂತ್ಯ.
 - Made using Quotes Creator App, Post Maker App
V
Vagish Aradhya
Quote by Vagish Aradhya - ಜವಾಬ್ದಾರಿಯ ಸಂತೆಯಲ್ಲಿ
 ಕಳೆದು ಹೋದ ಜೀವ......
 ಸಮಯ ಸಿಕ್ಕರೆ 
ಮತ್ತೆ ಸಿಗೋಣ..👋
ಸಮಯಕ್ಕೂ ಸಮಯವಿಲ್ಲ 
ಎಂದಾದರೆ ಮತ್ತೇನು 
ಬಯಸಲು ಸಾದ್ಯ 
ಕಾಯುವ ಸಂಯಮ ಅಷ್ಟೇ


 - Made using Quotes Creator App, Post Maker App
V
Vagish Aradhya
Quote by Vagish Aradhya - ಜೀವನವೇ ಅಪಸ್ವರ 
ಬದುಕು ನಶ್ವರ 
ನಡುವೆ ಒಂದಷ್ಟು ವಿಹಾರ 
ಜೀವಕ್ಕಾಗಿ ಆಹಾರ 
ಜಂಜಾಟಗಳು ಘೋರ 
ಕಾಡುವ ಸಮಸ್ಯೆಗಳಿಗೆ 
ಕಣ್ಣು ನೋಡುವುದು ಅಂಬರ 
ಸತ್ಯದ ಪರ ಆದರೂ
 ಯಾರು ಮಾಡುವುದಿಲ್ಲ
 ಉಪಕಾರ. 
ರುಚಿಗೆ ಬೇಕು ಉಪ್ಪು ಖಾರ 
ಕಲಿಯಬೇಕಾಗಿದೆ ಸಂಸ್ಕಾರ - Made using Quotes Creator App, Post Maker App
V
Vagish Aradhya
Quote by Vagish Aradhya - ಸಂತಸದ ದಿನಗಳು 
ನಿಮ್ಮದಾಗಲಿ 
ನಿರುತ್ಸಾಹ ಮರೆಯಿರಿ 
ನಾಳೆಯ ಗುಂಗಿನಲ್ಲಿ
 ಇಂದಿನ ದಿನವ
 ಮರೆಯದಿರಿ 
ಕಳೆದು ಹೋದದ್ದು 
ಹೋಗಲಿ 
ಈ ದಿನ ನಿಮ್ಮದೇ 
ಎನ್ನುವ ಕಟು ಸತ್ಯ 
ಅರಿಯಿರಿ 
ಭ್ರಮೆಯ ಬದುಕಿಗೆ 
ತಿಲಾಂಜಲಿ ಆಡಿ 
ಭರವಸೆಯ ಬದುಕು 
ನಿಮ್ಮದಾಗಿಸಿಕೊಳ್ಳಿ.  - Made using Quotes Creator App, Post Maker App
V
Vagish Aradhya
Quote by Vagish Aradhya - ಚಿಂತೆಗೆ ಇಲ್ಲ ಮುಲಾಮು 
ಚಿತೆಯು ಕೂಡ ನಗುತಿದೆ 
ಜೀವವಿರುವ ಬೊಂಬೆಗಳ ನೋಡಿ 
ನಾಳೆ ನೀನು ಕೂಡ ಚಿತೆಯ 
ಮೇಲಿರುವೆ ಎಂಬ ಸತ್ಯವ
ಸಾರಿ ಸಾರಿ ಹೇಳುತ್ತಿದೆ 
ಅರ್ಥವಾಗದ ಮಾನವನಿಗೆ
ಅರ್ಥವಾಗದ ಮನುಜನಿಗೆ 
ಅರ್ಥೈಸುವವರು ಯಾರು ಜಗದಲಿ.
 - Made using Quotes Creator App, Post Maker App
V
Vagish Aradhya
Quote by Vagish Aradhya - ನಿನ್ನ ಚುರುಕು ನೋಟಕ್ಕೆ 
ಹೃದಯವೇ ಅದುರಿದೆ 
ಇನ್ನು ನಾನ್ಯಾವ ಲೆಕ್ಕ 
ಸೆಳೆಯುವ ಮುನ್ನ 
ನೋಟವ ಸಡಿಲಿಸು 
ಕೊಂಚ ಉಸಿರಾಡುವೆ 
ನಿನ್ನ ಬಿಸಿ ಉಸಿರು 
ನನ್ನೆದೆಯ ಬಡಿತ ಹೆಚ್ಚಿಸಿದೆ.  - Made using Quotes Creator App, Post Maker App
V
Vagish Aradhya
Quote by Vagish Aradhya - ಉಪಯೋಗವಿಲ್ಲದ 
ಮಾತುಗಳು 
ನನ್ನದೇ ಸರಿಯನ್ನುವ 
ವಾದಗಳು
ಉಲ್ಬಡಿಸುವ ಸಮಸ್ಯೆಗಳು 
ನನ್ನದೇ ಸರಿಯನ್ನುವ 
ಮೊಂಡು ವಾದಗಳು 
ವಿಚಿತ್ರವೋ 
ವಿಪರ್ಯಾಸವೂ 
ನಮ್ಮನೆ ನಾವು 
ಮರೆತಿರುವಾಗ 
ಬೆರಳು ತೋರಿಸುವ 
ವಿಚಿತ್ರ ಕಾಯಿಲೆಗಳು
ನಿಲ್ಲದ ನಮ್ಮದಲ್ಲದ 
ಯೋಚನೆಗಳು..


 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

V
Vagish Aradhya
Quote by Vagish Aradhya - ವಿಚಿತ್ರ ವಿಪರ್ಯಾಸ 
ಬಯಸಿದ್ದು ಪಲ್ಟಿ 
ಹೊಡೆಯಿತು 
ಅಂದುಕೊಂಡದ್ದು
 ಮಾಯವಾಯಿತು . 
ಕಾಣದೊಂದು ಜಾಗ 
ಹುಡುಕುವ ಯತ್ನ 
ಊಹಿಸಿಲ್ಲ ಹೀಗೆ 
ಆಗುವುದೆಂದು
ಉಸಿರು ನಿಂತಿಲ್ಲ 
ಆದ್ರೂ ಜೀವ 
ಬಯಸುತ್ತಿದೆ ಜೀವನ.  - Made using Quotes Creator App, Post Maker App
V
Vagish Aradhya
Quote by Vagish Aradhya - ಮಳೆಯ ಮುನ್ಸೂಚನೆ 
ಕೊಟ್ಟ ಮೋಡಕ್ಕೂ ಗೊತ್ತು 
ಚಂದಿರನಿಲ್ಲವೆಂದು . 
ಮೋಡ ಸರಿದರೆ ಚಂದಿರ 
ಕಾಣುವನೆಂಬ ಸತ್ಯ
 ಕತ್ತಲೆಗೂ ಗೊತ್ತಿತ್ತು . 
ಸೂರ್ಯ ಬಂದ ಮೇಲೆ 
ಚಂದಿರನಿಗೇನು ಕೆಲಸ.. 
ಇಬ್ಬರೂ ಕೊಡುವುದು
 ಬೆಳಕನ್ನೇ ಆದರೆ 
ಸಮಯ ಬೇರೆ ಅಷ್ಟೇ..  - Made using Quotes Creator App, Post Maker App
V
Vagish Aradhya
Quote by Vagish Aradhya - ಬೇಸರ ತರಿಸುವ ಮಾತುಗಳು 
ಮನಸ್ಸನ್ನೇ ಕೊಲ್ಲುತ್ತವೆ 
ಮನಸ್ಸಿಗೆ ಆದ ಗಾಯ 
ಮಾಸಲಾರದು. 

ಉಸಿರುಗಟ್ಟುವ ಮುನ್ನ 
ಮನಸು ಗಟ್ಟಿ ಮಾಡು 
ಬಂದದ್ದು ಬರಲಿ 
ಸಿದ್ಧನಿರು
 - Made using Quotes Creator App, Post Maker App
V
Vagish Aradhya
Quote by Vagish Aradhya - ವರಿಸುವ ಮುನ್ನವೇ
 ನೀ ಆವರಿಸಿದೆ 
ಸರಿಸಲಾರೆ 
ಇರಿಸಿಕೋ ಹೀಗೆ 
ಬಗೆದರು ಒಗೆದರು 
ಹೆದರದಿರು 
ತಳ ಗಟ್ಟಿ ಇದೆ ಇದು 
ಬಿಟ್ಟಿ ಮಾತಲ್ಲ 
ಇದು ಗಟ್ಟಿ ಮಾತು.
ಹೆದರದಿರು ಮನವೇ 
ಎಲ್ಲವೂ ಮಾಸುವುದು 
 - Made using Quotes Creator App, Post Maker App
V
Vagish Aradhya
Quote by Vagish Aradhya - ಬದುಕಿದ್ದಷ್ಟು ದಿನ 
ಬದುಕಿನ ಜೊತೆ ಜಂಜಾಟ 
ಕೈಹಿಡಿದು ನಡೆಸುವವರು 
ಮಾಯವಾದರೆ ಬದುಕು 
ಹಿಡಿಯುವುದು ಹಳ್ಳ 
ಮಾಸದ ನೆನಪುಗಳು 
ಮತ್ತೆ ಮತ್ತೆ ನೆನಪಿಸಲು
 ಭರವಸೆಯ ಬದುಕಿಗೆ 
ಮುನ್ನುಡಿ ನಮ್ಮದೇ 
ಆತ್ಮವಿಶ್ವಾಸದೊಂದಿಗೆ  - Made using Quotes Creator App, Post Maker App
V
Vagish Aradhya
Quote by Vagish Aradhya - ಕೇಳುವಷ್ಟು ತಾಳ್ಮೆ ಇದೆ ನಿಜ.. 
ಆದ್ರೆ ಮಿತಿಮೀರಿದ 
ನಡವಳಿಕೆಯನ್ನಲ್ಲ. 
ಮನಸ್ಸಿದೆ ನಿಜ ಆದರೆ 
ಮಾನಸಿಕ ಆಗುವಷ್ಟು ಅಲ್ಲ. 
ಕತ್ತಲೆಗೂ ಗೊತ್ತು ಮರುದಿನ 
 ಬೆಳಕಾಗುವುದೆಂದು.
 - Made using Quotes Creator App, Post Maker App
V
Vagish Aradhya
Quote by Vagish Aradhya - ವಿಚಿತ್ರ ವಿಪರ್ಯಾಸ 
ಬಯಸಿದ್ದು ಪಲ್ಟಿ 
ಹೊಡೆಯಿತು 
ಅಂದುಕೊಂಡದ್ದು 
ಮಾಯವಾಯಿತು . 
ಕಾಣದೊಂದು ಜಾಗ 
ಹುಡುಕುವ ಯತ್ನ 
ಊಹಿಸಿಲ್ಲ ಹೀಗೆ 
ಆಗುವುದೆಂದು
ಉಸಿರು ನಿಂತಿಲ್ಲ ಆದ್ರೂ
 ಜೀವ ಬಯಸುತ್ತಿದೆ ಜೀವನ - Made using Quotes Creator App, Post Maker App
V
Vagish Aradhya
Quote by Vagish Aradhya - ಪ್ರತಿಕ್ಷಣವೂ 
ನಿನ್ನದೇ 
ನೆನಪು 
ಪ್ರತಿದಿನವೂ 
ನಿನ್ನದೇ 
ಕನವರಿಕೆ 
ನಿದ್ದೆ ಬಾರದ 
ಕಂಗಳಿಗೆ 
ನಿನ್ನನ್ನೇ 
ನೋಡುವ 
ತವಕ 
ಇತಿ ಇಲ್ಲ 
ಮಿತಿ ಇಲ್ಲ 
ನೀನಿಲ್ಲದೆ 
ನಾನಿಲ್ಲ.
 - Made using Quotes Creator App, Post Maker App
V
Vagish Aradhya
Quote by Vagish Aradhya - ಆಡುವ ಮಾತುಗಳು 
ಬಾಯಿಯಿಂದ ಬರದಿರಲಿ
ನೋಡುವ ನೋಟವು 
ಪ್ರತ್ಯಕ್ಷವಾಗಿರಲಿ 
ಪ್ರಾಮಾಣಿಸಿ ನೋಡು 
ಕಂಡದ್ದೆಲ್ಲವೂ ಸತ್ಯವಲ್ಲ 
ಕಾಣದ್ದೆಲ್ಲವೂ ಸುಳ್ಳಲ್ಲ.. 
ನಂಬಿಕೆಯೊಂದು 
ಮಾಯವಾದರೆ ಸತ್ಯಕ್ಕೂ 
ತೊಡಕಾಗಬಹುದು.. - Made using Quotes Creator App, Post Maker App
V
Vagish Aradhya
Quote by Vagish Aradhya - ಪ್ರಶ್ನೆಗಳ 
ಸುರಿಮಳೆಯನ್ನಿಟ್ಟೆ 
ಉತ್ತರ ಕೇಳುವ 
ತಾಳ್ಮೆಯ ನೀ ಬಿಟ್ಟೆ 
ಉತ್ತರ ಗೊತ್ತಿದ್ದರೂ 
ಹೇಳುವ ಸಮಯ 
ನನ್ನನಿಂದ ಕಸಿದುಕೊಂಡೆ. 
ಕೇಳುವ ತಾಳ್ಮೆಯ 
ನೀ ಕಳೆದುಕೊಂಡೆ. 
ಹೆಚ್ಚು ಹೇಳಲು 
ಮನಸ್ಸಿಲ್ಲ .


 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

V
Vagish Aradhya
Quote by Vagish Aradhya - ಬರವಣಿಗೆಯ 
ಪ್ರತಿರೂಪ ನೀ 
ನನ್ನಂತೆ ಗೀಚುವ 
ಲೇಖನಿಯ
 ಕೈಯೊಂದು 
ಕಣ್ಣೆದುರು 
ಕಾಣುತ್ತಿದೆ 
ಗೀಚಿದ ಪದಗಳೆಲ್ಲ 
ಹಾಡಾಗಿ 
ಹೊರಹೊಮ್ಮಲೀ .. 
ಪುಟಗಳ ತಿರುವಲೂ 
ಸಾಲುಗಳ ಗುಚ್ಚ ... - Made using Quotes Creator App, Post Maker App
V
Vagish Aradhya
Quote by Vagish Aradhya - ಮನ್ನಿಸಿಬಿಡು ಸುಖ ಸುಮ್ಮನೆ
ಕಾಡಿಸಬೇಡ ನೀ ಕಾಣುವೆ ಕೋಪದಲ್ಲೂ
 ಸುಂದರ.ಅದೇಕೋ ನಾ ಕಾಣೆ 
ನಿನ್ನದೇ ಮಾತುಗಳು ಗುನುಗುತಿದೆ ನನ್ನಲಿ
ಸಮಾಧಾನಿಸಲು ಬಾರದು ಎನಗೆ ಗೆಳತಿ.  - Made using Quotes Creator App, Post Maker App
V
Vagish Aradhya
Quote by Vagish Aradhya - ಕಾಣದಿರುವ ನಾಳೆಗೆ 
ಕಾದು ಕುಳಿತ 
ಮೂರ್ಖ ನಾನು 
ಗತಿಸಿದ ಭೂತ ಕಾಲಕ್ಕೆ 
ಹೇಳಲು ಏನು ಉಳಿದಿಲ್ಲ 
ಸದ್ಯ ವರ್ತಮಾನದಲ್ಲಿ ಇದ್ದೇನೆ 
ಅದೆಂತ ನಿರ್ಧಾರವೇ ಆಗಿರಲಿ 
ಈಗಲೇ ಪ್ರಸ್ತುತಪಡಿಸು 
ಇಂತಿ ನಿನ್ನ ವರ್ತಮಾನ.. - Made using Quotes Creator App, Post Maker App
V
Vagish Aradhya
Quote by Vagish Aradhya - ಮುಂಜಾನೆಯ 
ಚಿಲಿಪಿಲಿ ನಾದಕೆ 
ಮನಸ್ಸು ಹಗುರಾಗಿದೆ 
ನಿನ್ನಯ ಸಂದೇಶವ ಕಂಡು 
ಮುಗುಳುನಗೆ ಬೀರಿದೆ
ನಗುವ ಬೀರಿ ಬಿಡು
 ಪ್ರವಹಿಸುವ ನದಿಯಂತೆ .
ನಿನ್ನದೇ ಗುಂಗಲ್ಲಿ
 ಬೆಳಕು ಹರಿಯಿತು 
ಈ ಮುಂಜಾನೆಯ ತಂಪಲ್ಲಿ 
ನಿನ್ನ ಸಂದೇಶವ ಓದುತ್ತಾ 
ಹಾಯಾಗಿದೆ ಈ ಮನಸ್ಸು
 ನಿನ್ನಿಂದ ಗೆಳತಿ - Made using Quotes Creator App, Post Maker App
V
Vagish Aradhya
Quote by Vagish Aradhya - ನಿನಗಾಗಿ ಆಡಿದ 
ಮಾತುಗಳೆಲ್ಲ 
ಕವನಗಳಾಗಿದೆ 
ಸಾಲುಗಳಿಗೂ 
ನೀ  ಹತ್ತಿರವಾದೆ
ಪುಟಗಟ್ಟಲೆ 
ಗೀಚಿದಷ್ಟು 
ಪದಪುಂಜಗಳು 
ತಾ ಮುಂದು 
ನಾ ಮುಂದು 
ಎನ್ನುತ್ತಿದೆ 
ನಿನ್ನ ವರ್ಣಿಸಲು - Made using Quotes Creator App, Post Maker App
V
Vagish Aradhya
Quote by Vagish Aradhya - ಅಮೂಲ್ಯವಾದ 
ಉಡುಗೊರೆ ನೀ ನನಗೆ 
ಆಶ್ಚರ್ಯವಲ್ಲ ಐಶ್ವರ್ಯ 
ಬಯಸದೆ ಬಂದು 
ಕದ ತಟ್ಟಿದವಳು ನೀ 
ಬಯಸಿ ನಾ 
ಏನು ಕೇಳಲಾರೆ 
ಮೋಡಿಯು ಅಲ್ಲಾ 
ಮಾಟವೂ ಅಲ್ಲ 
ಕಟು ಸತ್ಯದ ವಾಸ್ತವ - Made using Quotes Creator App, Post Maker App
V
Vagish Aradhya
Quote by Vagish Aradhya - ನೋಡುವ ಕಂಗಳಿಗಿನ್ನ 
ಮಾತನಾಡುವ ಮನಸ್ಸು ಮುಖ್ಯ 
ಬಯಸಿದ ಕಂಗಳ ಕೂಡ 
ಮಾತಿಗೆ ಮರುಳಾಗಿ 
ಹೃದಯಕ್ಕೆ ಸಂದೇಶ ಕಳುಸಿದೆ 
ಮಾತನಾಡು ನೀ ಮನಸ್ಸಿನಿಂದಲೇ
 ಆ ನಿನ್ನ ಮನಸಿಗಾಗಿ.. - Made using Quotes Creator App, Post Maker App
V
Vagish Aradhya
Quote by Vagish Aradhya - ನೋಡುವ ಕಂಗಳಿಗಿನ್ನ 
ಮಾತನಾಡುವ ಮನಸ್ಸು ಮುಖ್ಯ 
ಬಯಸಿದ ಕಂಗಳ ಕೂಡ 
ಮಾತಿಗೆ ಮರುಳಾಗಿ 
ಹೃದಯಕ್ಕೆ ಸಂದೇಶ ಕಳುಸಿದೆ 
ಮಾತನಾಡು ನೀ ಮನಸ್ಸಿನಿಂದಲೇ
 ಆ ನಿನ್ನ ಮನಸಿಗಾಗಿ.. - Made using Quotes Creator App, Post Maker App
V
Vagish Aradhya
Quote by Vagish Aradhya - ನೀ ಯಾವ ಶಕ್ತಿಯೋ 
ನಾನರಿಯೇ.. 
ನನ್ನ ಮೇಲಿನ ಕಾಳಜಿಗೆ 
ಮಾತೆ ಬರದು ಎನಗೆ 
ನೀ ಹತ್ತಿರವಾದೇ 
ದೂರ ಸರಿಯಲು ನಾ ಒಲ್ಲೆ 
ಮೂಕಮಾತಿಗೆ 
ತೊದಲುತಿದೆ ಹೃದಯ 
ನಾ ಏನು ಹೇಳಲಾರೆ..  - Made using Quotes Creator App, Post Maker App
V
Vagish Aradhya
Quote by Vagish Aradhya - ಬಿಡುವಲ್ಲೂ ನೀ
 ನೆನಪಿಗೆ ಬಂದೆ 
ಹಗಲಲ್ಲೂ ನೀ
 ಕನಸಲಿ ಬಂದೆ 
ಏನೋ ಹೇಳುವ
 ತವಕ ನಿನ್ನದು 
ಕೇಳುವ ಬಯಕೆ
 ನನ್ನದು 
ನನಸು ಮಾಡು 
ನೀ ಕಣ್ತೆರೆದು 
ಮತ್ತೆ ಮತ್ತೆ ಕನಸಲ್ಲಿ 
ಬರುವೆ ನಾನೆಂದು.  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.