Creator Profile

Siddarama Honnkal

Sharing quote designs and daily inspiration.

51 Posts
2 Followers
2 Following
S
Siddarama Honnkal
Quote by Siddarama Honnkal - ನಮ್ಮ ದೇಶದ ಯಾವುದೇ ರಾಜ್ಯದ, ಯಾವುದೇ ಧರ್ಮದ ಖಜಾನೆಗಳಲ್ಲಿ ನೂರಾರು ಟನ್ ಗಟ್ಟಲೇ ಬಂಗಾರ,ಬೆಳ್ಳಿ,ಮುತ್ತುರತ್ನಗಳು ನೂರಾರು ವರ್ಷಗಳಿಂದ ಯಾವುದಕ್ಕೂ ಉಪಯೋಗ ಇಲ್ಲದೆ ನಿರುಪಯುಕ್ತ ಆಗಿ ಕೊಳೆಯುತ್ತಿದ್ದರೆ ಅದನ್ನೆಲ್ಲ ಸರ್ಕಾರ ವಶಪಡಿಸಿಕೊಂಡು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಮಾಡಿ ಬಂದ ಹಣವನ್ನು ಅದೇ ಟ್ರಸ್ಟ್ ಗಳಿಗೆ ನೀಡಲಿ. ಆಗಲಾದರೂ ಬಡವರು, ಮಧ್ಯಮ ವರ್ಗದವರಿಗೆ ಈ ಚಿನ್ನದ‌ ರೇಟುಗಳು‌ ಕಡಿಮೆ‌ ಆಗಿ ಅವರು‌ ಸಹ ಬಂಗಾರ ಧರಿಸುವಂತಾದೀತು.ಆಗಲಿ‌ ಎಂಬ ಆಶಯ.ಕೇವಲ ಧಾರ್ಮಿಕ ದೃಷ್ಟಿಯಿಂದ ಇದು ನೋಡಬೇಡಿ. - Made using Quotes Creator App, Post Maker App
S
Siddarama Honnkal
Quote by Siddarama Honnkal - ಸಹಜ ನುಡಿ
ನೂರಾರು ಕೋಟಿ ಜನಸಂಖ್ಯೆ ಇರೋ ಈ ಭೂಮಿಯ ಮೇಲೆ ಯಾರ ಕಣ್ಣೀರು ಯಾರು ಸುಮ್ಮನೆ ಒರೆಸಲು ಹೋಗುವುದಿಲ್ಲ.ಅದು ಪ್ರಾಕ್ಟಿಕಲಿ ಸಾಧ್ಯವೂ ಇಲ್ಲ.ತಮಗೆ ಆಪ್ತರಾದವರು,ಇಷ್ಟ ಆದವರು, ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಇರೋ ಪ್ರೀತಿ ಪಾತ್ರರಿಗೆ, ಅರ್ಹರೆನಿಸಿದವರ ಕಣ್ಣೀರು ಒರೆಸಲು ಮುಂದಾಗೋದು ಸಹಜ.ಅಂತಹವರ ಬಗ್ಗೆ ಕೃತಜ್ಞತೆ ಹೊಂದಿರಬೇಕೇ ಹೊರತು ಅದನ್ನು ಬೇರೆ ದೃಷ್ಟಿಯಿಂದ 
ನೋಡೋದೇ ತಪ್ಪು.
ಈ ಕೊಡು ಕೊಳ್ಳುವಿಕೆ ಜಗದ ಸಹಜ ನಿಯಮ. ಅದಿಲ್ಲದೇ ಈ ಜಗದಲ್ಲಿ ಬೇರೆನಿಲ್ಲ.ಅವರಲ್ಲಿ ಏನಿದೆಯೋ ಅವರು ಕೊಡುವರು.ನಿಮ್ಮಲ್ಲಿ ಅವರಿಗೆ ಕೊಡುವಂತಹದು ಏನಿದೆಯೋ ಅದು ಉಪಕೃತರು ಕೊಡೋದು ತಪ್ಪೆನಲ್ಲ.ಒಟ್ಟಾರೆ ಋಣ ತೀರಿಸಿದ ಸಮಾಧಾನ ಇರಬೇಕು. ಇವೆಲ್ಲವೂ ಪರಸ್ಪರ ಪ್ರೀತಿ ವಿಶ್ವಾಸ ಭಾವನಾತ್ಮಕ ಸಂಬಂಧ ಇದ್ದಲ್ಲಿಯೇ  ಆಗುತ್ತವೆ.ಹೊರಗಿನವರ ಜೊತೆಗಿನದು ಮಾತ್ರ ವ್ಯಾಪಾರ ಆಗುತ್ತದೆ
@-ಅನಾಮಿಕ  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ
ಕೆಲವರು ಮೂಲಭೂತವಾಗಿ ಅಪ್ರಬುದ್ಧರು, ವಿವೇಕ ಹೀನರು, ಅವಿವೇಕಿಗಳು ಆಗಿರುತ್ತಾರೆ. ಆದರೆ ಅಂತಹವರು ತಮ್ಮಷ್ಟಕ್ಕೆ ತಾವು ಬಹಳ ಬುದ್ಧಿವಂತರೆಂದುಕೊಂಡು ತಮಗೆ ಸಂಬಂಧವೇ ಇಲ್ಲದ ವಿಷಯದಲ್ಲಿ ಮೂಗು ತೂರಿಸಿ ಏನಾದರೂ ಹೇಳಿ ತಮ್ಮ ಶಾಣ್ಯಾತನ ಪ್ರದರ್ಶನ ಮಾಡಲು ಹವಣಿಸುತ್ತಿರುತ್ತಾರೆ.ಅಂತಹ ಅವಿವೇಕಿಗಳೊಂದಿಗೆ ವಾದಕ್ಕೆ ಬಿದ್ದು ಏನೇನೂ ಹೇಳಲು ಹೋಗಬಾರದು.ಗುಡ್ ಎಂದು ನಕ್ಕು ಮುಂದೆ ಸಾಗಬೇಕು.
ಅವು ಅದೇ ಕೊಚ್ಚೆಯಲ್ಲೆ ಉಚ್ಚೆ ಒಯ್ದುಕೊಂಡು 
ಬಿದ್ದಿರಲು ಬಿಟ್ಟು ಬಿಡಬೇಕು.
@-ಹೊನ್ನಸಿರಿ - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ

ಸ್ಯಾಡಿಸ್ಟ್ ಮನೋಭಾವದಿಂದ ಯಾರದೇ ಕಾಲು ಎಳೆವವರು ಕೊನೆತನಕ ಅಂಥವರ ಕಾಲ ಕೆಳಗೆ ಉಳಿವರು
ಪರಸ್ಪರ ಸೌಹಾರ್ದತೆಯಲಿ ಪ್ರೀತಿ ಗೌರವದಿಂದ ಸಹಕಾರ-ಮಾರ್ಗದರ್ಶನ ಪಡೆದವರು ಜೊತೆ ಜೊತೆಗೆ ಸಾಗುವರು. 
ಇದು ಸೃಷ್ಟಿ ನಿಯಮವಷ್ಟೇ ಅಲ್ಲ; ಪ್ರಕೃತಿ ನೀಡುವ ಒಂದು ಅಪೂರ್ವ ನ್ಯಾಯವಾಗಿದೆ.

ಸಿದ್ಧರಾಮ ಹೊನ್ಕಲ್ - Made using Quotes Creator App, Post Maker App
S
Siddarama Honnkal
Quote by Siddarama Honnkal - ಪರೀಕ್ಷೆಯ ಫಲಿತಾಂಶಕ್ಕೆ ನಿರಾಶೆ ಆಗಬೇಡಿ

ನಾನು SSLC ಯಲ್ಲಿ ಬರೀ 49 % ಪರಸೆಂಟ್, ಒಂದೇ ಸಲಕ್ಕೆ ಪಾಸಾಗಿದ್ದಾನೆ ಅಂತ ಅನೇಕರು ನಮ್ಮ ಊರಲ್ಲಿ ಹೆಮ್ಮೆ ಪಟ್ಟಿದ್ದರು. ಪಿಯೂ ದ್ವಿತೀಯದಲ್ಲಿ ಎಲ್ಲದರಲ್ಲೂ ಫಸ್ಟಕ್ಲಾಸ್ ಮಾರ್ಕ್ಸ. ಇಂಗ್ಲೀಷದಲ್ಲಿ ಫೇಲು.ಒಂದು ವರ್ಷ ನೋವಲಿ ಇದ್ದು ಓದಿದ ಸಾಹಿತ್ಯ ಕೈ ಹಿಡಿದು ಕವಿಯಾಗಿಸಿತು. ಫೇಲಾಗಿರದಿದ್ದರೆ ಲೇಖಕ ಆಗಿ ಇಂದು ನಿಮ್ಮ ಮುಂದೆ ಇರುತ್ತಿರಲಿಲ್ಲ.
ಮುಂದೆ ಓದು ಕೈ ಹಿಡಿಯಿತು.ನಾಲ್ಕು ಉದ್ಯೋಗ ಬದಲಾಯಿಸಿದ್ದೇನೆ.ಕೊನೆಯಲ್ಲಿ ಸಿನಿಯರ್ ಕ್ಲಾಸ್ ಒನ್ ಅಧಿಕಾರಿ ಸ್ಥಾನ ತಲುಪಿದ್ದು ನಿಮಗೆ ಸ್ಪೂರ್ತಿ ಆಗಲಿ.ಈಗ ಬದುಕಿನಲ್ಲಿ ಭಾಗವಹಿಸಿದ ಎಲ್ಲ ರಂಗದಲ್ಲೂ 99% ಸಕ್ಸಸ್ ಇದ್ದೇನೆ. ಫೇಲಾದೇ ಅಂತ ನಿರಾಶೆಗೆ ಬಲಿ ಆಗಬೇಡಿ ಅಂತ ನಮ್ಮಂತಹವರಿಗಾಗಿ ಈ ಮಾತು ಹೇಳಿದ್ದೇನೆ.
ನಾ ಸೋತವರ ಪರ. ಗೆದ್ದವರಿಗೆ ಅಭಿನಂದಿಸಲು ನೂರಾರು ಜನ. ಪಾಲಕರು ತಮ್ಮ ಮಕ್ಕಳಿಗೆ ಹಿಯ್ಯಾಳಿಸಬೇಡಿ.ದೈರ್ಯ ಹೇಳಲು ಕೋರುವೆ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ
ಜೀವನದಲ್ಲಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ತಮ್ಮ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮೇಲೆ ಬರಬೇಕು ಅಂತ ಬಯಸುತ್ತಾ ಇರುತ್ತಾರೆ. ಆದರೆ ಕೆಲವರಿಗೆ ಲಕ್ ಸಾಥ್ ಕೊಡುವುದಿಲ್ಲ. ಇನ್ನೂ ಕೆಲವರಿಗೆ ಅವರು ಮಾಡುವ ಪ್ರಯತ್ನ ಸಾಕಾಗುವುದಿಲ್ಲ.ಇನ್ನೂ ಕೆಲವರ ಪ್ರಯತ್ನ ಸರಿ ದಾರಿಯಲ್ಲಿ ಇರುವುದಿಲ್ಲ. ಹಾಗಾಗಿ ಅವರು ಯಶಸ್ವಿಯಾಗುವುದಿಲ್ಲ.ಹಾಗಂತ ಅವರ ಶ್ರಮ ವ್ಯರ್ಥ ಇರುವುದಿಲ್ಲ.ಅವರು ಪ್ರತಿಭಾ‌ಹೀನರು ಎಂದು ಅರ್ಥವಲ್ಲ.ನಮ್ಮ ಗುರಿ ದೊಡ್ಡದು ಇರುತ್ತದೆ.ಆದರೆ ಸಣ್ಣ ಅವಕಾಶ ಸಿಗಬಹುದು. ಸಿಗದೇನು ಹೋಗಬಹುದು. ಅದು ಆಗಲಿಲ್ಲ ಅಂತ ನಿರಾಶೆ ಆಗಿ ಮೇಲೆ ಬಂದವರನ್ನು ಕಂಡು ಹೊಟ್ಟೆಕಿಚ್ಚು ಪಡಬಾರದು.ಆ ನಿಟ್ಟಿನಲ್ಲಿ ಬೇರೆಯದಕ್ಕೆ ಮರಳಿ ಯತ್ನವನ್ನು ಮಾಡಬೇಕು. ಅದಕ್ಕೆ‌ ಬೇಕಾದ ವ್ಯಕ್ತಿತ್ವವನ್ನು ಮೊದಲು  ರೂಪಿಸಿಕೊಳ್ಳಬೇಕು.ಪ್ರಪಂಚ ವಿಶಾಲವಾಗಿದೆ. ಜಗತ್ತು ಕಿರಿದಾಗಿದೆ.ಸಾಧನೆಗೆ ಹಲವು ದಾರಿಗಳಿವೆ. ಒಂದು ಬಾಗಿಲು  ಮುಚ್ಚಿದರೆ ಇನ್ನೊಂದು ತೆರೆಯಲಿದೆ ಎಂಬ ನಂಬಿಕೆ ಇರಬೇಕು.

ಹೊನ್ನಸಿರಿ

 - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ 
ಬಹುಜನ ನಿಮ್ಮನ್ನು ಪ್ರೀತಿ ಅಭಿಮಾನದಿಂದ‌ ಕಾಣುತ್ತಾರೆ. ಗೌರವಿಸುತ್ತಾರೆಂದರೆ ಓಕೆ. ಇನ್ನೂ ಕೆಲವರಾದರೂ‌ ನಿಮ್ಮನ್ನು ನಿಷ್ಕಾರಣವಾಗಿ ದ್ವೇಷಿಸುತ್ತಾರೆ.. ಅಂದರೆ ಅವರ ಬಗ್ಗೆ ಬೇಜಾರಾಗದೇ ಅದಕ್ಕೆ ಕಾರಣ ಏನಿರಬಹುದು ಎಂದು ತಿಳಿಯಲು‌ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಮ್ಮ ಕೆಲವು‌ ನಡೆಗಳು ಅವರಿಗೆ ಇಷ್ಟವಾಗದೇ ಹೋಗಿರಬಹುದು.ನಮ್ಮಿಂದ ಅವರಿಗೆ ಪ್ರತಕ್ಷವಾಗಿ, ಪರೋಕ್ಷವಾಗಿ ನಷ್ಟ ಆಗಿರಬಹುದು. ಆ ಕಾರಣ ಅವರ ವರ್ತನೆ ಹಾಗಿದ್ದರೆ ನಮ್ಮ ವ್ಯಕ್ತಿತ್ವ ನಾವು ಖಂಡಿತಾ ಬದಲಾಯಿಸಿಕೋಬೇಕು. 

ಕೆಲವರು ಅವರ ಹುಟ್ಟಿನ ಜೆನೆಟಿಕ್ ಕಾರಣದಿಂದ ಹಾಗೂ ಅವರ ಮೇಲಾದ ಸಂಸ್ಕಾರದಿಂದ ಬರೀ ನೆಗೆಟಿವ್ ಥಿಂಕಿಂಗ್ ಬೆಳೆಸಿಕೊಂಡು ತಾನಷ್ಠೇ ಶ್ರೇಷ್ಠ. ಉಳಿದವರು ಕನಿಷ್ಠ ಎಂಬ ಮನೋಭಾವ‌ ಹುಟ್ಟಿನಿಂದ ಬೆಳೆಸಿಕೊಂಡಿರುತ್ತಾರೆ.ಅಂಥವರಿಗೆ ಆ ದೇವರು ಸಹ ಸರಿ ಮಾಡಲಾಗದು.ಅಂತಹ ಕ್ಷುದ್ರ ಬುದ್ಧಿಯವರಿಂದ ದೂರ ಇದ್ದು ಬಿಡಬೇಕು. ಅಂಥವರ ಸ್ನೇಹ ವೈರ ಎರಡು ಅಪಾಯಕಾರಿ
ಹೊನ್ನಸಿರಿ - Made using Quotes Creator App, Post Maker App
S
Siddarama Honnkal
Quote by Siddarama Honnkal -  ಹೊನ್ನುಡಿ
ಹಲವರು ತಮ್ಮಷ್ಟಕ್ಕೆ ತಾವಿದ್ದು ತಮ್ಮ ತಮ್ಮ ಕ್ಷೇತ್ರದಲ್ಲಿ ತಮ್ಮ ಪಾಡಿಗೆ ತಾವು ಬೆಳೆದರೂ ಸಹ ಕೆಲವರಿಗೆ ಅಂಥವರನ್ನು ಕಂಡರೆ ಸಹಿಸಲು ಆಗದು. ಅವರಿಂದ ತಮಗಾವ ನಷ್ಟವೂ ಆಗಿರುವುದಿಲ್ಲ. ಆದರೆ ಒಂದಷ್ಟು ಲಾಭ, ಸಹಾಯ, ಸಹಕಾರವೇ ಆಗಿರುತ್ತದೆ.ಆದರೂ ಅಂಥವರ ಬಗ್ಗೆ ಸಣ್ಣತನದ ಮಾತಾಡೋದು,ಅಥವಾ ಬೆನ್ನಹಿಂದೆ ಕಾಲೆಳೆಯುವ ಕುತಂತ್ರ ಜಾರಿ ಇಟ್ಟಿರುತ್ತಾರೆ.ಇಂಥವರದು ಅದೆಂತಹ ಕೆಟ್ಟ ಹೇಸಿ ಮನಸ್ಥಿತಿ ಇರಬಹುದು. ಅಂಥವರೆಂದು ಉದ್ಧಾರವಾಗರು. ಕರುಬಿ ಕರುಬಿಯೇ ಒಂದು ದಿನ ಹಾಳಾಗಿ ಹೋಗುವರು.ಇಂಥವೆಲ್ಲ ಅನಾರೋಗ್ಯಕಾರಿ ಮನಸುಗಳು.ಇಂಥವರು ನಾಡಿನ ಯಾವ ಮೂಲೆಯಲ್ಲಿದ್ದರು ಆಂತರ್ಯದಿ ಗುರುತಿಸಿಕೊಂಡು ಅಂತರ ಕಾಯ್ದುಕೊಳ್ಳಬೇಕು. ದೂರ ಇರಬೇಕು.
ಹೊನ್ನಸಿರಿ
 - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ಕಲ್ ರ ಹೊನ್ನುಡಿ
ಕೆಲವು ನಿಮ್ಮ ಆತ್ಮೀಯರು ನಿಮ್ಮ ಮುಂದುಗಡೆ ನಿಮಗೆ ತುಂಬಾ ಪ್ಲೀಜ್ ಆಗುವಂತೆ, ವಿನಯಪೂರಿತವಾಗಿ ಹೊಗಳಿ ಮಾತನಾಡಿ ನಿಮ್ಮಿಂದ ತಮಗಾಗಬಹುದಾದ ಎಲ್ಲಾ ರೀತಿಯ ಸಹಾಯ ಸಹಕಾರ ಪಡಿತಾ ಇರ್ತಾರೆ. ಇನ್ನೂ ಕೆಲವರಂತೂ ತಮಗೆ ಹಸಿವಾದಾಗ ನಿಮ್ಮನ್ನೇ ಹುಡುಕಿಬಂದು ದಿನಾಲೂ ನಿಮ್ಮದೇ ದುಡ್ಡಿನಲ್ಲಿ  ಉಂಡು ತಿಂದು ಹೋಗುತ್ತಿರುತ್ತಾರೆ.ಆದರೆ ಅಂಥವರು ಅದೇನು ಮಾನಸಿಕ ಕಾರಣವೋ ಅರಿಯೆವು, ಬೇರೆಯವರ ಮುಂದೆ ಮಾತನಾಡುವಾಗ ನಿಮ್ಮ ಬಗ್ಗೆ ಹಗುರವಾಗಿ, ಕೆಟ್ಟದಾಗಿ ಮಾತನಾಡಿ ಇತರರು ನಿಮ್ಮ ಬಗ್ಗೆ ಗೌರವದ ಮಾತನಾಡಿದಾಗ ಅವರ ಮನಸು ಕೆಡಿಸಲು ಯತ್ನಿಸಿ ಆದಷ್ಟು ನಿಮ್ಮಿಂದ ದೂರ ಇರಲು ಪ್ರೇರೆಪಿಸುತ್ತಿರುತ್ತಾರೆ.ಇಂತಹದಕ್ಕೆ *ರಿವರ್ಸ್ ಸ್ವಿಂಗ್ ಥಿಯರಿ* ಅಂತಾರಂತೆ. ಅಂದರೆ ತಾವು ಉಪಕಾರ ಪಡೆದವರಿಗೇನೆ ಹೆಚ್ಚು ಅಪಕಾರ ಮಾಡೋದು. 

ಇಂತಹ ಜನರು ವೈರಿಗಳಿಗಿಂತ ಹೆಚ್ಚು ಅಪಾಯಕಾರಿ.ವೈರಿ ಎದುರು ಇರುತ್ತಾನೆ. ಅವರ ಬಗ್ಗೆ ಹುಷಾರ್ ಇರಬಹುದು.ಆದರೆ ಇಂಥವರು ಬೇರೆಯವರು ಅವರಿಗೆ ಗೌರವಿಸಿದರೆ, ಅವರಿಗೆ ಹತ್ತಿರವಾದರೆ ನಿಮ್ಮಿಂದ ತಮಗಾಗುವ ಲಾಭ, ಪುಕ್ಕಟೆ ಊಟ,ಇತರೆ ಅವಕಾಶಗಳು ತಪ್ಪುತ್ತವೆ ಎಂಬ ಕ್ಷುಲ್ಲಕ ಮನಸ್ಥಿತಿ ಸಹ ಕಾರಣ ಇರಬಹುದು ಅಥವಾ ತೀರಾ ಹೊಟ್ಟೆಕಿಚ್ಚಿನ, ಅಥವಾ ಕೀಳು ಮನೋಭಾವವು ಕಾರಣ ಇರಬಹುದು. ಇಂಥವರು ಯಾರೆಂದು ಗುರ್ತಿಸಿ ದೂರ ಇರೋದು ಕ್ಷೇಮಕರ.ಅಥವಾ ಅವರಿಗೆ ಬೇರೆಯವರ ಮುಂದೆ ಹೀಗೇಕೆ ಮಾತನಾಡುವೀರಿ ಎಂದು ಕೇಳಿ ನೀರಿಳಿಸಿ ದೂರ ಇಟ್ಟು ಮುಂದೆ ಸಾಗಬೇಕು.

 - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ

ನಮ್ಮ ಸಹಾಯ ಸಹಕಾರ ನೆರವು ಪ್ರೀತಿ ಪ್ರೇಮ ವಾತ್ಸಲ್ಯ ಏಕಮುಖಿಯಾಗಬಾರದು.ಹಾಗಾದಾಗ ಅಲ್ಲಿ ಪರಸ್ಪರ ಬಾಂಧವ್ಯ ಬೆಳೆದು ಸ್ವಾರ್ಥ ನುಸುಳುತ್ತದೆ. ಪ್ರತಿಫಲದ ಆಸೆ ಬಯಸೋದು ಮನುಷ್ಯ ಸಹಜಗುಣ. 
ಅದೇ ಜನಮುಖಿ ಆಗಬೇಕು.ನೊಂದವರೆಲ್ಲರ ನೋವಿಗೆ ಸಾಧ್ಯವಾದರೆ ನಮ್ಮ ಹೃದಯ ಮಿಡಿಯಬೇಕು.ಧ್ವನಿಯಾಗಬೇಕು.ನೊಂದವರ ಕಣ್ಣೀರು ಒರೆಸಿದ ತೃಪ್ತಿ ನಮ್ಮದಾಗಬೇಕು. ಎಲ್ಲರನ್ನೂ ದಡಕ್ಕೆ ತಲುಪಿಸಿದ ದೋಣಿ ಕೊನೆಗೂ ಏಕಾಂಗಿ ಆ ನೀರವ ರಾತ್ರಿಯ ಒಂದು ದಡದಲ್ಲಿ. ನೋವಾಗೋದು ಸಹಜ ಈ ಕೃತಜ್ಞಹೀನ ಜನರಲ್ಲಿ. ಆದರೆ ಅಂತಹ ನೋವಲ್ಲೂ ನಮ್ಮ ಮನಸ್ಥಿತಿ ಅನುಭಾವಿ ನೆಲೆಗೆ ತಲುಪಿ ಸಮಾಧಾನಿಯಾಗಿರಲು ಯತ್ನಿಸಬೇಕು.

ಸಿದ್ಧರಾಮ ಹೊನ್ಕಲ್
 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
Siddarama Honnkal
Quote by Siddarama Honnkal - *ಗಜಲ್*

ಯಾರು ಸುಖಿನೋ ಈ ವ್ಯಾಮೋಹದ ಜಗದಲ್ಲಿ ಕೇಳು ಗೆಳೆಯ
ಎಲ್ಲರಲ್ಲೂ ಒಂದೊಂದು ನೋವಿನ ಕಥೆ ಮನದಲ್ಲಿ ಕೇಳು ಗೆಳೆಯ

ಒಂದಿದ್ದರೆ ಇನ್ನೊಂದರ ಕೊರತೆ ಎಲ್ಲರಿಗೂ ಇಲ್ಲಿ ಸಹಜಾತಿ ಸಹಜ
ಪೂರ್ಣಸುಖಿ ನಾನು ಅನ್ನುವನಿಲ್ಲಿಲ್ಲ ಎಲ್ಲದರಲ್ಲಿ ಕೇಳು ಗೆಳೆಯ

ಒಂದುಕೊಟ್ಟು ಇನ್ನೊಂದು ಕಸಿಯುವವನ ಆಟ ಮಾಟವ ನೋಡು 
ಎಲ್ಲ ಕೊಟ್ಟರೆ ತನ್ನಾಟ ನೋಡುವವರಾರೆಂಬ! ಚಿಂತೆಯಲ್ಲಿ ಕೇಳು ಗೆಳೆಯ

ಆಡಿಸಿ ನೋಡುವವನ ಆಟ ಪಾಠ ಬಲ್ಲವರು ಬಹಳಿಲ್ಲ ಇಲ್ಲಿ
ಕೊಟ್ಟರೂ ಕೊಡದಿದ್ದರೂ ಫರಕೇನಿಲ್ಲ ಅನ್ನುವರುಂಟು ಬದುಕಲ್ಲಿ ಕೇಳು ಗೆಳೆಯ

ಹೊನ್ನಸಿರಿ' ಇದ್ದರೂ ಇಲ್ಲದಿದ್ದರೂ ಈ ಜಗದಾಟ ನಡಿತಾ ಇರ್ತದೆ
ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದು:ಖವಿದೆಯಿಲ್ಲಿ ಕೇಳು ಗೆಳೆಯ

*ಸಿದ್ಧರಾಮ ಹೊನ್ಕಲ್* - Made using Quotes Creator App, Post Maker App
S
Siddarama Honnkal
Quote by Siddarama Honnkal - *ಗಜಲ್*

ಏಕೆ ಬಂದೆವೆಂದು ಅರಿಯದಾಗಿದೆ ಈ ಜಗದಲಿ ಮನುಜ
ಏನು ಮಾಡಲಿದೆ ತಿಳಿಯದಾಗಿದೆ ಈ ಮನದಲಿ ಮನುಜ

ಹುಟ್ಟು ಸಾವಿನ ಈ‌ ಚಕ್ರದಲ್ಲಿ ಜನಿಸಿ ಬಂದಿಹೆವು ಯಾಕೆ
ಕೊನೆ ಏನೆಂದು ಚಿಂತಿಸುವುದಾಗಿದೆ ಈ ಲೋಕದಲಿ ಮನುಜ

ಬಾಲ್ಯ ಯೌವ್ವನ ಮುಪ್ಪುವಿನಲ್ಲಿ ಕರಗುತ್ತಿದೆ ದೇಹ ಹೊತ್ತ ಈ ಜೀವ
ಬಂದ ಕಾರ್ಯ ಕಾರಣವೇನಿರಬಹುದು ಈ ಭೂಮಿಯಲಿ ಮನುಜ

ಪ್ರೀತಿ ಪ್ರೇಮ ಮದುವೆ ಮಕ್ಕಳು ರೋಗ ರುಜಿನಗಳ ಈ ಬದುಕಿನಾಟದಲಿ
ಮುಗಿವುದೆಂದು ಕೊನೆಯಿಲ್ಲದ ಈ ಕಾಲದ ಸಂತೆಯಲಿ ಮನುಜ

ಹೊನ್ನಸಿರಿ' ಈ ಜಂಜಾಟದ ಬದುಕಿಗೆ ಏನರ್ಥ ತಿಳಿಯದಾಗಿರುವೆ
ಬದುಕಿನ ವ್ಯವಹಾರವ ಮುಗಿಸಿಬಿಡು ಬೇಗ ಮಸಣದಲಿ ಮನುಜ

*ಸಿದ್ಧರಾಮ ಹೊನ್ಕಲ್* - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ

ಅದು ಯಾವುದೇ ಕ್ಷೇತ್ರ ಇರಲಿ.ನಾವು ಹಲವರು ಗುರ್ತಿಸುವ ಮಟ್ಟಕ್ಕೆ ಬೆಳೆದಾಗ ಇನ್ನಷ್ಟು ಮತ್ತಷ್ಟು ವಿನಯವಂತರು ಹಾಗೂ ನಮ್ಮನ್ನು ಬಲ್ಲವರನ್ನು ಹೆಚ್ಚು ಪ್ರೀತಿಸುವಂತವರು, ಗೌರವಿಸುವಂತವರು ಆಗಬೇಕು. ಯಾರಿಗೂ ಅಪರಿಚಿತರಂತೆ ವರ್ತಿಸಬಾರದು.ಕೆಲವರು ತಮ್ಮದೇ ಆದ ಕೋಟೆ ಕಟ್ಟಿಕೊಂಡು ಅಲ್ಲಿ ತಾವೇ ಗ್ರೇಟ್ ಎಂದು ಹಾಳಾಗಿ ಹೋದದ್ದು, ತಮ್ಮದೇ ಸ್ವಾರ್ಥದಲ್ಲಿ ಮುಳುಗಿ ಹೋದದ್ದು  ಕಂಡಿದೇನೆ. ಇತಿಹಾಸ ಹಾಗೂ ಕಾಲ ಎಂದು ಅಂತಹವರನ್ನು ಕ್ಷಮಿಸಲಾರದು.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಆಡುವ ಮಾತುಗಳಿಗೆ ಭಾವನಾತ್ಮಕ ಸ್ಪಂದನೆ ಇಲ್ಲದೇ ಹೋದ ಮೇಲೆ ಸುಮ್ಮನೆ ಮಾತಾಡಿ ಏನು‌ ಪ್ರಯೋಜನ.ಮೌನ ಒಳಿತು.
ಸಂಗಾತವೇ ಇಲ್ಲದ ಸಂಬಂಧಕೆ ಯಾವ ಅರ್ಥವಿದೆ.ಏಕಾಂಗಿಯಾಗಿ ದೂರವಿರೋದೇ ಕ್ಷೇಮಕರ.

🌷-ಸಿದ್ಧರಾಮ ಹೊನ್ಕಲ್ - Made using Quotes Creator App, Post Maker App
S
Siddarama Honnkal
Quote by Siddarama Honnkal - ಸಂಕ್ರಮಣ

ಎನ್ನುವುದು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವ ಹಬ್ಬ. ಮೂಲಭೂತವಾಗಿ ಅದು ಏಕಕಾಲಕ್ಕೆ ಪ್ರಕೃತಿಯಲ್ಲಿ ಹಾಗೂ ಈ ಪ್ರಕೃತಿಯಲ್ಲಿರುವ ಮನುಷ್ಯರಾದ ನಮ್ಮೆಲ್ಲರಲ್ಲೂ ಬದಲಾವಣೆ ಬಯಸೋ ಕಾಲ. ಹಿಂದಿನ ಕಷ್ಟ, ನೋವು,ವೈಶ್ಯಮ್ಯ,ಕಹಿ,ಕೆಟ್ಟತನ ಇಂತಹದ್ದೆಲ್ಲಾ ಮರೆತು ಆಗಿನ ಸುಖ ಶಾಂತಿ ನೆಮ್ಮದಿಯ ಅಂಶಗಳನ್ನು ಮುಂದಿನ ಬದುಕಿಗೂ ಅಳವಡಿಸಿಕೊಂಡು ಸಿಹಿ ಹಂಚಿಕೊಂಡು ಇನ್ನಷ್ಟು ಒಳ್ಳೆಯವರಾಗಲು, ಸುತ್ತಲಿನವರಿಗೆ ಒಳಿತನ್ನೆ ಬಯಸುವ ಮೂಲಕ ಈ ಪುಟ್ಟ ಬಾಳಪಯಣಕ್ಕೆ ಅರ್ಥವಂತಿಕೆ ತರುವ ಕಾಲ ಇದು ಸಂಕ್ರಮಣ. ನಾವು ನೀವು ಒಳ್ಳೆಯರಾಗಿರೋಣ.ಅದು ಯಾರೇ ಆಗಿರಲಿ ಜೀವನದಲ್ಲಿ ಕೆಲವು ತಪ್ಪು ಆಗೋದು ಸಹಜ.ಅದು ತಿದ್ದಿಕೊಂಡು ಒಳ್ಳೆಯವರಾಗೋದು ನಮ್ಮ ನಿಮ್ಮ ಕೇಂದ್ರ ಪ್ರಜ್ಞೆಯಾಗಿರಲಿ. ಶುಭಾಶಯಗಳು ನಿಮಗೆ, ನಿಮ್ಮ ಮುಂದಿನ ಜೀವನ ಸಂತಸಮಯವಾಗಿರಲಿ ಎಂದು ಮನಸಾರೆ ಹಾರೈಸುವೆ.

ಡಾ.ಸಿದ್ಧರಾಮ ಹೊನ್ಕಲ್ 
೧೪-೧-೨೦೨೪ - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ 

ಪ್ರತಿಯೊಂದು ನಡೆ ನುಡಿಯಲ್ಲಿ ತಪ್ಪು ಕಾಣುವವರಿಗೆ,ಹುಡುಕುವವರಿಗೆ ಎಂದು ಸತ್ಯ,ಪ್ರಾಮಾಣಿಕತೆಯ ಬೆಲೆ ತಿಳಿಯದು. ಅಂತಹವರೊಂದಿಗೆ ವಾದಕ್ಕಿಳಿಯುವುದು ವ್ಯರ್ಥ.
ಸತ್ಯ ಇಂದಿಲ್ಲ ನಾಳೆ ಅವರಿಗೆ ಮನವರಿಕೆ ಆದರೆ ಸಂತೋಷ.ಇಲ್ಲವಾದರೆ ಅದು ನಮ್ಮ ದುರ್ದೈವ ಅಂತ ನೋವು ದು:ಖ ನುಂಗಿಕೊಂಡು ಸಹಜವಾಗಿ ಬದುಕಿಬಿಡಬೇಕು.ಅನೇಕ ವ್ಯಕ್ತಿಗಳ ಬೆಲೆ ಅವರು ಇಲ್ಲವಾದ ಮೇಲೆ ತಿಳಿತದಂತೆ.ನಾವೇ‌ ಇಲ್ಲವಾದ ಮೇಲೆ ನಮ್ಮ ಬೆಲೆ ಇತರರು ತಿಳಿದರು, ತಿಳಿಯದಿದ್ದರೂ ಸಹ ಏನು ಉಪಯೋಗ ಅಲ್ಲವೆ?
ಬದುಕಿರುವಾಗ ಒಂದು ಒಳ್ಳೆಯ ಮಾತಾಡದವರು,ಅವರು ಇಲ್ಲವಾದ ಮೇಲೆ ಅದೆಷ್ಟು ಕಣ್ಣೀರು ಹರಿಸಿದರು ಯಾರಿಗೆ ಉಪಯೋಗ ಅದು.

ಡಾ.ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ
ಇದು ಸರಿಯೋ ತಪ್ಪೋ ಗೊತ್ತಿಲ್ಲ.ಯಾರಿಗಾದರೂ ನಿಮ್ಮ ಸಹಾಯ ಸಹಕಾರ ಬೇಕಾದರೆ ಅವರಾಗಿ ಬಾಯಿಬಿಟ್ಟು ಕೇಳಿದರೆ ಮಾತ್ರ ನಿಮ್ಮಿಂದಾದ ಸಹಾಯ ಸಹಕಾರ ಮಾರ್ಗದರ್ಶನ ಮಾಡಬೇಕು ಅಂತ ಇತ್ತೀಚಿನ ಅನೇಕ ಘಟನೆಗಳ ನಂತರ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ.ಮುಂಚೆ ಕೆಲವರು ಕೇಳದಿದ್ದರೂ ಅವರಿಗೆ ಸಹಾಯ ಸಹಕಾರ ಮಾರ್ಗದರ್ಶನ ಮಾಡಲು ಹೋಗಿ ಕೈ ಸುಟ್ಟುಕೊಂಡಿರುತ್ತೇವೆ. ಯಾಕೆಂದರೆ ನೀವಾಗಿ ನೀಡಿದ ಆ ಸೇವೆಗೆ ಅವರ ದೃಷ್ಟಿಯಲ್ಲಿ ಯಾವ ಬೆಲೆ, ಕೃತಜ್ಞತೆ ಇರುವುದಿಲ್ಲ. ಅದರ ಮಹತ್ವದ ಅರಿವು ಅವರಿಗಿರುವುದಿಲ್ಲ...  ಎಂದು ಆನುಭವ ಪಾಠ ಕಲಿಸಿದೆ. ಜಗತ್ತು ವಿಶಾಲವಾಗಿದೆ.ಅವರವರ ಪ್ರಪಂಚದಲ್ಲಿ ಅವರ ನೆರವಿಗೆ ಸಾಕಷ್ಟು ಆತ್ಮೀಯರು ಇದ್ದೆ ಇರುತ್ತಾರೆ.ಕಾರಣ ಎಲ್ಲವನ್ನೂ ಮೈ ಮೇಲೆ ತಗಂಡು ಮೂರ್ಖ ಆಗಬಾರದು ಅಲ್ಲವೆ ?

ಡಾ.ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ

ಪ್ರತಿಫಲದ ಆಸೆ ಇಲ್ಲದೆ ಸಹಾಯ ಸಹಕಾರ ಮಾಡಬೇಕು ಅಂತ ಕೆಲವರ ಅನಿಸಿಕೆ. ನಿಜ ಇರಬಹುದು. ಆದರೆ ಇಷ್ಟೆಲ್ಲಾ ಕೊಟ್ಟ ದೇವರಿಗೂ ಪ್ರತಿಪಲದ ಏನೋ ಒಂದು ಆಸೆ ಇರಬಹುದು ಅಂತ ಅನಿಸುತ್ತದೆ. ಕನಿಷ್ಠ ತನಗೆ ತ್ಯಾಂಕ್ಸ ಆದರೂ ಹೇಳಲಿ,ಆ ಮೂಲಕ ತನಗೆ ನೆನೆಯಲಿ ಎಂಬ ಆಸೆ ಆತನಿಗೂ ಇದ್ದಿರಬಹುದು. ದೇವರ ಆ ಮನಸ್ಥಿತಿ ಬಲ್ಲವರಂತೆ ಜನ ಆತನಿಗೆ ಕರ್ಪೂರದಿ ಬೆಳಗಿ ಕಾಯಿ ಹೊಡೆದು ನೈವೆದ್ಯ ಹಿಡಿಯುವುದು ಅನಿಸುತ್ತದೆ.

ಸಿದ್ಧರಾಮ ಹೊನ್ಕಲ್ - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ

ಒಬ್ಬರಿಗೆ ನೀವು ಏನು‌ ಕೊಡುವೀರೋ ಅದು ಮಾತ್ರ ನಿಮಗೆ ಮರಳಿ ಸಿಗುತ್ತದೆ.ಅದು ಪರಸ್ಪರ ಗೌರವ, ಪ್ರೀತಿ, ಅಭಿಮಾನ, ಹೀಗೆ ಏನೆಲ್ಲವೂ ಆಗಿರಬಹುದು. ಕೆಲವರು ಬೇರೆಯವರು ತಮಗೆ ಗೌರವಿಸಲಿ, ಮನ್ನಣೆ ನೀಡಲಿ, ಅಹ್ವಾನಿಸಲಿ ಅಂತ ಒಳಗೊಳಗೆ ಹಂಬಾಲಿಸುತ್ತಿರುತ್ತಾರೆ. ಆದರೆ ತಾವು ಮಾತ್ರ ವ್ಯತಿರಿಕ್ತ ಮನಸ್ಥಿತಿ ಹೊಂದಿರುತ್ತಾರೆ. ಅಂತಹವರಿಗೆ ಅನಿವಾರ್ಯವಾಗಿ ಹಿರಿಯರೆಂದೋ, ಅಥವಾ ಇತರೇ ಸ್ವಾರ್ಥದ ಕಾರಣದಿಂದ, ಅಸಹಾಯಕರು, ಸ್ವಂತಿಕೆ ಇಲ್ಲದ ಕೆಲವರು, ಅಥವಾ ಹೋಗಲಿಬಿಡು ಅವರವರ ಮನಸ್ಥಿತಿ ಅಂತ ತಿಳಿದು ಕೆಲವರು ಗೌರವ ನೀಡಿರುತ್ತಾರೆ. ಆದರೆ ಗೌರವ ಪಡೆಯೋದು ಅದು ತಮ್ಮ ಜನ್ಮಸಿದ್ಧ ಹಕ್ಕು ಅಂತ  ಅಂಥವರು ಮೂರ್ಖತನದಿಂದ ಭಾವಿಸಿರುತ್ತಾರೆ. ಬಾಯಿಯ ಕಪ್ಪೆಯಂತೆ ತಾವು ಕಂಡಂದೆ  ದೊಡ್ಡ ಪ್ರಪಂಚ,ತಮಗೆ ತಿಳಿದದ್ದೇ ಶ್ರೇಷ್ಠ ಎಂದುಕೊಂಡಿರುವ ವ್ಯಕ್ತಿಗಳನ್ನು ಅವರ ಪಾಡಿಗೆ ಅವರಿಗೆ ಬಿಟ್ಟು ನಿಮಗೆ ಸರಿಕಂಡ ದಾರಿಯಲ್ಲಿ ನೀವು ಮುಂದೆ ಸಾಗುತ್ತಲೇ ಇರಬೇಕು.

ಡಾ.ಸಿದ್ಧರಾಮ ಹೊನ್ಕಲ್ - Made using Quotes Creator App, Post Maker App
S
Siddarama Honnkal
Quote by Siddarama Honnkal - 
ಹೊನ್ನಸಿರಿಯ ಹೊನ್ನುಡಿ

ಅದು ಯಾರೇ ಆಗಿರಲಿ ಅವರು ಅಪರಿಚಿತರೋ, ಪರಿಚಿತರೋ ಅಥವಾ ನಿಕಟ‌ವಾದ ಆತ್ಮೀಯರೇ ಆಗಿರಲಿ ಅವರು ನಮಗೆ ತೋರುವ ಗೌರವ, ಪ್ರೀತಿ,ಕಾಳಜಿ, ಅಭಿಮಾನ, ಕನ್ಸರ್ನಗೆ ನಾವು ಯಾವತ್ತೂ ಬೇಸರ ವ್ಯಕ್ತಪಡಿಸಬಾರದು.ಅವರ ಮನ ನೋಯಿಸುವದಾಗಲಿ, ಅವರೇನು ಮಹಾ! ಎಂಬಂತೆ ಯಾವತ್ತೂ ಉಡಾಫೆಯಿಂದ ವರ್ತಿಸಬಾರದು. ಅಂತಹದು ಅವರ ಒಳ್ಳೆಯತನದ ದುರುಪಯೋಗ ಆಗುವುದು.ಈ ಪುರುಸೊತ್ತು ಇಲ್ಲದ ಜಗದಲ್ಲಿ ಕುಟುಂಬದವರಿಗೇನೇ ಸಮಯ ಕೊಡಲಾಗದ ನಾಗಾಲೋಟದ ಬದುಕಲಿ ಯಾರಿಗೆ ಯಾರೂ ಸುಮ್ಮನೇ ಸಮಯ ಮತ್ತು ಗೌರವ ಪ್ರೀತಿ  ನೀಡಲಾರರು.ಇದು ನಾವು ನೀವೆಲ್ಲರೂ ಅರಿತಿರಬೇಕು.

ಡಾ.ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
Siddarama Honnkal
Quote by Siddarama Honnkal -  ಹೊನ್ನುಡಿ

ಕೆಲವರಿಗೆ ಕೊಟ್ಟು ಕೆಟ್ಟಾಗುವದಕಿಂತ
ಕೊಡದೇ ಕೆಟ್ಟಾಗುವುದು ಅದೆಷ್ಟೋ ಮೇಲು.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - 
ಹೊನ್ನಸಿರಿಯ ಹೊನ್ನುಡಿ

ಜೀವನದಲ್ಲಿ ನೀವು ಯಾರಿಗೂ ಅವರಾಗಿ ಕೇಳದ ಹೊರತು ಯಾವುದೇ ರೀತಿಯ ಸಹಾಯ,ಸಹಕಾರ, ಮಾರ್ಗದರ್ಶನ ಖಂಡಿತಾ ಮಾಡಬಾರದು. ಯಾಕೆಂದರೆ ಅದಕ್ಕೆ ಅವರ ದೃಷ್ಟಿಯಲ್ಲಿ ಯಾವುದೇ ಗೌರವ ಮತ್ತು ಅಂಥವರ ಬಗ್ಗೆ ಒಂದು ಕೃತಜ್ಞತೆ ಸಹ ಖಂಡಿತಾ ಇರುವುದಿಲ್ಲ. ಯಾಕೆಂದರೆ ಅದರ ಬೆಲೆಯ ಅರಿವು ಅವರಿಗಿರುವುದಿಲ್ಲ. ಅವರು ಕಷ್ಟದಲ್ಲಿ ಇರಬಹುದೆಂದು ತಿಳಿದು ನೀವು ಸಹಾಯ ಸಹಕಾರ ಮಾರ್ಗದರ್ಶನ ಅವರು ಕೇಳೋ ಮುಂಚೆ ಮಾಡಲು ಮುಂದಾಗಿರುತ್ತೀರಿ. ಅದು ನಿಮ್ಮ ದೊಡ್ಡತನ. ಆದರೆ ಅದನ್ನು ಪಡೆಯುವವರಿಗೆ ನಿಮ್ಮ ಜೊತೆ ಕನಿಷ್ಠ ಸೌಜನ್ಯದ ನಡತೆ ಹಾಗೂ ಕೃತಜ್ಞತೆ, ಪಡೆದ ಸಹಾಯ ಸಹಕಾರದ ಋಣ ತೀರಿಸಬೇಕು ಎಂಬ ಮನೋಭಾವವೇ ಇಲ್ಲದೇ ಹೋಗುವುದು ನೋಡಿದರೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ನಿಮ್ಮ ಸಹಾಯ ಸಹಕಾರ ವ್ಯರ್ಥವಾಗುತ್ತದೆ. ನಾವೇನು ಕೇಳಿವಾ..? ಅವರಾಗಿ ಮಾಡಿದಾರೆ. ನಮಗೇನಾಗಬೇಕಿದೆ ಎಂದು ಹಗುರವಾಗಿ ಯೋಚಿಸುತ್ತಾರೆ. ಎಲ್ಲರೂ ಹಾಗಿರುವುದಿಲ್ಲ. ಕೃತಜ್ಞರು ಇರುತ್ತಾರೆ.ಯಾವಾಗ ಅವರ ಋಣ ತೀರಿಸೇವು ಅಂತ ಕಾಯುತ್ತಾ ಇರುತ್ತಾರೆ.ಆದರೆ ಬಹುತೇಕರು ಈಗ ಹಾಗಾಗಿದ್ದಾರೆ.ಕಾಲ ಬದಲಾಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ನೀವು ಇಂಥವರ ವಿಷಯದಲ್ಲಿ ಖಂಡಿತಾ ಬದಲಾಗಬೇಕು. ಅಂದ್ರೆ ಮಾತ್ರ ನಾಲ್ಕು ಕಾಲ ಬಾಳುವೀರಿ.

ಡಾ.ಸಿದ್ಧರಾಮ ಹೊನ್ಕಲ್ - Made using Quotes Creator App, Post Maker App
S
Siddarama Honnkal
Quote by Siddarama Honnkal - 
ಹೊನ್ನಸಿರಿಯ ಹೊನ್ನುಡಿ 

ಅದು ಯಾರೇ ಆಗಿರಲಿ ತಮ್ಮಲ್ಲಿ ಏನಿದೆಯೋ  ಅದನ್ನು ಮಾತ್ರ ಇತರರಲ್ಲಿ ಕಾಣುವರು.ಮತ್ತು  ಅಂತಹದನ್ನು ಮಾತ್ರ ತಮ್ಮ ನಡೆ ನುಡಿಯಲ್ಲಿ ಹಂಚಿಕೊಳ್ಳುವರು.
 ಅದು ಒಳ್ಳೆಯ ನಡೆ ನುಡಿಯ ಮನಸ್ಥಿತಿ ಆಗಿರಬಹುದು.ಅಥವಾ ಅವರೊಳಗಿನ ದುಷ್ಟತನ, ಸಣ್ಣತನ, ಕಪಟತನವೇ ಆಗಿರಬಹುದು. 
ಅವರವರ ವ್ಯಕ್ತಿತ್ವ ಅವರವರ ನಡೆ ನುಡಿಯ ಮೇಲೆ ರೂಪುಗೊಳ್ಳುತ್ತದೆ.ಆ ಮೂಲಕ ಸಮಾಜದಲ್ಲಿ, ಸುತ್ತಲಿನಲ್ಲಿ ಅವರ ವ್ಯಕ್ತಿತ್ವ  ಏನೆಂದು ನಿರ್ಧರಿಸಲ್ಪಡುತ್ತದೆ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ
ಹರಿವ ನದಿ ತನ್ನ ಪಾಡಿಗೆ ತಾ ಹರಿತಾ ಇರುತ್ತದೆ ಬಾಯಾರಿದವರು ನೀರು ಕುಡಿದು ತಮ್ಮ ದಾಹ ತೀರಿಸಿಕೊಂಡು ನದಿಗೆ ಕೃತಜ್ಞತೆ ಅರ್ಪಿಸಿ  
ಮುಂದೆ ಸಾಗುತ್ತಾರೆ. 
ಇನ್ನೂ ಕೆಲವರು ತಮ್ಮ ದಾಹ ತೀರಿದ ಮೇಲೆ ಅದೇ ನೀರು ಬಾಯಿ ಮುಕ್ಕಳಿಸಿ ತಮ್ಮ ಮನಸು ಹಾಗೂ ದೇಹದ, ಬಾಯಲ್ಲಿಯ ಹೊಲಸನ್ನು ನದಿಯ ಮುಖಕ್ಕೆ 
ಉಗುಳಿ ಮುಂದೆ ಸಾಗುತ್ತಾರೆ. 
ಹಾಗಂತ ಹರಿವ ನದಿ ತನ್ನ ಹರಿವನ್ನು ನಿಲ್ಲಿಸುವದು ಇಲ್ಲ. ಇದೆಲ್ಲ ಗಮನಿಸುತ್ತಾ ಕೂಡುವದು ಇಲ್ಲ. ನಾವೆಲ್ಲ ತನ್ನ ಪಾಡಿಗೆ ತಾ ಹರಿವ ಈ ನದಿಯಂತಾಗಬೇಕು.

@-ಸಿದ್ಧರಾಮ ಹೊನ್ಕಲ್ - Made using Quotes Creator App, Post Maker App
S
Siddarama Honnkal
Quote by Siddarama Honnkal - ನಡೆಯುತ್ತಾ ನಡೆಯುತ್ತಾ
ಕತ್ತಲಾಯಿತು
ಭಯಂಕರವಾದ ಕಾಡಿನಲ್ಲಿ
ಬಂದು ಬಿಟ್ಟಿದ್ದೇವು
ಅಲ್ಲಿರುವ ಹುಲಿ ಸಿಂಹ ಚಿರತೆ
ಕಾಡು ಪ್ರಾಣಿಗಳಿಗೆ
ವಿಷ ಸರ್ಪಗಳಿಗೆ ಅಂಜಲಿಲ್ಲ
ಆ ಕತ್ತಲೆಗೂ ಅಂಜಲಿಲ್ಲ
ಜೊತೆಯಲ್ಲಿ ಇರುವವರಿಗಾಗಿ 
ಅಂಜಿದೆ..!?

ಮೂಲ-ಪಂಜಾಬಿ
ಅನುವಾದ- ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ದಾರ್ಶನಿಕರ ಸತ್ಯ ಮಾತು 

ನಿನ್ನೆ ಯಾರದೋ ಇದ್ದದ್ದು ಇಂದು ನನ್ನದಾಗಿದೆ.
ಇಂದು ನನ್ನದಾಗಿದ್ದು ನಾಳೆ ಇನ್ನಾರದೋ ಆಗಲಿದೆ. ಕಳೆದುಕೊಂಡೆ ಎಂದು ದು:ಖಿಸದಿರು ಮನುಜ. ಕಳೆದುಕೊಂಡೇ ಏನ್ನಲು ನೀ ಇಲ್ಲಿಗೆ ಬರುವಾಗ ತಂದದ್ದು ಏನು? 
ಇಲ್ಲಿ ನೀ ಹೊಸತಾಗಿ ಉತ್ಪಾದಿಸಿದ್ದು, ಸೃಷ್ಠಿಸಿದ್ದಾದರೂ ಏನು? ಎಲ್ಲವನೂ ಇಲ್ಲಿರುವುದೇ ಬಳಸಿದ್ದೇವೆ. 
ಇಷ್ಟಾಗಿಯೂ ಜೊತೆ ಒಯ್ಯುವುದಾದರೂ ಏನು? ಎಲ್ಲಾ ಒಂದು ದಿನ ಬಿಟ್ಟು ಬರಿಗೈಯಲಿ ಮಣ್ಣಾಗಲಿದೆ.
ಈ ದಾರ್ಶನಿಕ ಸತ್ಯಮಾತು ಸದಾ ಎಲ್ಲರಿಗೂ ಅನುದಿನ ನೆನಪಿದ್ದರೆ ಮನುಷ್ಯ ನೋವಲು ನಗುತಲಿರಬಹುದು. ಇದ್ದಂತೆ,ಬಂದಂತೆ, ಮಾನವೀಯ ಸಂವೇದನೆಯಿಂದ ಸಮಾಧಾನ ತೃಪ್ತಿಯಿಂದಲೂ ಬದುಕಬಹುದು. 
ಸಮಾಜಮುಖಿ, ಜನಮುಖಿಯಾಗಿ ಚಿಂತಿಸಬಹುದು.

*ಸಿದ್ಧರಾಮ ಹೊನ್ಕಲ್*


ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ 
ಆದಿ ಕವಿ ಪಂಪನಿಂದ ಹಿಡಿದು ಹನ್ನೆರಡನೇ ಶತಮಾನದ ವಚನಕಾರರನ್ನು ಒಳಗೊಂಡಂತೆ ನವೋದಯ,ನವ್ಯ,ದಲಿತ ಬಂಡಾಯದ ಎಲ್ಲಾ ಕವಿಗಳು ಸೇರಿದಂತೆ ಇಂದಿನ ಆರಂಭದ ಕವಿಗಳ ಕಾವ್ಯಕ್ಕೂ ಸಹ ಅವರವರದೇ ಆದ ಒಂದು ಸಾಮಾಜಿಕ ಜವಾಬ್ದಾರಿ ಇದೆ.ಇರಬೇಕು ಸಹ. ಯಾವುದೇ ಒಂದು ಬರಹ ತ್ಯಾಗವನ್ನು ನಿರೀಕ್ಷಿಸುತ್ತದೆ.ಪ್ರೀತಿ, ಮಮತೆ, ಕಷ್ಟ ಸಹಿಷ್ಣುತೆ, ಕರುಣೆ, ಔದಾರ್ಯ ಇದ್ದ ಸಂವೇದನಾಶೀಲ ಮನುಷ್ಯ ಮಾತ್ರ ನಿಜದ ಕವಿಯಾಗಬಲ್ಲ. ಸಾಹಿತಿಯಾಗಬಲ್ಲ. ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ ಎನ್ನುವದು ಕೇವಲ ಘೋಷಣೆಯಲ್ಲ. ಅದು ಬರಹಗಾರನಲ್ಲಿ ಸೂಕ್ಷ್ಮ ಸಂವೇದನಾ ಪ್ರಜ್ಞೆಯಾಗಿದ್ದಾಗಲೇ ಬಹುಕಾಲ ಉಳಿಯುವ ಗಟ್ಟಿಯಾದ ಸಾಹಿತ್ಯ ಹುಟ್ಟಬಲ್ಲದು.ಅಂತಹ ಕವಿ ಲೇಖಕ ಬರಹಗಾರ ಮಾತ್ರ ತನ್ನ ಇಹದ ಯಾತ್ರೇ ಮುಗಿಸಿದ ಮೇಲೂ ಓದುಗರ ಹೃದಯದಲ್ಲಿ ಬದುಕಿರಬಲ್ಲ.ಬದುಕಿರುತ್ತಾನೆ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - 
ಹೊನ್ನುಡಿ 
ಯಾವುದೇ ಪ್ರಕಾರದ ಸಾಹಿತ್ಯದ ಆಳವಾದ ಅಧ್ಯಯನ ಬಿಡಿ, ಮೇಲೈಮಯ್ ಅಧ್ಯಯನವಿಲ್ಲದ, ಸೃಜನಶೀಲ ಹೋಗಲಿ, ಸಾಮಾನ್ಯ ಬರಹದ ಎಬಿಸಿಡಿ ಗೊತ್ತಿಲ್ಲದ, ನಾಲ್ಕು ಸಾಲು ಕಾಗುಣಿತ ತಪ್ಪಿಲ್ಲದೇ ಬರೆಯಲು ಬಾರದ ಅಬ್ಬೆಪಾರಿಗಳು ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ, ಕ್ಷೇತ್ರದಲ್ಲಿ ತಾವು ಏನಾದರೊಂದು ಆಗಬೇಕೆಂದು ಹೊರಡುವುದು ಅದೆಷ್ಟು ಸರಿಯೋ ? ಆ ಕನ್ನಡ ರಾಜ ರಾಜೇಶ್ವರಿಯನ್ನು ಆ ದೇವರೇ ಕಾಪಾಡಬೇಕು. ಕಾಲಾಯ್ ತಸ್ಮೇ ನಮ:

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ 
ಅದು ಯಾರೇ ಆಗಿರಲಿ ತನ್ಞಷ್ಟಕ್ಕೆ ತಾನು ಬಹಳ ಬುದ್ಧಿವಂತ,ಇತರರಿಗೆ ಸಲಹೆ ನೀಡೋದೇ ತನ್ನ ಕೆಲಸ ಅಂದುಕೊಂಡು ಪ್ರತಿಯೊಂದನ್ನೂ ತನ್ನ ಮೂಗಿನ ನೇರಕ್ಕೆ ಗ್ರಹಿಸುತ್ತಾ ಹೋದರೆ ಅವನಂತಹ ಮೂರ್ಖ ಮತ್ತಾರು ಇರುವುದಿಲ್ಲ. ಮೂರ್ಖನಿಗೆ ಮೂರ್ಖ ಅನ್ನೋದೇಕೆ ಎಂದು ಕೆಲವರು ಸೌಜನ್ಯ ತೋರುವದರಿಂದ ಅವರ ಅಂತಹ ಮೂರ್ಖ ನಡವಳಿಕೆ ಮುಂದುವರಿತಾನೇ ಇರುತ್ತದೆ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ 

ಈ ನೆಲದಲ್ಲಿ ಹುಟ್ಟಿಬಂದ ಯಾವುದೇ ವ್ಯಕ್ತಿಗಳಿಗೆ ಅವರವರ ಆತ್ಮಗೌರವ, ನೈತಿಕತೆ, ಆತ್ಮತೃಪ್ತಿ ಬಹಳ ಮುಖ್ಯ. ಅದೇ ಕಳೆದುಕೊಂಡು ಭಟ್ಟಂಗಿಗಳಾಗಿ, ಮುಖಸ್ತುತಿ ಮಾಡಿ ಕೆಲವರನ್ನು ಸದಾ ಹೊಗಳುತ್ತಾ ಹೊಟ್ಟೆ ಹೊರೆಯುವ ಜನರ ಯಾವುದೇ ಪುಕ್ಕಟೆ ಸಂಪಾದನೆಗೆ, ಸ್ಥಾನಮಾನ, ಗೌರವಗಳಿಗೆ ಯಾವ ಬೆಲೆಯೂ ಸುತ್ತಲಿನ ಸಮಾಜದ ಜನರ ದೃಷ್ಟಿಯಲ್ಲಿ ಇರುವುದಿಲ್ಲ. ಅಂಥವರು ಅವರನ್ನು ಬಲ್ಲ ಜನರ ದೃಷ್ಟಿಯಲ್ಲಿ ತೀರಾ ಕ್ಷುಲ್ಲಕವಾಗಿ ಕಾಣುವರು.
ಈ ಜಗದಲ್ಲಿ ತಮ್ಮ ಪಾಡಿಗೆ ತಾವು ದುಡಿದುಣ್ಣುವ, ಬದುಕಿರುವ ಒಳ್ಳೆಯವರೇ ಬಹಳ ಜನ ಇರುತ್ತಾರೆ. ಅವರು ಇದನ್ನೆಲ್ಲಾ ಗಮನಿಸುತ್ತಾ ಇರುತ್ತಾರೆ.ಆದರೆ ಇಂತಹದೇ ಕೆಟ್ಟ ಮನೋಭಾವದ ಕೆಲವು ಸ್ವಾರ್ಥಿಗಳು ಮಾತ್ರ ಇಂಥವರಿಗೆ ಎದುರುಗಡೆ ಕೃತಕ ಗೌರವ ನೀಡಬಹುದೇ ಹೊರತು ಹಿಂದುಗಡೆ ಅವರ ಕುರಿತು ಅವಹೇಳನದ ಮಾತೇ ಆಡುವರು ಅಂತಹ ಕ್ಷಣಿಕ ಸಂಪಾದನೆಯ ಜೀವನ ಬಹುದಿನ ನಡೆಯಲಾರದು. ಆತ್ಮಗೌರವ ತಮ್ಮ ವ್ಯಕ್ತಿತ್ವ ಕಳೆದುಕೊಂಡು ಏನೇ ಪಡೆದರು,ಸಂಪಾದಿಸಿದರು ಅದು ಅರ್ಥಹೀನ.
ಇವರೆಂತಹವರೆಂದು ಇವರ ಸ್ವಾರ್ಥದ ಬಗ್ಗೆ 
 ಹೊಗಳಿಸಿಕೊಂಡವರಿಗೂ ಬೇಗ ಅರ್ಥವಾಗಿ ದೂರ ತಳ್ಳುವರು ಅದು ಸಹಜ.ಹೊಗಳಿ ಹೊನ್ನ ಶೂಲಕ್ಕೆ ಏರಿಸಬೇಡಿ ಅಂದಿಲ್ಲವೇ ಬಸವಾದಿ ಶರಣರು.
ಆ ಕಾರಣ ಪರಿಶ್ರಮದ,ಪ್ರಾಮಾಣಿಕ ದುಡಿಮೆಯಿಂದ ತಮ್ಮಲ್ಲಿಯ ಪ್ರತಿಭೆಯಿಂದ ಮಾತ್ರ ಅವರವರು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.ಎಲ್ಲರನ್ನು ಪ್ರೀತಿಸುವ,ಪರಸ್ಪರ ಗೌರವಿಸುವ,ಸಹಕಾರ ನೀಡುವ ಮನೋಭಾವ ನಮ್ಮದಾಗಬೇಕು.ಅದು ಬಹುಕಾಲ ನಿಲ್ಲಬಲ್ಲದು ಮತ್ತು ನಡೆಯಬಲ್ಲದು. ನಿಜವಾದ ನೈತಿಕ ಆತ್ಮತೃಪ್ತಿ, ಸಂತೋಷ ಜಗತ್ತಿನ ಎಲ್ಲಾ ದೊಡ್ಡದಾದ ಸ್ಥಾನಮಾನ, ಗೌರವ, ಕುಬೇರನ ಸಂಪತ್ತಿಗಿಂತ ದೊಡ್ಠದು. ಅಂತಹ ನೈತಿಕ ಆತ್ಮಗೌರವ ತೃಪ್ತಿ ಪಡೆವ ಹಂಬಲ ನಮ್ಮೆಲ್ಲರದಾಗಬೇಕು.

*ಸಿದ್ಧರಾಮ ಹೊನ್ಕಲ್*
 - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
Siddarama Honnkal
Quote by Siddarama Honnkal - ಹೊನ್ನುಡಿ 

ಈ ನೆಲದಲ್ಲಿ ಹುಟ್ಟಿಬಂದ ಯಾವುದೇ ವ್ಯಕ್ತಿಗಳಿಗೆ ಅವರವರ ಆತ್ಮಗೌರವ, ನೈತಿಕತೆ, ಆತ್ಮತೃಪ್ತಿ ಬಹಳ ಮುಖ್ಯ. ಅದೇ ಕಳೆದುಕೊಂಡು ಭಟ್ಟಂಗಿಗಳಾಗಿ, ಮುಖಸ್ತುತಿ ಮಾಡಿ ಕೆಲವರನ್ನು ಸದಾ ಹೊಗಳುತ್ತಾ ಹೊಟ್ಟೆ ಹೊರೆಯುವ ಜನರ ಯಾವುದೇ ಪುಕ್ಕಟೆ ಸಂಪಾದನೆಗೆ, ಸ್ಥಾನಮಾನ, ಗೌರವಗಳಿಗೆ ಯಾವ ಬೆಲೆಯೂ ಸುತ್ತಲಿನ ಸಮಾಜದ ಜನರ ದೃಷ್ಟಿಯಲ್ಲಿ ಇರುವುದಿಲ್ಲ. ಅಂಥವರು ಅವರನ್ನು ಬಲ್ಲ ಜನರ ದೃಷ್ಟಿಯಲ್ಲಿ ತೀರಾ ಕ್ಷುಲ್ಲಕವಾಗಿ ಕಾಣುವರು.

ಈ ಜಗದಲ್ಲಿ ತಮ್ಮ ಪಾಡಿಗೆ ತಾವು ದುಡಿದುಣ್ಣುವ, ಬದುಕಿರುವ ಒಳ್ಳೆಯವರೇ ಬಹಳ ಜನ ಇರುತ್ತಾರೆ. ಅವರು ಇದನ್ನೆಲ್ಲಾ ಗಮನಿಸುತ್ತಾ ಇರುತ್ತಾರೆ.ಆದರೆ ಇಂತಹದೇ ಕೆಟ್ಟ ಮನೋಭಾವದ ಕೆಲವು ಸ್ವಾರ್ಥಿಗಳು ಮಾತ್ರ ಇಂಥವರಿಗೆ ಎದುರುಗಡೆ ಕೃತಕ ಗೌರವ ನೀಡಬಹುದೇ ಹೊರತು ಹಿಂದುಗಡೆ ಅವರ ಕುರಿತು ಅವಹೇಳನದ ಮಾತೇ ಆಡುವರು ಅಂತಹ ಕ್ಷಣಿಕ ಸಂಪಾದನೆಯ ಜೀವನ ಬಹುದಿನ ನಡೆಯಲಾರದು.ಆತ್ಮಗೌರವ ಕಳೆದುಕೊಂಡು ಏನೇ ಪಡೆದರು,ಸಂಪಾದಿಸಿದರು ಅದು ಅರ್ಥಹೀನ.
ಇವರೆಂತಹವರೆಂದು ಇವರ ಸ್ವಾರ್ಥದ ಬಗ್ಗೆ 
 ಹೊಗಳಿಸಿಕೊಂಡವರಿಗೂ ಬೇಗ ಅರ್ಥವಾಗಿ ದೂರ ತಳ್ಳುವರು ಅದು ಸಹಜ.
ಆ ಕಾರಣ ಪರಿಶ್ರಮದ,ಪ್ರಾಮಾಣಿಕ ದುಡಿಮೆಯಿಂದ ತಮ್ಮಲ್ಲಿಯ ಪ್ರತಿಭೆಯಿಂದ ಮಾತ್ರ ಅವರವರು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.ಎಲ್ಲರನ್ನು ಪ್ರೀತಿಸುವ,ಪರಸ್ಪರ ಗೌರವಿಸುವ,ಸಹಕಾರ ನೀಡುವ ಮನೋಭಾವ ನಮ್ಮದಾಗಬೇಕು.ಅದು ಬಹುಕಾಲ ನಿಲ್ಲಬಲ್ಲದು ಮತ್ತು ನಡೆಯಬಲ್ಲದು. ನಿಜವಾದ ನೈತಿಕ ಆತ್ಮತೃಪ್ತಿ, ಸಂತೋಷ ಜಗತ್ತಿನ ಎಲ್ಲಾ ದೊಡ್ಡದಾದ ಸ್ಥಾನಮಾನ, ಗೌರವ, ಕುಬೇರನ ಸಂಪತ್ತಿಗಿಂತ ದೊಡ್ಠದು. ಅಂತಹ ನೈತಿಕ ಆತ್ಮಗೌರವ ತೃಪ್ತಿ ಪಡೆವ ಹಂಬಲ ನಮ್ಮೆಲ್ಲರದಾಗಬೇಕು.

*ಸಿದ್ಧರಾಮ ಹೊನ್ಕಲ್*
 - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ 

ಈ ನೆಲದಲ್ಲಿ ಹುಟ್ಟಿಬಂದ ಯಾವುದೇ ವ್ಯಕ್ತಿಗಳಿಗೆ ಅವರವರ ಆತ್ಮಗೌರವ, ನೈತಿಕತೆ, ಆತ್ಮತೃಪ್ತಿ ಬಹಳ ಮುಖ್ಯ. ಅದೇ ಕಳೆದುಕೊಂಡು ಭಟ್ಟಂಗಿಗಳಾಗಿ, ಮುಖಸ್ತುತಿ ಮಾಡಿ ಕೆಲವರನ್ನು ಸದಾ ಹೊಗಳುತ್ತಾ ಹೊಟ್ಟೆ ಹೊರೆಯುವ ಜನರ ಯಾವುದೇ ಪುಕ್ಕಟೆ ಸಂಪಾದನೆಗೆ, ಸ್ಥಾನಮಾನ, ಗೌರವಗಳಿಗೆ ಯಾವ ಬೆಲೆಯೂ ಸುತ್ತಲಿನ ಸಮಾಜದ ಜನರ ದೃಷ್ಟಿಯಲ್ಲಿ ಇರುವುದಿಲ್ಲ. ಅಂಥವರು ಅವರನ್ನು ಬಲ್ಲ ಜನರ ದೃಷ್ಟಿಯಲ್ಲಿ ತೀರಾ ಕ್ಷುಲ್ಲಕವಾಗಿ ಕಾಣುವರು.
ಈ ಜಗದಲ್ಲಿ ತಮ್ಮ ಪಾಡಿಗೆ ತಾವು ದುಡಿದುಣ್ಣುವ, ಬದುಕಿರುವ ಒಳ್ಳೆಯವರೇ ಬಹಳ ಜನ ಇರುತ್ತಾರೆ. ಅವರು ಇದನ್ನೆಲ್ಲಾ ಗಮನಿಸುತ್ತಾ ಇರುತ್ತಾರೆ.ಆದರೆ ಇಂತಹದೇ ಕೆಟ್ಟ ಮನೋಭಾವದ ಕೆಲವು ಸ್ವಾರ್ಥಿಗಳು ಮಾತ್ರ ಇಂಥವರಿಗೆ ಎದುರುಗಡೆ ಕೃತಕ ಗೌರವ ನೀಡಬಹುದೇ ಹೊರತು ಹಿಂದುಗಡೆ ಅವರ ಕುರಿತು ಅವಹೇಳನದ ಮಾತೇ ಆಡುವರು ಅಂತಹ ಕ್ಷಣಿಕ ಸಂಪಾದನೆಯ ಜೀವನ ಬಹುದಿನ ನಡೆಯಲಾರದು.ಇವರೆಂತಹ ಸ್ವಾರ್ಥಿಗಳೆಂದು ಇವರ ಬಗ್ಗೆ ಬೇಗ ಹೊಗಳಿಸಿಕೊಂಡವರಿಗೂ ಅರ್ಥವಾಗಿ ದೂರ ತಳ್ಳುವದು ಸಹಜ.
ಆ ಕಾರಣ ಪರಿಶ್ರಮದ,ಪ್ರಾಮಾಣಿಕ ದುಡಿಮೆಯಿಂದ ತಮ್ಮಲ್ಲಿಯ ಪ್ರತಿಭೆಯಿಂದ ಮಾತ್ರ ಎಲ್ಲರೂ ತಮ್ಮ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.ಎಲ್ಲರನ್ನು ಪ್ರೀತಿಸುವ,ಪರಸ್ಪರ ಗೌರವಿಸುವ,ಸಹಕಾರ ನೀಡುವ ಮನೋಭಾವ ನಮ್ಮದಾಗಬೇಕು.ಅದು ಬಹುಕಾಲ ನಿಲ್ಲಬಲ್ಲದು ಮತ್ತು ನಡೆಯಬಲ್ಲದು. ನಿಜವಾದ ನೈತಿಕ ಆತ್ಮತೃಪ್ತಿ, ಸಂತೋಷ ಜಗತ್ತಿನ ಎಲ್ಲಾ ದೊಡ್ಡದಾದ ಸ್ಥಾನಮಾನ, ಗೌರವ, ಕುಬೇರನ ಸಂಪತ್ತಿಗಿಂತ ದೊಡ್ಠದು. ಅಂತಹ ನೈತಿಕ ಆತ್ಮಗೌರವ ತೃಪ್ತಿ ಪಡೆವ ಹಂಬಲ ನಮ್ಮೆಲ್ಲರದಾಗಬೇಕು.

*ಸಿದ್ಧರಾಮ ಹೊನ್ಕಲ್*
 - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ 
ನಮ್ಮಯಾವುದೇ ಕೆಲಸವನ್ನು ನಾವು ಅತ್ಯಂತ ಪ್ರಾಮಾಣಿಕತೆಯಿಂದ, ಪರಿಶ್ರಮದಿಂದ ನಿರ್ವಹಿಸಬೇಕು.ಅದರ ಪ್ರತಿಫಲ ಸಿಗಬಹುದು ಅಥವಾ ಸಿಗದಿರಬಹುದು.ಸಿಕ್ಕರೆ ಸಂತೋಷ ಪಡೋಣ.ಸಿಗದಿದ್ದರೆ ನಿರಾಶೆಯಿಂದ ಕೈ‌ ಚೆಲ್ಲಿ ವಿಮುಖ ಆಗಬಾರದು.ಮನಸು ಸಹ ಕೆಡಿಸಿಕೋಬಾರದು.ಅವಕಾಶಗಳು ಕಡಿಮೆ ಇರುತ್ತವೆ.ಬೇಡಿಕೆ ಬಹಳ ಇರುತ್ತದೆ.ಅನೇಕ ಸಲ ಅಯೋಗ್ಯರಿಗೇನೇ ಅವಕಾಶಗಳು,ಮನ್ನಣೆ ಸಿಕ್ಕು ಬಿಡುತ್ತವೆ. ಅದಕ್ಕೆ ಅವರ ವ್ಯವಹಾರಿಕತೆ, ಕೃತಕ ನಡವಳಿಕೆಯ ಪ್ರಭಾವ ಕಾರಣ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ಎಲ್ಲ ಗೊತ್ತಿದ್ದು ಏನು‌ ಗೊತ್ತಿಲ್ಲದಂತೆ ಸುಮ್ಮನೆ ನಮ್ಮ ಪಾಡಿಗೆ ನಾವು ನಮ್ಮ ನಿರಂತರ ಸೃಜನಶೀಲ ಕೆಲಸದಲ್ಲಿ ತೊಡಗಿರೋದು ಕ್ಷೇಮಕರ.
ಬಾರದು ಬಪ್ಪದು.ಬಪ್ಪದು ತಪ್ಪದು...
ಶರಣರ ಈ ಮಾತು ಅನುದಿನ ನೆನಪಿರಬೇಕು.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ

ನಾವು ಏನೇ ಕಷ್ಟಪಟ್ಟರೂ,ಒಂದು ಗುರಿಯ ಈಡೇರಿಕೆಗಾಗಿ ಹಗಲಿರುಳು ಚಿಂತಿಸಿ,ಧ್ಯಾನಿಸಿ ಹಲವು ವರ್ಷಗಳ ಕಾಲ ಪ್ರಯತ್ನಿಸಿದರೂ ಸಹ ನಾವು ಹಿಡಿದ ಕೆಲಸ ಕೈ ಗೂಡಲಿಲ್ಲವೆಂದರೆ, ನಮ್ಮದು ವ್ಯರ್ಥ ಪ್ರಯತ್ನ ಅಂತ ನಮಗೇನೇ ಮನವರಿಕೆ ಆದರೆ, ಆ ಕ್ಷಣದಿಂದಲೇ ನಾವು ಯಾರಿಗೂ ಅಪಾದಿಸದೇ, ನೋಯಿಸದೇ, ಸುಮ್ಮನೆ ಲೋಕಾರೂಢಿ‌ ಬದುಕುವಕಡೆಗೆ ತೊಡಗಿಸಿಕೊಳ್ಳಬೇಕು. ಯಾವುದೇ ಗಾಢ ನಿರಾಸೆ‌ ಕೊಡುವ ನೋವು ಅಪಾರ.ಅದು ಎಲ್ಲರಿಗೂ ಸಹಜ. ಅದು ನುಂಗಿಕೊಂಡು ಕನಿಷ್ಠ ನಗುವ‌ ನಾಟಕ ರೂಢಿಸಿಕೋಬೇಕು. 
ಅದು ಬದುಕು ಚೆಲಿಸುವಲ್ಲಿ  ಅನಿವಾರ್ಯ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ

ನಿಜವಾದ ಕವಿ ಲೇಖಕ ಆದವನು ಸುತ್ತಲಿನವರನ್ನು ಪ್ರೀತಿಸಬಲ್ಲನೇ ಹೊರತು ಯಾರನ್ನೂ ದ್ವೇಷಿಸಲಾರ. ಬೇಡವಾದರೆ ದೂರ ಇರಬಹುದು.
ಮೌನ ವಹಿಸಬಹುದಷ್ಟೆ

- ಹೊನ್ನಸಿರಿ
 - Made using Quotes Creator App, Post Maker App
S
Siddarama Honnkal
Quote by Siddarama Honnkal - 
ಹೊನ್ನುಡಿ

ಬದುಕಿನ ಯಾವುದೇ ಕ್ಷೇತ್ರದಲ್ಲಾಗಲಿ ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಂಡವನು ಮಾತ್ರ ಮೇಲೆರುತ್ತಾನೆ. ಬೇಡವೆಂದವನು ಇದ್ದಲ್ಲಿಯೇ ಶೇಫರ ಜೋನದಲ್ಲಿರುತ್ತಾನೆ

@-ಹೊನ್ನಸಿರಿ. - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ
ಶೇಫರ ಜೋನನ ಮೋಹ
ಒಂದು ರೀತಿಯ ವೇದಾಂತದ ಹಾಗೇ ಮೇಲಕ್ಕೂ ಕೆಳಕ್ಕೂ ಹೋಗಲು ಬಿಡೋಲ್ಲ. ಹಾಗಾಗಿ ಮನುಷ್ಯ ಅಪ್ಪ ಹಾಕಿದ ಆಲದ ಮರಕ್ಕೇನೆ ಜೋತು ಬೀಳೋದು

@ಹೊನ್ನಸಿರಿ. - Made using Quotes Creator App, Post Maker App
S
Siddarama Honnkal
Quote by Siddarama Honnkal - ಅನುಭವದ ಮಾತಿದು

ಮದುವೆಯಾದ ಹೊಸದರಲಿ ತವರಿಗೆ ಪತ್ನಿಯನ್ನು ಕಳಿಸಲು ಹಿಂಜರಿಯುವ‌ ಪತಿ ದೇವರುಗಳು 
ಕೆಲ ವರ್ಷಗಳ ನಂತರ ತವರಿಗೆ ಅಥವಾ ಎಲ್ಲಿಗಾದರೂ ಒಂದು ಹತ್ತಾರು ದಿನ ಹೋಗಬಾರದೇ ಎಂದು ಹಪಹಪಿಸುವದು ಯಾಕಿರಬಹುದು?!
ಅದೇ ಪತ್ನಿ ಆಗ ಏಳೇಳು‌ ಜನ್ಮಕ್ಕೂ ನೀವೇ ಪತಿಯಾಗಬೇಕು ಅಂತ ವೃತ ಮಾಡೋದಾಗಿ ಹೇಳಿದರೆ‌ !
ನೀನೇ ಪತ್ನಿಯಾಗಿ ಸಿಗುವಂತಿದ್ದರೆ  ಮುಂದಿನ ಜನ್ಮದಲ್ಲಿ ನಾನು ಮನುಷ್ಯ ಆಗಿ ಹುಟ್ಟೋದೇ ಬೇಡ, ನಾನು ನಾಯಿಯಾಗಿ ಹುಟ್ಟುವೆ.. ಅಂತಿದ್ದವರು 
೩-೪ ದಶಕ ಹಾಗೂ ಹೀಗೂ ಜಗಳ ಆಡಿಕೊಂಡೋ, ಪ್ರೇಮದಿಂದಲೋ ಒಟ್ಟಾರೆ ಕೂಡಿ ಬಾಳಿ ಬದುಕಿದ ನಂತರ ಮತ್ತೆ ಬೇರೆಯವರ ಕೈಯಲ್ಲಿ ಪಳಗೋದು, ಹೆಣಗೋದು ಸಾಕು ಮಾರಾಯ ಶಿವನೇ. ಇವಳೇ ಮುಂದಿನ ಜನ್ಮಗಳಿಗೂ ಪತ್ನಿಯಾಗಿ ಸಿಗಲಿ. ಆದರೆ ಇನ್ನಷ್ಟು ಟ್ರಿಮ್ ಮಾಡಿಯಾದರೂ ಹುಟ್ಟಿಸು ಅಂತ ಆ ದೇವರಿಗೆ ಮನಸ್ಸಿನಲ್ಲಿ ಕೇಳಿಕೋ ಅಸಹಾಯಕ! ಮಟ್ಟಕ್ಕೆ ತಲುಪಬಹುದು ಅನಿಸುತ್ತದೆ.ಅಲ್ಲವೇನರಿ ಈರ್ವರಿಗೂ...ಹಹಹ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಹೊನ್ನುಡಿ
ಮದುವೆಯಾದ ಹೊಸದರಲಿ ತವರಿಗೆ ಪತ್ನಿಯನ್ನು ಕಳಿಸಲು ಹಿಂಜರಿಯುವ‌ ಪತಿ ದೇವರುಗಳು 
ಕೆಲ ವರ್ಷಗಳ ನಂತರ ತವರಿಗೆ ಅಥವಾ ಎಲ್ಲಿಗಾದರೂ ನಾಲ್ಕಾರು ದಿನ ಹೋಗಬಾರದೇ ಎಂದು ಹಪಹಪಿಸುವದು ಯಾಕಿರಬಹುದು?!

ಅದೇ ಪತ್ನಿ ಆಗ ಏಳೇಳು‌ ಜನ್ಮಕ್ಕೂ ನೀವೇ ಪತಿಯಾಗಬೇಕು ಅಂತ ವೃತ ಮಾಡೋದಾಗಿ ಹೇಳಿದರೆ‌ 
ನೀನೇ ಪತ್ನಿಯಾಗಿ ಸಿಗುವಂತಿದ್ದರೆ  ಮುಂದಿನ ಜನ್ಮದಲ್ಲಿ  ನಾನು ಮನುಷ್ಯ ಆಗಿ ಹುಟ್ಟೋದೇ ಬೇಡ, ನಾನು ನಾಯಿಯಾಗಿ ಹುಟ್ಟುವೆ.. ಅಂತಿದ್ದವರು 
೩-೪ ದಶಕ ಹಾಗೂ ಹೀಗೂ ಜಗಳ ಆಡಿಕೊಂಡೋ ಹೇಗೋ ಒಟ್ಟಾರೆ ಕೂಡಿ ಬದುಕಿದ ನಂತರ ಮತ್ತೆ ಬೇರೆಯವರ ಕೈಯಲ್ಲಿ ಪಳಗೋದು, ಹೆಣಗೋದು ಸಾಕು ಮಾರಾಯ. ಇವಳೇ ಹೆಂಡತಿಯಾಗಿ ಸಿಗಲಿ. ಆದರೆ ಇನ್ನಷ್ಟು ಟ್ರಿಮ್ ಮಾಡಿ ಹುಟ್ಟಿಸು ಅಂತ ಆ ದೇವರಿಗೆ ಮನಸ್ಸಿನಲ್ಲಿ ಕೇಳಿಕೋ ಮಟ್ಟಕ್ಕೆ ತಲುಪಬಹುದು ಅನಿಸುತ್ತದೆ.ಅಲ್ಲವೇನರಿ ಈರ್ವರಿಗೂ...ಹಹಹ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
Siddarama Honnkal
Quote by Siddarama Honnkal - ಆಗುಂತಕನೊಬ್ಬ ಭಗವಾನ್ ಬುದ್ಧನನ್ನು ಕೇಳಿದ .
"ನೀವು ಇಷ್ಟು ದೊಡ್ಡ ವ್ಯಕ್ತಿಯಾದರೂ ಯಾಕೆ ಕೆಳಗೆ ಕೂರುತ್ತಿರಾ?ಬುದ್ಧನ ಸುಂದರವಾದ ಉತ್ತರ ಹೀಗಿತ್ತು ☞
"ಕೆಳಗೆ ಕೂತ ವ್ಯಕ್ತಿ ಎಂದೂ ಬೀಳುವುದಿಲ್ಲ".

"ಮತ್ತು ಆತನನ್ನು ಯಾರು ಎಬ್ಬಿಸಿ ಅವಮಾನ ಮಾಡುವದಿಲ್ಲ" ಎಂದು ನಾನು ಸೇರಿಸಿರುವೆ.
ಶುಭೋದಯ

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.

S
Siddarama Honnkal
Quote by Siddarama Honnkal - ಹೊನ್ನುಡಿ

ಸಣ್ಣತನ ಅನ್ನೋದು ಕೆಲವರ ಜೀನ್ಸ್ ದಲ್ಲಿ ರಕ್ತಗತ ಆಗಿರುತ್ತದೆ . ಅಂಥವರು ಎಂತಹದೇ ಫಿಲಾಸಫಿಕಲ್ ಆದ ಮಾತಾಡಿದರು, ಯಾವುದೇ ದಾರ್ಶನಿಕರ ಬಗ್ಗೆ ಬರೆದರು ಸಹ ಅವರೆಂದೂ ದೊಡ್ಡವರು ಆಗಲಾರರು. ಅಂತಹವರಿಗೆಂದು ದೊಡ್ಡತನ ಮೈ ಗೂಡದು.
ಇದು ವೈಜ್ಞಾನಿಕ ಸತ್ಯಗಳಲ್ಲಿ ಒಂದು. 
ಮನಸ್ಸಿನಲ್ಲಿರುವ ಕೊಳೆಗಿಂತ ಹೊರಗಿನ ಕೊಳೆ ದೊಡ್ಡದಿರುವದಿಲ್ಲ. ಅಂತಹವರು ಮೊದಲು ತಮ್ಮ ಮನಸ್ಸಿಗೆ ಮೆತ್ತಿದ ಕೊಳೆಯ ಹಂಗು ಹರಕೋಬೇಕು.ಅಂದಾಗ ಮಾತ್ರ ಅವರ ಮಾತು ಬರಹಕ್ಕೆ ಒಂದು ಬೆಲೆ ಬರುತ್ತದೆ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
siddaram honnkal
Quote by siddaram honnkal - ಹೊನ್ನುಡಿ

ಕೆಲವರು ಕೆಲವು ಕಾಲ ತುಂಬಾ ಪ್ರೀತಿ ವಿಶ್ವಾಸದಿಂದ ಇರುತ್ತಾರೆ.ನಂತರ ಕೆಲವು‌ ತಪ್ಪು ಕಲ್ಪನೆಗಳಿಂದ ದೂರ ಸಹ ಆಗಿರುತ್ತಾರೆ. ಯಾರಾದರೊಬ್ಬರು‌ ಮುಂದಾಗಿ ಪರಸ್ಪರರ ತಪ್ಪು ಕಲ್ಪನೆಗಳನ್ನು ಹೊಗಲಾಡಿಸಲು ಪ್ರಯತ್ನ ಪಡೋದರಿಂದ ಏನು ನಷ್ಟ ಇರುವುದಿಲ್ಲ. ಹಾಗೇ ಬಿಟ್ಟರೆ ಕಮುನಿಕೇಷನ್ ಗ್ಯಾಪ್ ನಿಂದ ಅಂತರ ಹೆಚ್ಚುತ್ತಾ ಹೋಗಿ ಮನಸ್ಸುಗಳು ಮುರಿದೇ ಹೋಗುವ ಸಾಧ್ಯತೆ ಇರುತ್ತದೆ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
siddaram honnkal
Quote by siddaram honnkal - ಹೊನ್ನುಡಿ

ನಾವು ಒಳ್ಳೆಯವರ, ಮಹಾತ್ಮರ ಜೊತೆ ಇದ್ದರೆ ಮಹಾತ್ಮರಾಗದಿದ್ದರೂ ಕನಿಷ್ಠ ಮನುಷ್ಯರಾದರೂ ಆಗುವ ಸಂಭವ ಇರುತ್ತದೆ. ಅದೇ ನಾವು ದುಷ್ಟ‌ ವ್ಯಕ್ತಿಗಳ ಒಡನಾಟದಲ್ಲಿದ್ದರೆ ಖಂಡಿತಾ ದುಷ್ಟರಾಗುವ ಸಂಭವ ಇರುತ್ತದೆ.ಹಾಗಾಗಿ ತಿಳಿದು‌ ಸಂಗವ ಮಾಡಬೇಕು.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
siddaram honnkal
Quote by siddaram honnkal - ಹೊನ್ನುಡಿ

ಕೆಲವು ಸಮಯ ಸಂದರ್ಭಗಳಲ್ಲಿ ಕೆಲವರು ಕೆಲವರನ್ನು ಹೊಗಳಿ ಅಟ್ಟಕ್ಕೇರಿಸಿ ತಮ್ಮ ಕೆಲಸಕ್ಕೆ ಬಳಸಿಕೊಂಡಿರುತ್ತಾರೆ.ತಮ್ಮ ಉದ್ದೇಶ ಈಡೇರಿಸಿಕೊಂಡಿರುತ್ತಾರೆ. ಅವರ ಉದ್ಧೇಶ‌ ಅವರ ಹೊಗಳಿಕೆಗೆ ಕಾರಣ ಅವರಿಗೂ ಅರಿವಿದ್ದು ಸಹ ಅದೇನು ಗೊತ್ತಿಲ್ಲದಂತೆ ಸಹಜವಾಗಿರುತ್ತಾರೆ. ಹೊಗಳಿದಾಗ ಅಟ್ಟಕ್ಕೆರದೇ, ಮುಂದೆ ಕೆಲಸ ಮುಗಿದು ಅವರು ತಲೆ ಮರೆಸಿಕೊಂಡೋ,ಅಥವಾ ಇವರನ್ನು ಕೈಬಿಟ್ಟು ಮತ್ತೆ ಬೇರೆಯವರನ್ನು ಅಟ್ಟಕ್ಕೇರಿಸಿ ಹೊಗಳಿಕೊಂಡು ಓಡಾಡುವದನ್ನು ಕಂಡು ಸಹ ಕಾಣದಂತಿರಬೇಕು. ಬೇಜಾರಾಗಬಾರದು. ಅಲ್ಲಿಗೆ ತಮ್ಮ ಪ್ರಯೋಜನ ಅವರಿಗೆ ಮುಗಿದಿರಬೇಕು ಅಂತ ಸಮಾಧಾನ ಪಡಬೇಕು. ಅಂತಹವರ ಮನಸ್ಥಿತಿ ಏನೆಂದು ? ಅವರೇನು ? ಎಂದು ಗೊತ್ತಿರುತ್ತದೆ. ಅಂದ ಮೇಲೆ ಬೇಜಾರು‌ಪಟ್ಟರೆ ಬರೋದೇನು ಇರೋದಿಲ್ಲ. ಮನಸಲ್ಲಿ ಶುಭ ಕೋರಿ ಸುಮ್ಮನಾಗಬೇಕು.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
siddaram honnkal
Quote by siddaram honnkal - ಹೊನ್ನುಡಿ

ನಮ್ಮ ಸುತ್ತಲಿನ ಜನ‌‌ ಬರೀ ಕೆಟ್ಟವರು ಇದ್ದಾರೆ ಅಂದುಕೋಬೇಕಿಲ್ಲ. ಒಳ್ಳೆಯವರೇ ಈ ಸಮಾಜದಲ್ಲಿ ಜಾಸ್ತಿ ಇದ್ದಾರೆ.ಆದರೆ ಅವರು ತಮ್ಮ ಪಾಡಿಗೆ ತಾವು ಇರುತ್ತಾರೆ. ಕೆಟ್ಟವರೆಂದು ಗೊತ್ತಿದ್ದು ಸಹ ಕೆಲವು ಸಲ ಅಂತಹವರ ಮಧ್ಯೆ ಬದುಕಬೇಕಾದ ಅನಿವಾರ್ಯತೆ  ಇರ್ತದೆ. ಹಾಗಂತ ಅವರಂತೆ ನಾವು ಕೆಟ್ಟವರಾಗಬೇಕಿಲ್ಲ. ನಮ್ಮತನ ನಾವು‌ ಕಾಯ್ದುಕೊಂಡಿರಬೇಕು. ಸ್ವಲ್ಪ ಕಷ್ಟ ಆಗಬಹುದು. ಆದರೆ‌ ಒಳ್ಳೆಯತನಕ್ಕೆ ಯಾವಾಗಲೂ ಒಂದು ಬೆಲೆ ಇದ್ದೆ ಇರುತ್ತದೆ. ಕೊನೆಗೆ‌ ನಮ್ಮ ಆತ್ಮತೃಪ್ತಿ ಅಂತೂ‌ ಇದ್ದೆ ಇರುತ್ತದೆ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
siddaram honnkal
Quote by siddaram honnkal - ಹೊನ್ನುಡಿ

ಜೀವನದ ಪ್ರತಿಯೊಂದು ಘಟ್ಟದ
ಎಲ್ಲದರಲ್ಲಿ ಏನಾದರೂ ಒಂದು ತಪ್ಪು ಹುಡುಕಿ ಟೀಕಿಸುವ ಹಾಗೂ ತಾವು ಮಾತ್ರ ಅದರಿಂದ ಅತೀತರು ಎಂಬಂತೆ ಮಾತಾಡುವ,ಬರೆಯುವ ಜನ ಮೂಲಭೂತವಾಗಿ ಸಣ್ಣತನದವರು ಹಾಗೂ ಅಸುಯಾಪರರು,ದುಷ್ಟರು ಆಗಿರುತ್ತಾರೆ.ಅಂಥವರು ಬಾಯಲ್ಲಿ ಆಡುವ ಮಾತಿಗೂ ಅವರ ಬದುಕಿಗೂ ಏನೇನು ಸಂಬಂಧ ಇರುವುದಿಲ್ಲ.ಇಂಥವರು ಬೇರೆಯವರ ಯಾವುದೇ ಏಳ್ಗೆಯನ್ನು ಸಹಿಸಲಾರರು.ಅದಕೆ ಅವರ ಜನೇಟಿಕ ಅಂಶಗಳು ಎಷ್ಟು ಕಾರಣವೋ ಅಷ್ಟೇ ಬೆಳೆಯುವ ಹಂತದ‌ ಕೆಟ್ಟ ಸಂಸ್ಕಾರಗಳು,ಕೆಟ್ಟವರ ಒಡನಾಟದಿಂದಾಗಿ ಬದುಕಿನ ಪ್ರತಿಯೊಂದನ್ನು ನೆಗೆಟಿವ ಆಗಿ‌ ನೋಡುವ ಮನೋಭಾವ ಬೆಳೆದು ಕೀಳರಿಮೆಯ ಮನೋರೋಗ ದಿಂದ ಬಳಲುತ್ತಿರುತ್ತಾರೆ.ಆ ಕಾರಣ ಅಂತಹ ರೋಗಿಗಳಿಂದ ಅಂತರ ಕಾಪಾಡಿಕೊಂಡು ಆರಾಮವಾಗಿರಬೇಕು.ಅಂತಹವರನ್ನು ಅಲಕ್ಷಿಸಬೇಕು.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
siddaram honnkal
Quote by siddaram honnkal - ನಿಜವಾಗಿ ನೋಡಿದರೆ ಕೆಲವರಿಗೆ ನಾನು ಹೆದರಿಸಬೇಕು.ಆದರೆ ಪರಸ್ಥಿತಿ ಹೇಗಾಗಿದೆ ಅಂದರೆ, ನಾನು ಯಾರಿಗೆ ಹೆದರಿಸಬೇಕೋ ಅವರೇ‌ ನಮಗೆ ಮರಳಿ ಹೆದರಿಸುವಂತಾಗಿದ್ದಾರೆ.
ನಾ ಇಷ್ಟು ವೀಕ, ಹಾಗೂ ದುರ್ಬಲ,ಅಥವಾ ದೌರ್ಬಲ್ಯಕ್ಕೆ ಒಳಗಾಗಬಾರದಾಗಿತ್ತು ಅಂತ ನಿಮಗೆ ಅನಿಸೋಲ್ಲವೇನರಿ.ಅಥವಾ ಒಳ್ಳೆಯತನಕೆ ಬೆಲೆಯೇ ಇಲ್ಲವೆ ಈ ಕಾಲದಲ್ಲಿ... ತಿಳಿಯದಾಗಿದೆ.

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
siddaram honnkal
Quote by siddaram honnkal - (ಹೊನ್ಕಲ್ ರ ಹೊನ್ನುಡಿ )

ಒಬ್ಬರು ಎಷ್ಟು ಒಳ್ಳೆಯವರು ಅಂದುಕೊಂಡರು ಸಹ ಅವರ ಬಗ್ಗೆ ಅತಿಯಾದ ನಂಬಿಕೆ ಪ್ರೀತಿ ವಿಶ್ವಾಸ ಬೇಡ.ಯಾರು ಯಾವಾಗ ಹೇಗೆ ಬದಲಾಗುವರೋ ಬಲ್ಲವರಾರು? ಇಂದು ಆತ್ಮೀಯ ಇದ್ದವರು ಸಹ ನಂತರ ಶತ್ರು ಆಗಬಹುದು.ಆಗ ಪಶ್ಚಾತ್ತಾಪ ಪಡುವಂತಾಗಬಾರದು.ಅಲ್ಲವೆ?

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
siddaram honnkal
Quote by siddaram honnkal - ಹೊನ್ಕಲ್ ರ ಹೊನ್ನುಡಿ

ಕೆಲವರಿಗೆ ನಾವೆನೆಂದು ನಮ್ಮ ಮನದ ಅಂತಿಮ ಅಪೇಕ್ಷೆ ಏನೆಂದು ಅರ್ಥವೇ ಆಗುವುದಿಲ್ಲ ಎಂದು ಅನಿಸುತ್ತದೆ
ಅವರಿಗೂ ಸಹ ಹಾಗೇ ಅನಿಸಬಹುದೇನೋ.. ಕೊನೆವರೆಗೂ ನಮ್ಮ ಮನದಲ್ಲಿ ಏನಿದೆ ಅಂತ ಇವರು ಅರ್ಥವೇ ಮಾಡಿಕೊಳ್ಳಲಿಲ್ಲ ಅಂತ.
ಅಷ್ಟರಲ್ಲಿ ಕಾಲ ಯಾರಿಗೂ ಕಾಯದೇ ಕಳೆದು ಹೋಗುತ್ತದೆ.ಇದೇ ಬದುಕಾಗಿರಬಹುದು!

ಸಿದ್ಧರಾಮ ಹೊನ್ಕಲ್  - Made using Quotes Creator App, Post Maker App
S
siddaram honnkal
Quote by siddaram honnkal - *ಹೊನ್ಕಲ್ ರ ಹೊನ್ನುಡಿ*

ನೀವು ಸದಾ ಸಂತೋಷ ಹಾಗೂ ನೆಮ್ಮದಿಯಿಂದ ಇರಬೇಕಾದರೆ ನಿಮ್ಮನ್ನು ಬಲ್ಲವರು ಆಡಿದ ನಿಮ್ಮ ಬಗೆಗಿನ ಒಳ್ಳೆಯ ಮಾತುಗಳನ್ನು ಮಾತ್ರ ನೆನಪಿಟ್ಟುಕೊಂಡಿರಬೇಕು.
ಅಸಹನೆಯ, ಸ್ಯಾಡಿಸ್ಟ ಮನೋಭಾವದ ಜನ ಆಡುವ ಮಾತುಗಳು ಅವರ ಸಣ್ಣತನದ ಪ್ರತಿರೂಪವಾಗಿರುತ್ತವೆ.ಆ ಕಾರಣ ನಿಮ್ಮ ವ್ಯಕ್ತಿತ್ವಕ್ಕೆ ಹೊಂದದ ಅಂಥವರ ಮಾತುಗಳು ಗಣನೆಗೆ ತೆಗೆದುಕೊಳ್ಳದೇ ಆನೆ ನಡೆದದ್ದೇ ದಾರಿ ಅಂತ ಸುಮ್ಮನೆ ನಿಮ್ಮ ನೈತಿಕತೆಗೆ ಬದ್ಧವಾಗಿ ನಿಮಗೆ ಸರಿಕಂಡ ದಾರಿಯಲ್ಲಿ ನೀವು ಸಾಗಿ ಬಿಡಬೇಕು.ಕೊಳೆತ ಹಣ್ಣಿನಂತಹವು ಕಳಚಿ ಬೀಳುತ್ತವೆ. ಫಲವತ್ತಾದ ಸಾವಿರಾರು ಹೊಸ ಮನಸುಗಳು ನಿಮ್ಮ ಜೊತೆಯಾಗುತ್ತವೆ. ಪ್ರಪಂಚ ವಿಶಾಲವಾಗಿದೆ ಮತ್ತು ಸುಂದರ ಮನಸುಗಳಿಂದ ಕೂಡಿದೆ. ಕಂಡುಕೋಬೇಕಷ್ಟೇ.😊🌹🙏

*ಸಿದ್ಧರಾಮ ಹೊನ್ಕಲ್* - Made using Quotes Creator App, Post Maker App
Discover

Explore Categories

Jump into curated quote collections for every mood, moment, and celebration.