S
Featured Quote Siddarama Honnkal 2024-04-15T14:32:57+0000
Quote by Siddarama Honnkal - *ಗಜಲ್*

ಯಾರು ಸುಖಿನೋ ಈ ವ್ಯಾಮೋಹದ ಜಗದಲ್ಲಿ ಕೇಳು ಗೆಳೆಯ
ಎಲ್ಲರಲ್ಲೂ ಒಂದೊಂದು ನೋವಿನ ಕಥೆ ಮನದಲ್ಲಿ ಕೇಳು ಗೆಳೆಯ

ಒಂದಿದ್ದರೆ ಇನ್ನೊಂದರ ಕೊರತೆ ಎಲ್ಲರಿಗೂ ಇಲ್ಲಿ ಸಹಜಾತಿ ಸಹಜ
ಪೂರ್ಣಸುಖಿ ನಾನು ಅನ್ನುವನಿಲ್ಲಿಲ್ಲ ಎಲ್ಲದರಲ್ಲಿ ಕೇಳು ಗೆಳೆಯ

ಒಂದುಕೊಟ್ಟು ಇನ್ನೊಂದು ಕಸಿಯುವವನ ಆಟ ಮಾಟವ ನೋಡು 
ಎಲ್ಲ ಕೊಟ್ಟರೆ ತನ್ನಾಟ ನೋಡುವವರಾರೆಂಬ! ಚಿಂತೆಯಲ್ಲಿ ಕೇಳು ಗೆಳೆಯ

ಆಡಿಸಿ ನೋಡುವವನ ಆಟ ಪಾಠ ಬಲ್ಲವರು ಬಹಳಿಲ್ಲ ಇಲ್ಲಿ
ಕೊಟ್ಟರೂ ಕೊಡದಿದ್ದರೂ ಫರಕೇನಿಲ್ಲ ಅನ್ನುವರುಂಟು ಬದುಕಲ್ಲಿ ಕೇಳು ಗೆಳೆಯ

ಹೊನ್ನಸಿರಿ' ಇದ್ದರೂ ಇಲ್ಲದಿದ್ದರೂ ಈ ಜಗದಾಟ ನಡಿತಾ ಇರ್ತದೆ
ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದು:ಖವಿದೆಯಿಲ್ಲಿ ಕೇಳು ಗೆಳೆಯ

*ಸಿದ್ಧರಾಮ ಹೊನ್ಕಲ್* - Made using Quotes Creator App, Post Maker App